G20ಯ ದೆಹಲಿ ಘೋಷಣೆಯು “ಧನಾತ್ಮಕ ಸಂದೇಶ ರವಾನಿಸಿದೆ : ದೆಹಲಿ ಜಿ20 ಶೃಂಗಸಭೆ ಬಗ್ಗೆ ಚೀನಾದ ಮೊದಲ ಪ್ರತಿಕ್ರಿಯೆ

ಬೀಜಿಂಗ್: ಚೀನಾವು ದೆಹಲಿ ಜಿ20 ಶೃಂಗಸಭೆ ಬಗ್ಗೆ ಕೊನೆಗೂ ಮೌನ ಮುರಿದಿದೆ. ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ವಿಶ್ವ ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡಲು ಪ್ರಭಾವಿ ಗುಂಪುಗಳು “ಒಟ್ಟಿಗೆ ಕೆಲಸ ಮಾಡುತ್ತಿವೆ” ಎಂಬುದಕ್ಕೆ ಜಿ20 ಸದಸ್ಯ ರಾಷ್ಟ್ರಗಳು ಅಂಗೀಕರಿಸಿದ ಘೋಷಣೆಯು “ಸಕಾರಾತ್ಮಕ ಸಂಕೇತ” ರವಾನಿಸಿದೆ ಎಂದು ಚೀನಾ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯವರು “ಜಾಗತಿಕ ವಿಶ್ವಾಸ ಕೊರತೆ”ಯನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದು, ಹಾಗೂ ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಮ್ಮತದ ಘೋಷಣೆಯನ್ನು ತನ್ನ ಅಧ್ಯಕ್ಷತೆಯಲ್ಲಿ ನಡೆದ G20 ಶೃಂಗಸಭೆ ಅಂಗೀಕರಿಸಿದ ನಂತರ ಭಾರತವು ಶನಿವಾರ ದೊಡ್ಡ ರಾಜತಾಂತ್ರಿಕ ಗೆಲುವನ್ನು ಸಾಧಿಸಿದೆ.
ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಜಿ20 ಶೃಂಗಸಭೆಯ ಫಲಿತಾಂಶದ ಕುರಿತು ತನ್ನ ಮೊದಲ ಕಾಮೆಂಟ್‌ನಲ್ಲಿ, ಚೀನಾದ ವಿದೇಶಾಂಗ ಸಚಿವಾಲಯವು ಅದರ ಫಲಿತಾಂಶದ ಬಗ್ಗೆ ಹೆಚ್ಚು ಮಾತನಾಡಿದೆ. ಶೃಂಗಸಭೆಯು ನಾಯಕರ ಘೋಷಣೆಯನ್ನು ಅಂಗೀಕರಿಸಿತು, ಇದು ಚೀನಾದ ಪ್ರತಿಪಾದನೆಯನ್ನು ಪ್ರತಿಬಿಂಬಿಸುತ್ತದೆ ಮತ್ತು G20 ಪಾಲುದಾರಿಕೆಯ ಮೂಲಕ ಕಾಂಕ್ರೀಟ್ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತದೆ, ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ವಿಶ್ವ ಆರ್ಥಿಕ ಚೇತರಿಕೆ ಮತ್ತು ಜಾಗತಿಕ ಅಭಿವೃದ್ಧಿಯನ್ನು ಉತ್ತೇಜಿಸಲು G20 ಒಟ್ಟಾಗಿ ಕೆಲಸ ಮಾಡುವ ಧನಾತ್ಮಕ ಸಂಕೇತವನ್ನು ಕಳುಹಿಸಿದೆ” ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.

ಶೃಂಗಸಭೆಯ ಫಲಿತಾಂಶದ ಕುರಿತು ಅವರ ಪ್ರತಿಕ್ರಿಯೆಯನ್ನು ಕೇಳಿದಾಗ, ಮಾವೋ ಅವರು, “ಈ ನವದೆಹಲಿ ಶೃಂಗಸಭೆಯ ತಯಾರಿ ಪ್ರಕ್ರಿಯೆಯಲ್ಲಿ, ಚೀನಾ ರಚನಾತ್ಮಕ ಪಾತ್ರವನ್ನು ವಹಿಸಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಕಾಳಜಿಗೆ ಪ್ರಾಮುಖ್ಯತೆ ತರುವಲ್ಲಿ ಮತ್ತು ಸಾಮಾನ್ಯ ಅಭಿವೃದ್ಧಿ ವಿಚಾರದಲ್ಲಿ ಫಲಪ್ರದ ಫಲಿತಾಂಶಗಳನ್ನು ತರಲು ಶೃಂಗಸಭೆಯನ್ನು ಯಾವಾಗಲೂ ಬೆಂಬಲಿಸುತ್ತದೆ ಎಂದು ಹೇಳಿದರು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಪ್ರತಿನಿಧಿಸಿದ್ದ ಚೀನಾದ ಪ್ರಧಾನಿ ಲಿ ಕಿಯಾಂಗ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
G20 ಹೇಳಿಕೆಯಲ್ಲಿ ರಷ್ಯಾದ ನೇರ ಟೀಕೆಗಳು ಉಲ್ಲೇಖ ಇರದೇ ಇರುವುದನ್ನು ಚೀನಾ ಬೆಂಬಲಿಸುತ್ತದೆಯೇ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮೃದುವಾದ ಭಾಷೆ ಸಹಾಯ ಮಾಡುತ್ತದೆಯೇ ಎಂದು ಕೇಳಿದಾಗ, ಉಕ್ರೇನ್ ವಿಷಯದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಮಾವೊ ಹೇಳಿದರು.
“G20 ನಾಯಕರ ಘೋಷಣೆಯು ಸಮಾಲೋಚನೆಯ ಮೂಲಕ ತಲುಪಿದ ಒಮ್ಮತದ ಫಲಿತಾಂಶವಾಗಿದೆ ಮತ್ತು ಎಲ್ಲಾ ಸದಸ್ಯರ ಸಾಮಾನ್ಯ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಜಿ20 ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕೆ ಪ್ರಧಾನ ವೇದಿಕೆಯಾಗಿದೆಯೇ ಹೊರತು ಭೌಗೋಳಿಕ, ರಾಜಕೀಯ ಮತ್ತು ಭದ್ರತಾ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಲ್ಲ ಎಂದು ನವದೆಹಲಿ ಶೃಂಗಸಭೆಯು ಪುನರುಚ್ಚರಿಸಿದೆ ಎಂದು ಹೇಳಿದರು.

ಉಕ್ರೇನ್ ಬಿಕ್ಕಟ್ಟಿನ ಅಂತಿಮ ಪರಿಹಾರದ ಕೀಲಿಯು ಶೀತಲ ಸಮರದ ಮನಸ್ಥಿತಿಯನ್ನು ತ್ಯಜಿಸುವುದು, ಎಲ್ಲಾ ಕಡೆಯ ಕಾನೂನುಬದ್ಧ ಭದ್ರತಾ ಕಾಳಜಿಗಳಿಗೆ ಪ್ರಾಮುಖ್ಯತೆಯನ್ನು ನೀಡುವುದು ಮತ್ತು ಗೌರವಿಸುವುದು. ಹಾಗೂ ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ರಾಜಕೀಯ ಪರಿಹಾರವನ್ನು ಹುಡುಕುವುದು ಎಂದು ನಾವು ಯಾವಾಗಲೂ ನಂಬುತ್ತೇವೆ. ಉಕ್ರೇನ್ ಬಿಕ್ಕಟ್ಟಿನ ರಾಜಕೀಯ ಇತ್ಯರ್ಥಕ್ಕಾಗಿ ಶಾಂತಿ ಮಾತುಕತೆಗಳನ್ನು ಉತ್ತೇಜಿಸಲು ಮತ್ತು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಚೀನಾ ಬದ್ಧವಾಗಿರುತ್ತದೆ ಎಂದು ವಕ್ತಾರರು ಹೇಳಿದರು.
ಚೀನಾ ಯಾವಾಗಲೂ G20 ಕಾರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಸಕ್ರಿಯವಾಗಿ ಬೆಂಬಲಿಸುತ್ತದೆ. ವಿಶ್ವ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿನ ವಿವಿಧ ಅಪಾಯಗಳು ಮತ್ತು ಸವಾಲುಗಳನ್ನು ಎದುರಿಸಲು ಒಗ್ಗಟ್ಟಾಗಿ ನಿಲ್ಲಲು ಮತ್ತು ಸಹಕರಿಸಲು ಗುಂಪುಗಳಿಗೆ ಇದು ಮುಖ್ಯವಾಗಿದೆ ಎಂದು ಮಾವೋ ಹೇಳಿದರು.

ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ, ಪ್ರಧಾನಿ ಲಿ ಕಿಯಾಂಗ್ ಅವರು ಜಿ20 ಸಹಕಾರದ ಕುರಿತು ಚೀನಾದ ಅಭಿಪ್ರಾಯಗಳು ಮತ್ತು ಪ್ರತಿಪಾದನೆಗಳನ್ನು ವಿವರಿಸಿದರು, ಎಲ್ಲಾ ಪಕ್ಷಗಳು ಒಗ್ಗಟ್ಟಿನ ಮತ್ತು ಸಹಕಾರದ ಮೂಲ ಆಶಯಕ್ಕೆ ಅಂಟಿಕೊಳ್ಳುವಂತೆ ಕರೆ ನೀಡಿದರು, ಶಾಂತಿ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ನಿರ್ವಹಿಸುವುದು ನಮ್ಮ ಕಾಲದ ಅಗತ್ಯ. ಮತ್ತು ವಿಶ್ವ ಆರ್ಥಿಕ ಚೇತರಿಕೆ, ಮುಕ್ತ ಸಹಕಾರ ಮತ್ತು ಜಾಗತಿಕ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪಾಲುದಾರರಾಗಿ ಎಂದು ಅವರು ಕರೆ ನೀಡಿದರು ಎಂದು ಹೇಳಿದರು.
G20 ಸದಸ್ಯ ರಾಷ್ಟ್ರಗಳು ಜಾಗತಿಕ GDP ಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತವೆ, ಜಾಗತಿಕ ವ್ಯಾಪಾರದ 75 ಪ್ರತಿಶತಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟನ್ನು ಪ್ರತಿನಿಧಿಸುತ್ತವೆ.
G20 ಗುಂಪು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ದೇಶಗಳನ್ನು ಒಳಗೊಂಡಿದೆ. ಶನಿವಾರ, ಆಫ್ರಿಕನ್ ಯೂನಿಯನ್ ಅನ್ನು ಜಿ 20ಯ ಕಾಯಂ ಸದಸ್ಯರನ್ನಾಗಿ ಸ್ವೀಕರಿಸಲಾಯಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement