ರೈಲಿನಲ್ಲಿ ಮಹಿಳಾ ಪೋಲೀಸ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಪೊಲೀಸರಿಗೆ ಬೇಕಾಗಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು

ಅಯೋಧ್ಯಾ : ಕಳೆದ ತಿಂಗಳು ರೈಲು ಕಂಪಾರ್ಟ್‌ಮೆಂಟ್‌ನಲ್ಲಿ “ರಕ್ತದ ಮಡುವಿನಲ್ಲಿ” ಬಿದ್ದಿದ್ದ ಮಹಿಳಾ ಪೋಲೀಸ್ ಮೇಲೆ ದಾಳಿ ಮಾಡಿದ ಆರೋಪದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಶುಕ್ರವಾರ ಅಯೋಧ್ಯೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ. ಎನ್‌ಕೌಂಟರ್ ವೇಳೆ ಇತರ ಇಬ್ಬರು ವ್ಯಕ್ತಿಗಳಿಗೆ ಗುಂಡು ತಗುಲಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಮತ್ತು ಲಕ್ನೋ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ತಂಡವು ಶುಕ್ರವಾರ ಇನಾಯತ್ ನಗರ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಆರೋಪಿ ಅನೀಶ್ ಎಂಬಾತ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ. ಆಜಾದ್ ಖಾನ್ ಮತ್ತು ವಿಶಂಭರ ದಯಾಳ ಎಂದು ಗುರುತಿಸಲಾದ ಇತರ ಇಬ್ಬರು ಗಾಯಗೊಂಡಿದ್ದು, ಇವರಲ್ಲಿ ಒಬ್ಬರು ಆಗಸ್ಟ್ 30 ರಂದು ಮಹಿಳಾ ಪೋಲೀಸ್ ಮೇಲಿನ ದಾಳಿಯೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಕಲಂದರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ರತನ್ ಶರ್ಮಾ ಕೂಡ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾರೆ.

ಆಗಸ್ಟ್ 30 ರಂದು ಅಯೋಧ್ಯಾ ನಿಲ್ದಾಣದ ಸರಯು ಎಕ್ಸ್‌ಪ್ರೆಸ್‌ನ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ರೈಲ್ವೆ ಪೊಲೀಸ್ ಅಧಿಕಾರಿಗಳು ಕಂಡುಕೊಂಡರು. ಆಕೆಯ ಮುಖಕ್ಕೆ ಹರಿತವಾದ ಆಯುಧದಿಂದ ದಾಳಿ ನಡೆಸಲಾಯಿತು ಮತ್ತು ಆಕೆಯ ತಲೆಬುರುಡೆಯಲ್ಲಿ ಎರಡು ಕಡೆ ಬಲವಾದ ಗಾಯಗಳಾಗಿತ್ತು. ಆಕೆಯನ್ನು ಲಕ್ನೋದ ಕೆಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಆಕೆಯ ಗುರುತು ಬಹಿರಂಗವಾಗಿಲ್ಲ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

ರೈಲಿನ ಸೀಟಿನ ವಿಚಾರವಾಗಿ ಮಹಿಳಾ ಪೋಲೀಸ್‌ ಹಾಗೂ ಆರೋಪಿ ಮಧ್ಯೆ ಜಗಳವಾಗಿದೆ ಎಂದು ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ. ರೈಲಿನ ಮೇಲಿನ ಬರ್ತ್‌ನಲ್ಲಿ ಆಕೆ ಕುಳಿತಿದ್ದಳು, ಆಗ ದಾಳಿಕೋರರು ಮಾಂಕಾಪುರ ನಿಲ್ದಾಣದಲ್ಲಿ ಅವಳೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದ್ದು, ಆರೋಪಿಗಳು ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅವರು ಅಯೋಧ್ಯೆ ನಿಲ್ದಾಣದಲ್ಲಿ ರೈಲಿನಿಂದ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಕಾನ್‌ಸ್ಟೆಬಲ್ ಸಹೋದರನ ಲಿಖಿತ ದೂರಿನ ಮೇರೆಗೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಕೆಲವು ದಿನಗಳ ನಂತರ, ಸೆಪ್ಟೆಂಬರ್ 4 ರಂದು, ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಅವರು ದಾಳಿಯ ಬಗ್ಗೆ ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಿದ ನಂತರ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡರು. ಅವರು ಮತ್ತು ನ್ಯಾಯಮೂರ್ತಿ ಶ್ರೀವಾಸ್ತವ ಅವರನ್ನೊಳಗೊಂಡ ಪೀಠ ರಚನೆಗೆ ನಿರ್ದೇಶನ ನೀಡಿದರು ಮತ್ತು ಕೇಂದ್ರ ಮತ್ತು ರೈಲ್ವೇ ಪೊಲೀಸ್ ಪಡೆಗೆ (ಆರ್‌ಪಿಎಫ್) ನೋಟಿಸ್ ನೀಡುವಂತೆ ಆದೇಶಿಸಿದರು. ಪ್ರಕರಣದ ತನಿಖೆ ಮುಂದುವರಿದಂತೆ, “ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ” ಎಂದು ಪೀಠವು ಆರ್‌ಪಿಎಫ್‌ಗೆ ಛೀಮಾರಿ ಹಾಕಿತು.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement