ಈ ವರ್ಷದಿಂದ 9, 11ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ

ಬೆಂಗಳೂರು : 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ಕಳೆದ ವರ್ಷ 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸಲಾಗಿತ್ತು. ಈಗ 9 ಮತ್ತು 11ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕಲಿಕಾ ದೃಷ್ಟಿಯಿಂದ ಒಂಬತ್ತನೇ ತರಗತಿ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುತ್ತದೆ.11 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ.
ಸಾಕಷ್ಟು ವಿರೋಧ ನಡುವೆಯೂ ಬೋರ್ಡ್ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ. ಪ್ರಥಮ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಅದೇ ಕಾಲೇಜಿನಲ್ಲಿ ನಡೆಯಲಿದೆ. ಪ್ರಶ್ನೆಪತ್ರಿಕೆಯೂ ಬೋರ್ಡ್‌ನಿಂದಲೇ ಆಗಮಿಸುತ್ತದೆ. ಈ ಪರೀಕ್ಷೆಯಲ್ಲಿ ಫೇಲ್ ಆದರೆ ಮತ್ತೊಂದು ಪೂರಕ ಪರೀಕ್ಷೆ ನಡೆಸಲಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ 2023-24ನೇ ಸಾಲಿನಲ್ಲಿಯೇ ಈ ನಿಯಮ ಜಾರಿ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಾಜ್ಯ ಪಠ್ಯಕ್ರಮ ಅನುಸರಿಸುವ ಎಲ್ಲಾ ಅನುದಾನಿತ, ಸರ್ಕಾರಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಈ ಬಗ್ಗೆ ತಯಾರಿ ನಡೆಸಲುಸೂಚನೆ ನೀಡಿದೆ. ಪ್ರಥಮ ಪಿಯುಸಿ ಪಬ್ಲಿಕ್ ಪರೀಕ್ಷೆ ದ್ವೀತಿಯ ಪಿಯು ಪರೀಕ್ಷೆಗಿಂತ ಭಿನ್ನವಾಗಿದೆ. ಪ್ರಥಮ, ದ್ವೀತಿಯ ಪಿಯು ಪರೀಕ್ಷೆ ಪ್ರಮುಖ ವ್ಯತ್ಯಾಸ ವ್ಯತ್ಯಾಸವೆಂದರೆ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷಾ ಮೌಲ್ಯ ಮಾಪನ ಬೇರೆ ಕಡೆ ನಡೆಯುತ್ತದೆ. ಆದರೆ ಪ್ರಥಮ ಪಿಯು ಪರೀಕ್ಷೆ ಮೌಲ್ಯಮಾಪನ ಆಯಾ ಕಾಲೇಜುಗಳಲ್ಲಿ ನಡೆಯುತ್ತದೆ. 11ನೇ ತರಗತಿ ಮೌಲ್ಯಮಾಪನವನ್ನು ಕಾಲೇಜುಗಳಲ್ಲಿಯೇ ನಿರ್ವಹಿಸುವಂತೆ ಸೂಚಿಸಲಾಗಿದೆ. 11ನೇ ತರಗತಿ ವಿದ್ಯಾರ್ಥಿ ಅನುತ್ತೀರ್ಣರಾದಲ್ಲಿ ಪೂರಕ ಪರೀಕ್ಷೆಯನ್ನು ಆಯಾ ಕಾಲೇಜು ಹಂತದಲ್ಲಿ ನಡೆಸುವಂತೆ ತಿಳಿಸಲಾಗಿದೆ.
ಮಂಡಳಿಯು ಪರೀಕ್ಷೆಯನ್ನು 9ನೇ ತರಗತಿಗೆ ಶಾಲಾ ಹಂತದಲ್ಲಿ ಮತ್ತು 11ನೇ ತರಗತಿಗೆ ಕಾಲೇಜು ಹಂತದಲ್ಲಿ ನಡೆಸಲಿದೆ. ಪ್ರಶ್ನೆಪತ್ರಿಕೆಗಳನ್ನು ಮಂಡಳಿ ವತಿಯಿಂದಲೇ ಸಿದ್ಧಪಡಿಸಲಾಗುತ್ತದೆ.
9ನೇ ತರಗತಿ ಸಂಕಲನಾತ್ಮಕ ಮೌಲ್ಯಾ ಮಾಪನ ಪರೀಕ್ಷೆ ಕಳೆದ ವರ್ಷ ನಡೆದ 5 ಮತ್ತು 8ನೇ ತರಗತಿ ಪರೀಕ್ಷೆ ಮಾದರಿಯಲ್ಲಿಯೇ ನಡೆಯುತ್ತದೆ. ಇಲ್ಲಿ ಪರೀಕ್ಷೆಯನ್ನು ಜಿಲ್ಲಾ ಹಂತದಲ್ಲೇ ಮಾಡಲಾಗುತ್ತದೆ. ಮೌಲ್ಯಮಾಪನವನ್ನು ಆಯಾ ಶಾಲೆಯ ಶಿಕ್ಷಕರೇ ಪರೀಕ್ಷೆ ನಡೆಸುತ್ತಾರೆ, ಮೌಲ್ಯಮಾಪನ ಮಾಡುತ್ತಾರೆ.
ವಾರ್ಷಿಕ ಪರೀಕ್ಷೆಯನ್ನು ಮಂಡಳಿ ವತಿಯಿಂದಲೇ ನಡೆಸುವುದರಿಂದ ಎಲ್ಲ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರಿಶೀಲಿಸುವ ಮೂಲಕ ವಿದ್ಯಾರ್ಥಿಗಳ ಪ್ರಗತಿಯನ್ನು ಬಲವರ್ಧನೆಗೊಳಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement