ಟಿ-20 ಕ್ರಿಕೆಟ್‌: ರಾಜ್ಯ ಮಹಿಳಾ (ಸಂಭಾವ್ಯ) ತಂಡಕ್ಕೆ ಹುಬ್ಬಳ್ಳಿಯ ಇಬ್ಬರು ಸೇರಿ 26 ಆಟಗಾರ್ತಿಯರ ಆಯ್ಕೆ

ಹುಬ್ಬಳ್ಳಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ( ಬಿಸಿಸಿಐ) 2023-24ನೇ ಸಾಲಿನ ಸೀನಿಯರ್ ಮಹಿಳಾ ಟಿ-20 ಪಂದ್ಯಾವಳಿಗೆ ರಾಜ್ಯ ತಂಡಕ್ಕೆ 26 ಆಟಗಾರ್ತಿಯರ (ಸಂಭವನೀಯ) ತಂಡವನ್ನು ಶುಕ್ರವಾರ ಕರ್ನಾಟಕ ರಾಜ್ಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಈ ತಂಡಕ್ಕೆ ಹುಬ್ಬಳ್ಳಿಯ ಪುಷ್ಪಾ ಕಿರೇಸೂರ ಮತ್ತು ತನಿಷಾ ಕಾಮತ್ ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿಯಿಂದ ಪುಷ್ಟಾ, ತನಿಷಾ ಹೊರತುಪಡಿಸಿ ಚಿಕ್ಕಮಗಳೂರು, ಮೈಸೂರು ಮತ್ತು ಶಿವಮೊಗ್ಗದಿಂದ ತಲಾ ಒಬ್ಬರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದವರು ಬೆಂಗಳೂರಿನವರಾಗಿದ್ದಾರೆ.
ಈ ಮೊದಲು ಕೆಎಸ್ ಸಿಎ ತಲಾ 12 ಆಟಗಾರ್ತಿಯರ ನಾಲ್ಕು ತಂಡವನ್ನು ಆಯ್ಕೆ ಮಾಡಿ ಅಲ್ಲಿನ ಮೂರು ಪಂದ್ಯಗಳ ಪ್ರದರ್ಶನ ಆಯೋಜಿಸಿತ್ತು. ಅದರಲ್ಲಿ ಹುಬ್ಬಳ್ಳಿಯ ಮೂವರು ಆಯ್ಕೆಯಾಗಿದ್ದರು. ಪ್ರದರ್ಶನ ಪಂದ್ಯದ ಆಧಾರದ ಮೇಲೆ ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಹುಬ್ಬಳ್ಳಿಯ ಇಬ್ಬರು ಆಯ್ಕೆಯಾಗಿದ್ದಾರೆ. ಪುಷ್ಪಾ ಈ ಹಿಂದೆ ರಾಜ್ಯ ತಂಡ ಪ್ರತಿನಿಧಿಸಿದ್ದರೆ ತನಿಷಾ ಮೊದಲ ಬಾರಿ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿಯ ಪುಷ್ಟಾ, ತನಿಷಾ ಇಬ್ಬರನ್ನು ಬಿಟ್ಟರೆ, ಚಿಕ್ಕಮಗಳೂರು, ಮೈಸೂರು ಮತ್ತು ಶಿವಮೊಗ್ಗದ ತಲಾ ಒಬ್ಬರು ಈ ತಂಡದಲ್ಲಿ ಸ್ಥಾನ ಪಡೆದಿದ್ದು ಉಳಿದವರೆಲ್ಲಾ ಬೆಂಗಳೂರಿನವರಾಗಿದ್ದಾರೆ.
ಇತ್ತೀಚೆಗೆ ಕೆಎಸ್ ಸಿಎ ತಲಾ 12 ಆಟಗಾರ್ತಿಯರ ನಾಲ್ಕು ತಂಡವನ್ನು ಆಯ್ಕೆ ಮಾಡಿ ಅಲ್ಲಿನ ಮೂರು ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ರಾಷ್ಟ್ರೀಯ ಪಂದ್ಯಾವಳಿಗೆ ತಂಡ ಪ್ರಕಟಿಸಿದ್ದಾರೆ.ಆ ಪಂದ್ಯಾವಳಿಗೆ ಆಯ್ಕೆಯಾದ ಹುಬ್ಬಳ್ಳಿಯ ಮೂವರಲ್ಲಿ ಇಬ್ಬರು ಅಂತಿಮ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪುಷ್ಪಾ ಈ ಹಿಂದೆ ರಾಜ್ಯ ತಂಡ ಪ್ರತಿನಿಧಿಸಿದ್ದರೆ ತನಿಷಾ ಮೊದಲ ಬಾರಿ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ವೇದಾ ಕೃಷ್ಣಮೂರ್ತಿ, ಶ್ರೇಯಾಂಕಾ ಪಾಟೀಲ, ದಿವ್ಯಾ ಜ್ಞಾನಾನಂದ, ಪ್ರತ್ಯುಷಾ ಕುಮಾರ, ಪ್ರತ್ಯುಷಾ ಸಿ, ವೃಂದಾ ದಿನೇಶ, ಸಹನಾ ಪವಾರ, ಚಂದು ವಿ, ಆದಿತಿ ರಾಜೇಶ, ಚಾಂದನಿ ಕೃಷ್ಣಮೂರ್ತಿ, ರಾಮೇಶ್ವರಿ ಗಾಯಕವಾಡ, ಪುಷ್ಪಾ ಕಿರೇಸೂರ, ಶಿಶಿರಾ ಗೌಡ, ಪ್ರೇರಣಾ ಜಿ.ಆರ್., ಸೌಮ್ಯಾ ವರ್ಮಾ, ಕ್ರಿಷಿಕಾ ರೆಡ್ಡಿ, ರೋಶಿನಿ ಕಿರಣ, ರೋಹಿತಾ ಚೌಧರಿ, ನಮಿತಾ ಡಿಸೋಜಾ, ತನಿಷಾ ಕಾಮತ್, ಅನನ್ಯ ಹೆಗಡೆ, ಸಲೋನಿ ಪಿ, ಸಂಜನಾ ಬಾಟ್ನಿ, ಚೇತನಾ ಬಿ,ಕಾವ್ಯಾ ಬಿ.ಆರ್,ಹಾಗೂ ಅನಘಾ ಮುರಳಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ ರದ್ದತಿಗೆ ಯಡಿಯೂರಪ್ಪ ಕೋರಿಕೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement