ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕೆನಡಾದ ವಿನ್ನಿಪೆಗ್ ನಗರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎಂದು ಆತನ ಗ್ಯಾಂಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ.
ಪೋಸ್ಟ್‌ನಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಸುಖಾ ದುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್ ಗ್ಯಾಂಗ್‌ಸ್ಟರ್‌ಗಳಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಸುಖದೂಲ್ ಸಿಂಗ್ ವಿದೇಶದಲ್ಲಿದ್ದಾಗಲೂ ಈ ಕೊಲೆಗಳನ್ನು ಯೋಜಿಸಿದ್ದ ಎಂದು ಗ್ಯಾಂಗ್ ಆರೋಪಿಸಿದೆ.
ಸುಖದೂಲ್ ಸಿಂಗ್ ನನ್ನು “ಡ್ರಗ್ ವ್ಯಸನಿ” ಎಂದು ಕರೆದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಆತ ಅನೇಕರ ಜೀವನವನ್ನು ನಾಶಪಡಿಸಿದ್ದಾನೆ ಮತ್ತು ಅಂತಿಮವಾಗಿ “ಆತನ ಪಾಪಗಳಿಗಾಗಿ ಶಿಕ್ಷೆಗೆ ಗುರಿಯಾಗಿದ್ದಾನೆ” ಎಂದು ಹೇಳಿದೆ. ದಾವೀಂದರ್ ಬಾಂಬಿಹಾದ ಸದಸ್ಯ ಸುಖದೂಲ್ ಸಿಂಗ್, ಮತ್ತೊಬ್ಬ ಗ್ಯಾಂಗ್‌ಸ್ಟರ್ ಸಂದೀಪ್ ನಂಗಲ್ ಅಂಬಿಯಾನನ್ನು ಸಹ ಕೊಂದಿದ್ದಾನೆ ಎಂದು ಗ್ಯಾಂಗ್ ಹೇಳಿಕೊಂಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿರುವ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಅಹಮದಾಬಾದ್‌ನಲ್ಲಿ ಜೈಲಿನಲ್ಲಿದ್ದಾನೆ. ಈತ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.
ಸುಖದೂಲ್ ಸಿಂಗ್ ಯಾರು?
ಸುಖದೂಲ್ ಸಿಂಗ್, ಎ-ವರ್ಗದ ಗ್ಯಾಂಗ್‌ಸ್ಟರ್, ಪಂಜಾಬ್‌ನ ಮೊಗಾದಿಂದ ಬಂದವನು ಮತ್ತು ಪಂಜಾಬಿನಿಂದ ಕೆನಡಾಕ್ಕೆ ಪರಾರಿಯಾಗಿದ್ದನು. ಈತ ಖಲಿಸ್ತಾನಿ ಭಯೋತ್ಪಾದಕ ಅರ್ಷದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾನ ಸಹಾಯಕನಾಗಿದ್ದ.
2017 ರಲ್ಲಿ, ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನುಕೆ ಮೇಲೆ ಪಂಜಾಬ್‌ನಲ್ಲಿ 18 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ನಕಲಿ ದಾಖಲೆಗಳ ಮೇಲೆ ಪಾಸ್‌ಪೋರ್ಟ್ ಪಡೆದು ಕೆನಡಾಕ್ಕೆ ಪಲಾಯನ ಮಾಡಿದ್ದ.
ಬ್ರಿಟೀಷ್ ಕ್ಯಾಲಿಫೋರ್ನಿಯಾದ ಸರ್ರೆಯಲ್ಲಿ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಸುಖದೂಲ್ ಸಿಂಗ್ ಹತ್ಯೆ ನಡೆದಿದೆ. ಭಾರತದಲ್ಲಿ ಬೇಕಾಗಿದ್ದ ನಿಜ್ಜರ್‌ನನ್ನು ಜೂನ್ ತಿಂಗಳಲ್ಲಿ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ