ಎಸ್‌ಬಿಐ ಪ್ರೊಬೇಷನರಿ ಆಫೀಸರ್‌ಗಳ ನೇಮಕಾತಿ : 2000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾವು 2000 ಪ್ರೊಬೇಷನರಿ ಆಫೀಸರ್ ಹುದ್ದೆಗಳನ್ನು ಭರ್ತಿಗೆ ಪ್ರಕಟಣೆ ಹೊರಡಿಸಿದೆ. ಯಾವುದೇ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದೆ.
2000 ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳ ಪೈಕಿ ಎಸ್‌ಸಿ -300, ಎಸ್‌ಟಿ – 150, ಒಬಿಸಿ-540, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ – 200, ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ- 810 ಹುದ್ದೆಗಳನ್ನು ನಿಗದಿ ಪಡಿಸಲಾಗಿದೆ.
ಉದ್ಯೋಗ : ಭಾರತೀಯ ಸ್ಟೇಟ್ ಬ್ಯಾಂಕ್
ಹುದ್ದೆ : ಪ್ರೊಬೇಷನರಿ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ : 2000
ವಿದ್ಯಾರ್ಹತೆ : ಯಾವುದೇ ಪದವಿ ಉತೀರ್ಣ

ವಯೋಮಿತಿ : ದಿನಾಂಕ 01-04-2023 ಕ್ಕೆ ಕನಿಷ್ಠ 21 ವರ್ಷ ಪೂರೈಸುವ, ಗರಿಷ್ಠ 30 ವರ್ಷ ವಯಸ್ಸು ಮೀರದೇ ಇರುವವರು ಅರ್ಜಿ ಸಲ್ಲಿಸಬಹುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಿಕಲ ಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಎಸ್‌ಬಿಐ ಪ್ರೊಬೇಷನರಿ ಆಫೀಸರ್‌ ಹುದ್ದೆಗಳ ನೇಮಕಾತಿಯ ಅಧಿಸೂಚನೆಗಾಗಿ SBI PO Officers recruitment Notification   ಈ ಲಿಂಕ್ಕ್ಲಿಕ್ ಮಾಡಬಹುದು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು   https://ibpsonline.ibps.in/sbipoaug23/ ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಇಂದಿನ ಪ್ರಮುಖ ಸುದ್ದಿ :-   ಆಸ್ಟ್ರೇಲಿಯಾ ವಿರುದ್ಧ ಗೆಲುವು ; ಪಾಕಿಸ್ತಾನ ಹೊರದಬ್ಬಿ ವಿಶ್ವದ ನಂ.1 ತಂಡವಾದ ಭಾರತ; ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲೂ ಅಗ್ರಸ್ಥಾನ ಪಡೆದ ಏಷ್ಯಾದ ಮೊದಲ ತಂಡ ಭಾರತ

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ: 07-09-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-09-2023
ಪ್ರಿಲಿಮ್ಸ್‌ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭ : 2023 ರ ಅಕ್ಟೋಬರ್ 2ನೇ ವಾರ
ಫೇಸ್‌ 1 ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ : 2023 ರ ನವೆಂಬರ್
ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ : 2023 ರ ನವೆಂಬರ್ / ಡಿಸೆಂಬರ್
ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ : 2023 ರ ನವೆಂಬರ್ / ಡಿಸೆಂಬರ್
ಆನ್‌ಲೈನ್‌ ಮುಖ್ಯ ಪರೀಕ್ಷೆ : 2023 ರ ಡಿಸೆಂಬರ್ / 2024 ಜನವರಿ
ಮುಖ್ಯ ಪರೀಕ್ಷೆ ಫಲಿತಾಂಶ : 2023 ರ ಡಿಸೆಂಬರ್ / 2024 ಜನವರಿ
ಫೇಸ್‌-3 ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭ : ಜನವರಿ / ಫೆಬ್ರುವರಿ 2024
ಫೇಸ್‌-3 ಸೈಕೋಮೆಟ್ರಿಕ್ ಟೆಸ್ಟ್‌ : ಜನವರಿ / ಫೆಬ್ರುವರಿ 2024
ಸಂದರ್ಶನ ಮತ್ತು ಗುಂಪು ಚರ್ಚೆ : ಜನವರಿ / ಫೆಬ್ರುವರಿ 2024
ಅಂತಿಮ ಫಲಿತಾಂಶ : ಫೆಬ್ರುವರಿ / ಮಾರ್ಚ್ 2024

 

ಇಂದಿನ ಪ್ರಮುಖ ಸುದ್ದಿ :-   ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನೂನ್‌ ಪಂಜಾಬಿನ ಆಸ್ತಿ ವಶಪಡಿಸಿಕೊಂಡ ಎನ್‌ಐಎ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement