ಪ್ರಧಾನಿ ಮೋದಿ ಪದವಿ ವಿವಾದ : ಅರವಿಂದ ಕೇಜ್ರಿವಾಲ್, ಸಂಜಯ್ ಸಿಂಗ್ ಸಮನ್ಸ್ ರದ್ದತಿಗೆ ಸೆಷನ್ಸ್ ಕೋರ್ಟ್‌ ನಕಾರ

ಅಹಮದಾಬಾದ್‌ : ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಹಾಜರಾಗಲು ತಮಗೆ ನೀಡಲಾದ ಸಮನ್ಸ್‌ಗಳನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷದ (ಎಎಪಿ) ಸಹೋದ್ಯೋಗಿ ಮತ್ತು ಸಂಸದ ಸಂಜಯ ಸಿಂಗ್ ಸಲ್ಲಿಸಿದ ಅರ್ಜಿಗಳನ್ನು ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗಳಿಗೆ ಸಂಬಂಧಿಸಿದಂತೆ ತಮ್ಮ “ವ್ಯಂಗ್ಯ” ಮತ್ತು “ಅವಹೇಳನಕಾರಿ” ಹೇಳಿಕೆಗಳಿಗಾಗಿ ಗುಜರಾತ್ ವಿಶ್ವವಿದ್ಯಾಲಯ ಅಹಮದಾಬಾದ್‌ನಲ್ಲಿ ಎಎಪಿ ನಾಯಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಗುರುವಾರ ಸೆಷನ್ಸ್ ನ್ಯಾಯಾಲಯವು ಸಮನ್ಸ್ ವಿರುದ್ಧದ ಅವರ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ಕೆಳ ನ್ಯಾಯಾಲಯದ ವಿಚಾರಣೆಯ ಆದೇಶ ಸರಿಯಾಗಿದೆ ಎಂದು ಹೇಳಿದೆ.

ಸೆಪ್ಟೆಂಬರ್‌ 23ರಂದು ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಇದಕ್ಕೂ ಮುನ್ನ ಕೇಜ್ರಿವಾಲ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಲಿದ್ದಾರೆ.
ಸೆಪ್ಟೆಂಬರ್ 6 ಮತ್ತು 8 ರಂದು ನಡೆದ ವಿಚಾರಣೆಯಲ್ಲಿ, ಎಎಪಿ ನಾಯಕರ ವಕೀಲರು ವಿಚಾರಣಾ ನ್ಯಾಯಾಲಯದ ಸಮನ್ಸ್ ಆದೇಶ ತಪ್ಪು ಎಂದು ವಾದಿಸಿದರು ಮತ್ತು ಗುಜರಾತ್ ವಿಶ್ವವಿದ್ಯಾಲಯವು ಈ ವಿಷಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ. ಇಬ್ಬರು ನಾಯಕರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಾದಿಸಿದ್ದರು.
ಎಲ್ಲ ಕಕ್ಷಿದಾರರ ವಾದ ಆಲಿಸಿದ ನ್ಯಾಯಾಧೀಶ ಜೆಎಂ ಬ್ರಹ್ಮಭಟ್ ಅವರು ಆದೇಶವನ್ನು ಸೆಪ್ಟೆಂಬರ್ 14ಕ್ಕೆ ಕಾಯ್ದಿರಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡುವ ಮೊದಲು ಎಲ್ಲಾ ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜೆ ಎಂ ಬ್ರಹ್ಮಭಟ್ ಅವರು 21 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಫ್ರಿಡ್ಜ್‌ ಗಳಲ್ಲಿ ಗೋಮಾಂಸ ಪತ್ತೆಯಾದ ನಂತರ 11 ಮನೆಗಳು ನೆಲಸಮ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement