ನವದೆಹಲಿ: ಭಾರತವು ಗುರುವಾರ ಕೆನಡಾದ ನಾಗರಿಕರಿಗೆ ವೀಸಾ ನೀಡುವಿಕೆಯನ್ನು “ಮುಂದಿನ ಸೂಚನೆಯವರೆಗೆ” ಸ್ಥಗಿತಗೊಳಿಸಿದೆ. ಕೆನಡಾದ ಪ್ರಜೆಗಳ ವೀಸಾ ಅರ್ಜಿಗಳ ಪ್ರಾಥಮಿಕ ಪರಿಶೀಲನೆಗಾಗಿ ನೇಮಕಗೊಂಡ ಖಾಸಗಿ ಏಜೆನ್ಸಿಯಾದ BLS ಇಂಟರ್‌ನ್ಯಾಶನಲ್‌ನ ಸೂಚನೆಯು “ಕಾರ್ಯಾಚರಣೆಯ ಕಾರಣಗಳಿಂದಾಗಿ… ಮುಂದಿನ ಸೂಚನೆ ಬರುವವರೆಗೆ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.
ಖಲಿಸ್ತಾನ್ ಪರ ಸಿಖ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನವದೆಹಲಿಯ ಏಜೆಂಟರ ಸಂಬಂಧವಿದೆ ಎಂಬ ಕೆನಡಾದ ಹೇಳಿಕೆಯ ನಂತರ ಭಾರತ ಮತ್ತು ಕೆನಡಾದ ಮಧ್ಯೆ ಅಂತಾರಾಷ್ಟ್ರೀಯ ಸಂಬಂಧ ಹಳಸಿದ ನಂತರ ಈ ಬೆಳವಣಿಗೆ ನಡೆದಿದೆ. ಕೆನಡಾದ ಹೇಳಿಕೆಯ ಮೂರು ದಿನಗಳ ನಂತರ ಈ ಬೆಳವಣಿಗೆಗಳು ನಡೆದಿದೆ. ಭಾರತ ಸರ್ಕಾರವು ಕೆನಡಾದ ಆರೋಪವನ್ನು “ಅಸಂಬದ್ಧ” ಮತ್ತು “ಪ್ರಚೋದಿತ” ಎಂದು ಸಾರಾಸಗಟಾಗಿ ತಿರಸ್ಕರಿಸಿದೆ.
ಭಾರತದಲ್ಲಿನ ಆನ್‌ಲೈನ್ ವೀಸಾ ಅರ್ಜಿ ಕೇಂದ್ರವಾದ ಬಿಎಲ್ಎಸ್ ಇಂಟರ್ ನ್ಯಾಷನಲ್ ಸೂಚನೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದು, 21 ಸೆಪ್ಟೆಂಬರ್ 2023 ರಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆ ತನಕ, ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.
ಎರಡು ರಾಷ್ಟ್ರಗಳು ಪರಸ್ಪರ ರಾಜತಾಂತ್ರಿಕ ಉನ್ನತ ಅಧಿಕಾರಿಯನ್ನು ಹೊರಹಾಕಿದರು. ಹಾಗೂ ಉಭಯ ರಾಷ್ಟ್ರಗಳು ಪ್ರಯಾಣ ಸಲಹೆಗಳನ್ನು ಅಪ್‌ಡೇಟ್
ಮಾಡಿದವು.
ಕೆನಡಾ ಈ ವಾರ ತನ್ನ ನಾಗರಿಕರಿಗೆ ಭಾರತಕ್ಕೆ ಪ್ರಯಾಣದ ಸಲಹೆಯನ್ನು ನವೀಕರಿಸಿದೆ ಮತ್ತು ಅದು ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಬುಧವಾರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಸ್ವಲ್ಪ ಸಮಯದ ನಂತರ, ಭಾರತವು ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ಮತ್ತು ಕೆನಡಾಕ್ಕೆ ಪ್ರಯಾಣ ಮಾಡಲು ಯೋಜಿಸುತ್ತಿರುವವರಿಗೆ ಪ್ರಯಾಣ ಸಲಹೆ ನವೀಕರಿಸಿದೆ. ಭಾರತ ವಿರೋಧಿ ಚಟುವಟಿಕೆಗಳ ದೃಷ್ಟಿಯಿಂದ “ಅತ್ಯಂತ ಜಾಗರೂಕರಾಗಿ”ರುವಂತೆ ಸೂಚಿಸಿದೆ.
ಈ ತಿಂಗಳು ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಕೆನಡಾದ ಜಸ್ಟಿನ್ ಟ್ರುಡೊ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಂಭಾಷಣೆಯ ನಂತರ ಭಾರತ-ಕೆನಡಾ ಸಂಬಂಧಗಳು ಉದ್ವಿಗ್ನಗೊಂಡಿತು. ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸುವ ಬಗ್ಗೆ ಭಾರತದ ಬಲವಾದ ಕಳವಳವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ