ನಿಫಾ ಮುನ್ನೆಚ್ಚರಿಕೆ: ಕೇರಳಕ್ಕೆ ಅನಗತ್ಯ ಪ್ರವಾಸ ಬೇಡ ಎಂದ ಸರ್ಕಾರದ ಸುತ್ತೋಲೆ

ಬೆಂಗಳೂರು : ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಕೇರಳದ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಾರ್ವಜನಿಕರು ಕೇರಳಕ್ಕೆ ಅನಗತ್ಯ ಪ್ರವಾಸ ಮಾಡಬೇಡಿ ಎಂದು ರಾಜ್ಯ ಸರ್ಕಾರ ಹೇಳಿದೆ.
ಕೇರಳದಲ್ಲಿ ಈಗ ನಿಫಾ ವೈರಸ್ ಭೀತಿ ಹೆಚ್ಚಾಗಿದೆ.ಕೇರಳದಲ್ಲಿ ಸೋಂಕು ಕಾಣಿಸಿಕೊಂಡ ಕೋಯಿಕ್ಕೋಡ್‌ನ 7 ಗ್ರಾಮಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕೋಯಿಕ್ಕೋಡ್ ನಲ್ಲಿ ನಿಫಾ ವೈರಸ್‌ಗೆ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಗ್ರಾಮಗಳ ಜನರ ಓಡಾಟ ನಿರ್ಬಂಧಿಸಿ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇರಳ ರಾಜ್ಯದ ಗಡಿಭಾಗದಲ್ಲಿರುವ ಎಲ್ಲ ಜಿಲ್ಲೆಗಳಿಗೂ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿಯ ಸುತ್ತೋಲೆ ಹೊರಡಿಸಿದೆ. ಕೇರಳಕ್ಕೆ ಅನಗತ್ಯ ಓಡಾಟ ಬೇಡ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ತಿಳಿಸಿದೆ.

ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಗಳು…
ಕೇರಳದ ಸೋಂಕಿತ ಪ್ರದೇಶಕ್ಕೆ ಅನಗತ್ಯ ಪ್ರವಾಸ ಮಾಡದಂತೆ ಎಚ್ಚರಿಕೆ
ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದಲ್ಲಿ ಪರಿಶೀಲನೆಗಾಗಿ ಚೆಕ್ ಪೋಸ್ಟ್ ಗಳ ನಿರ್ಮಾಣ
ಕೇರಳದ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿಫಾ ವೈರಸ್ ಬಗ್ಗೆ ಕಟ್ಟೆಚ್ಚರ ಹಾಗೂ ಜ್ವರ ಪ್ರಕರಣಗಳ ಕುರಿತು ನಿಗಾ ವಹಿಸುವುದು
ನಿಫಾ ಸೋಂಕಿನ ಶಂಕಿತ ಪ್ರಕರಣಗಳ ಕ್ವಾರಂಟೈನ್ ಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ 2 ಬೆಡ್ ಗಳನ್ನು ಕಾಯ್ದಿರಿಸುವುದು
ನಿಫಾ ವೈರಸ್ ಸೋಂಕಿನ ಕುರಿತು ಜನಜಾಗೃತಿ ಮೂಡಿಸುವುದು
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ತರಬೇತಿ ನೀಡುವುದು
ಆಸ್ಪತ್ರೆಗಳಲ್ಲಿ ಔಷಧಗಳು ಹಾಗೂ ಆಕ್ಸಿಜನ್ ಇರುವಂತೆ ನೋಡಿಕೊಳ್ಳುವುದು
ಸ್ಯಾಂಪಲ್ ಸಂಗ್ರಹಕ್ಕಾಗಿ ಪಿಪಿಇ ಕಿಟ್, ಹಾಗೂ ಸ್ಯಾಂಪಲ್ ಸಾಗಾಣೆಗಾಗಿ ಇತರೆ ವ್ಯವಸ್ಥೆ ಇರುವುದಂತೆ ನೋಡಿಕೊಳ್ಳುವುದು
ಶಂಕಿತ ಪ್ರಕರಣ ಇದ್ದರೂ ಸ್ಯಾಂಪಲ್ ಸಂಗ್ರಹಿಸಿ ಎನ್ ಐವಿ ಪುಣೆ ಅಥವಾ ಬೆಂಗಳೂರಿಗೆ ಸಾಗಿಸಲು ಅಗತ್ಯ ಕ್ರಮ ವಹಿಸುವುದು
ಶಂಕಿತ ಸೋಂಕಿತರು ಕಂಡುಬಂದರೆ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನುಸರಿಸುವುದು.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement