ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ: ಮುಂದಿನ ಹಂತ ‘ಭೂ ಕ್ಷಕೆಯಿಂದ ಬೀಳ್ಕೊಡುಗೆ’

ನವದೆಹಲಿ: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ ಎಲ್1 (Aditya L1) ಬಾಹ್ಯಾಕಾಶ ನೌಕೆಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.
ಗುರುವಾರ ಮಧ್ಯರಾತ್ರಿ 2 ಗಂಟೆಗೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಮತ್ತೊಂದು ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಆದಿತ್ಯ ನೌಕೆ ಈಗ ಭೂಮಿಯಿಂದ 256 ಕಿ.ಮೀ x 121973 ಕಿ.ಮೀ ಎತ್ತರದ ಕಕ್ಷೆಯಲ್ಲಿ ಸುತ್ತುತ್ತಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಭೂಮಿಯ ಪರಿಭ್ರಮಣೆಯಲ್ಲಿರುವ ಆದಿತ್ಯ ಎಲ್‌1 ನೌಕೆಯನ್ನು ಭೂಮಿಯಿಂದ ಲಗ್ರಾಂಜಿಯನ್ ಪಾಯಿಂಟ್‌ 1 (ಎಲ್‌ 1) ಬಿಂದುವಿಗೆ ರವಾನಿಸುವ ಮುಂದಿನ  ಪ್ರಕ್ರಿಯೆಯನ್ನು ಸೆಪ್ಟೆಂಬರ್‌ 19 ರ ಮಧ್ಯರಾತ್ರಿ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಮಾರಿಷಸ್, ಬೆಂಗಳೂರು, ಎಸ್‌ಡಿಎಸ್‌ಸಿ-ಶಾರ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಇಸ್ರೋದ ಗ್ರೌಂಡ್ ಸ್ಟೇಷನ್‌ಗಳು ಈ ಕಾರ್ಯಾಚರಣೆಯ ಸಮಯದಲ್ಲಿ ಉಪಗ್ರಹವನ್ನು ಟ್ರ್ಯಾಕ್ ಮಾಡಿದವು.
ಚಂದ್ರಯಾನ-3 ಯಶಸ್ಸಿನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯನ್ನು ಸೆಪ್ಟೆಂಬರ್‌ 2 ರಂದು ಉಡಾವಣೆ ಮಾಡಿತ್ತು.

ಪ್ರಮುಖ ಸುದ್ದಿ :-   ವೀಡಿಯೊ : ಜೈಪುರ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಸ್ಪೈಸ್‌ಜೆಟ್ ಮಹಿಳಾ ಉದ್ಯೋಗಿ ; ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement