ಬೈಕ್ ಸವಾರ ದುಪಟ್ಟಾ ಎಳೆದ ನಂತರ ಸೈಕಲ್‌ನಿಂದ ಬಿದ್ದ ಬಾಲಕಿ : ಮತ್ತೊಂದು ಬೈಕ್‌ ಡಿಕ್ಕಿ ಹೊಡೆದು ಸಾವು | ವೀಡಿಯೊ

ಅಂಬೇಡ್ಕರ ನಗರ (ಉತ್ತರ ಪ್ರದೇಶ) : ಕಿಡಿಗೇಡಿಗಳು ಕಿರುಕುಳ ನೀಡುವ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ, ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತ ಹುಡುಗಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಶಾಲೆಯಿಂದ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ದುಪಟ್ಟಾ ಅವಳ ಎಳೆದಿದ್ದರಿಂದ ಅಪಘಾತ ಸಂಭವಿಸಿ ಅವಳು ಮೃತಪಟ್ಟ ಘಟನೆ ನಡೆದಿದೆ.
ದುಷ್ಕರ್ಮಿಗಳು ಆಕೆಯ ದಪ್ಪಟ್ಟಾ ಎಳೆದಿದ್ದರಿಂದ ಬಾಲಕಿ ತನ್ನ ಸಮತೋಲನವನ್ನು ಕಳೆದುಕೊಂಡು ನೆಲಕ್ಕೆ ಬಿದ್ದಳು ಮತ್ತು ನಂತರ ಹಿಂದಿನಿಂದ ಬಂದ ಮತ್ತೊಂದು ಮೋಟಾರ್ ಸೈಕಲ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಶಾಲೆಯಿಂದ ಹಿಂತಿರುಗಿ ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕಿಯ ದುಷ್ಕರ್ಮಿಗಳು ದುಪ್ಪಟ್ಟಾ ಎಳೆಯಲು ಯತ್ನಿಸಿ ತೊಂದರೆಗೀಡಾಗಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುತ್ತಿದೆ. ದುಪ್ಪಟ್ಟಾ ಎಳೆದ ಮೇಲೆ, ಬಾಲಕಿ ತನ್ನ ಬ್ಯಾಲೆನ್ಸ್‌ ಕಳೆದುಕೊಂಡಳು ಮತ್ತು ಸೈಕಲ್‌ ನಿಂದ ಬಿದ್ದಳು. ಹಿಂದಿನಿಂದ ಬಂದ ವಾಹನ ಚಾಲಕ ಸಮಯಕ್ಕೆ ಸರಿಯಾಗಿ ವಾಹನವನ್ನು ಬ್ಯಾಲೆನ್ಸ್ ಮಾಡಲು ವಿಫಲವಾಗಿ ಬಾಲಕಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಪೋಪ್‌ ಫ್ರಾನ್ಸಿಸ್‌ ನಿಧನಕ್ಕೆ ಭಾರತದಲ್ಲಿ ಮೂರು ದಿನ ಶೋಕಾಚರಣೆ

ಪೊಲೀಸರ ಪ್ರಕಾರ, ಆಕೆಗೆ ಡಿಕ್ಕಿ ಹೊಡೆದ ಬೈಕ್‌ನಲ್ಲಿದ್ದ ವ್ಯಕ್ತಿ ಕೂಡ ಅವಳ ದುಪ್ಪಟ್ಟಾ ಎಳೆದ ಇಬ್ಬರು ಸಹಚರರಲ್ಲಿ ಒಬ್ಬನಾಗಿದ್ದ.
ಮೃತಳ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಎಲ್ಲಾ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಶುಕ್ರವಾರ, ಸಂತ್ರಸ್ತೆ ಶಾಲೆಯಿಂದ ಮಧ್ಯಾಹ್ನ 3:30 ರ ಸುಮಾರಿಗೆ ಮನೆಗೆ ಹೋಗುತ್ತಿದ್ದಾಗ ಮೂವರು ಆರೋಪಿಗಳಾದ ಶಹನವಾಜ್, ಅರ್ಬಾಜ್ ಮತ್ತು ಫೈಸಲ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ವರದಿಯ ಪ್ರಕಾರ, ಆರೋಪಿಗಳಲ್ಲಿ ಒಬ್ಬನು ಅಪರಾಧ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳುವಾಗ ಮತ್ತೊಬ್ಬನ ಕಾಲು ಮುರಿದಿದೆ.

ಪೊಲೀಸರು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ರೈಫಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಮತ್ತು ಮೂವರು ಬಂಧಿತ ಆರೋಪಿಗಳ ನಡುವೆ ಘರ್ಷಣೆ ಸಂಭವಿಸಿದೆ. ಬಂಧಿತ ಮೂವರ ಪೈಕಿ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಭಾರೀ ಭದ್ರತೆಯ ನಡುವೆ ಅವರು ಬಾಸ್ಖಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಬೇಡ್ಕರ್ ನಗರ ಪೊಲೀಸರು ತಿಳಿಸಿದ್ದಾರೆ.
ಅಂಬೇಡ್ಕರ್‌ನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಜಿತ್ ಸಿನ್ಹಾ ಮಾತನಾಡಿ, ಇಬ್ಬರು ಆರೋಪಿಗಳಾದ ಶಹಬಾಜ್ ಮತ್ತು ಫೈಸಲ್ ವೈದ್ಯಕೀಯ ಚಿಕಿತ್ಸೆ ವೇಳೆ ಓಡಿಹೋಗಲು ಪ್ರಯತ್ನಿಸಿದರು, ನಂತರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅವರ ಕಾಲಿಗೆ ಗುಂಡು ಹಾರಿಸಲಾಗಿದೆ. ಅಪ್ರಾಪ್ತ ವಯಸ್ಕನಾಗಿರುವ ಮೂರನೇ ಆರೋಪಿ ಓಡುತ್ತಿರುವಾಗ ಕಾಲಿಗೆ ಮೂಳೆ ಮುರಿತವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹೊರಗೆ ಸಿಗು...ಮನೆಗೆ ಹೇಗೆ ಹೋಗ್ತೀಯಾ ನೋಡ್ತೀನಿ': ನ್ಯಾಯಾಲಯದ ಕೋಣೆಯೊಳಗೆ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ನಿವೃತ್ತ ಶಿಕ್ಷಕ...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement