ನಟ ಕಮಲ್‌ ಹಾಸನ್‌ ಗೆ ಭರ್ಜರಿ ಯಶಸ್ಸು ತಂದುಕೊಟ್ಟ 36 ವರ್ಷಗಳ ಹಿಂದಿನ ಕ್ಲಾಸಿಕ್‌ ಸಿನೆಮಾ ಈಗ ಮರು ಬಿಡುಗಡೆ

ಭಾರತೀಯ ಚಿತ್ರರಂಗದ ಮೇರು ನಟ ಕಮಲ್‌ ಹಾಸನ್‌ ಅವರು, ಈಗ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ವೃತ್ತಿ ಜೀವನದ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾದ ಪುಷ್ಪಕ ವಿಮಾನ ಸಿನಿಮಾ ಈಗ ಮರು ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಕಮಲ್‌ ಹಾಸನ್‌ ಒಡೆತನದ ರಾಜ್ ಕಮಲ್‌ ಫಿಲಂಸ್‌ ಇಂಟರ್‌ನ್ಯಾಷನಲ್‌ ಹಂಚಿಕೊಂಡಿದೆ.
ಸಿಂಗೀತಂ ಶ್ರೀನಿವಾಸ್‌ ರಾವ್‌ ನಿರ್ದೇಶನದಲ್ಲಿ 1987ರಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾ ಕನ್ನಡದಲ್ಲಿ ʼಪುಷ್ಪಕ ವಿಮಾನʼ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ತಮಿಳಿನಲ್ಲಿ ʼಪೆಸುಮ್‌ ಪದಂʼ ಹೆಸರಿನಲ್ಲಿ ಬಿಡುಗಡೆಯಾದರೆ, ಹಿಂದಿಯಲ್ಲಿ ʼಪುಷ್ಪಕ್‌ʼ, ತೆಲುಗಿನಲ್ಲಿ ʼಪುಷ್ಪಕ ವಿಮಾನಂʼ ಹೆಸರಿನಲ್ಲಿ ಬಿಡುಗಡೆ ಆಗಿತ್ತು. ಈಗ ಅದೇ ಸಿನಿಮಾಕ್ಕೆ ಮತ್ತಷ್ಟು ಆಧುನಿಕತೆಯ ಸ್ಪರ್ಷ ನೀಡಿ ಮರು ಬಿಡುಗಡೆ ಮಾಡಲು ಕಮಲ್‌ ಹಾಸನ್‌ ನಿರ್ಧರಿಸಿದ್ದಾರೆ.

35 ಲಕ್ಷ ಬಜೆಟ್‌ನಲ್ಲಿ ನಿರ್ಮಾಣ
1987ರಲ್ಲಿ ತೆರೆಗೆ ಬಂದಿದ್ದ ಪುಷ್ಪಕ ವಿಮಾನ ಸಿನಿಮಾ ಆ ಕಾಲದಲ್ಲಿ 35 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಚಿತ್ರದ ಶೂಟಿಂಗ್‌ನ ಬಹುಪಾಲು ಬೆಂಗಳೂರಿನಲ್ಲಿಯೇ ನಡೆದಿತ್ತು ಎಂಬುದು ಮತ್ತೊಂದು ವಿಶೇಷ. ಬೆಂಗಳೂರಿನ ವಿನ್ಸರ್‌ ಮ್ಯಾನರ್ ಹೊಟೇಲ್‌ನಲ್ಲಿ ಚಿತ್ರೀಕರಣ ನಡೆದಿತ್ತು. ಈ ಚಿತ್ರಕ್ಕೆ ಎಲ್ಲಾ ಭಾಷೆಯಲ್ಲೂ ಅದ್ಭುತ ಯಶಸ್ಸು ಸಿಕ್ಕಿತ್ತು.

ನಿರ್ದೇಶನದ ಜತೆಗೆ ನಿರ್ಮಾಣ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಸಿಂಗೀತಂ ಶ್ರೀನಿವಾಸ ರಾವ್ ಹೊತ್ತಿದ್ದರು.‌ ಬಿ.ಸಿ ಗೌರಿಶಂಕರ ಛಾಯಾಗ್ರಹಣ ಈ ಚಿತ್ರಕ್ಕಿತ್ತು. ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಈ ಸಿನಿಮಾ, ಭಾರತದ ಮೊದಲ ಪೂರ್ಣ ಪ್ರಮಾಣ ಮೂಕಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
.

ಪ್ರಮುಖ ಸುದ್ದಿ :-   ಕ್ರಿಕೆಟರ್‌ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾ ವಿಚ್ಛೇದನ ಈಗ ಅಧಿಕೃತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement