ವಿಶ್ವದ ವಿಶ್ವವಿದ್ಯಾಲಯ ಶ್ರೇಯಾಂಕ-2024: ಭಾರತದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳ ಪಟ್ಟಿ…

ನವದೆಹಲಿ : ಯುಕೆ ಮೂಲದ ಪ್ರಕಟಣೆಯಾದ ಟೈಮ್ಸ್ ಹೈಯರ್ ಎಜುಕೇಶನ್ (THE) ನಿಯತಕಾಲಿಕವು ಪ್ರಕಟಿಸಿದ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಭಾರತದ ಅತ್ಯುತ್ತಮ ಸಂಸ್ಥೆಯಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತೊಮ್ಮೆ ಹೊರಹೊಮ್ಮಿದೆ.
ಈ ವರ್ಷ ದಾಖಲೆಯ 91 ಭಾರತೀಯ ವಿಶ್ವವಿದ್ಯಾನಿಲಯಗಳು ಶ್ರೇಯಾಂಕದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕಳೆದ ವರ್ಷ ಭಾರತದ 75 ಸಂಸ್ಥೆಗಳು ಮಾತ್ರ ಶ್ರೇಯಾಂಕದಲ್ಲಿ ಸೇರ್ಪಡೆಗೊಂಡಿದ್ದವು.
ಕಳೆದ ವರ್ಷದ ತನ್ನ ಶ್ರೇಯಾಂಕ ಸುಧಾರಿಸಿಕೊಂಡ, ಭಾರತವು ಈಗ 2024 ರ ವಿಶ್ವ ವಿಶ್ವವಿದ್ಯಾಲಯದ ಶ್ರೇಯಾಂಕದಲ್ಲಿ ನಾಲ್ಕನೇ ಅತ್ಯುತ್ತಮ ಪ್ರತಿನಿಧಿಸುವ ರಾಷ್ಟ್ರವಾಗಿದೆ. ಕಳೆದ ವರ್ಷ ಭಾರತ ಆರನೇ ಸ್ಥಾನದಲ್ಲಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯು 2017 ರಿಂದ ಮೊದಲ ಬಾರಿಗೆ ಜಾಗತಿಕ 250 ರ್ಯಾಂಕ್‌ಗೆ ಮರಳಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಂತರ, ಭಾರತದ ಮುಂದಿನ ಅತ್ಯುತ್ತಮ ಸಂಸ್ಥೆಗಳೆಂದರೆ ಅಣ್ಣಾ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಶೂಲಿನಿ ಯೂನಿವರ್ಸಿಟಿ ಆಫ್ ಬಯೋಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಸೈನ್ಸಸ್. ಈ ಎಲ್ಲಾ ವಿಶ್ವವಿದ್ಯಾಲಯಗಳು 501-600 ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿವೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಕಳೆದ ವರ್ಷ 801-1000 ಬ್ಯಾಂಡ್‌ನಿಂದ 601-800 ಕ್ಕೆ ಏರಿತು. ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯವು ಕಳೆದ ವರ್ಷ 801-1000 ಬ್ಯಾಂಡ್‌ನಿಂದ 601-800 ಬ್ಯಾಂಡ್‌ಗೆ ಏರಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗುವಾಹತಿ (ಐಐಟಿ ಗುವಾಹತಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್) ಧನ್‌ಬಾದ್ ವಿಶ್ವದ ಅಗ್ರ 800 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ. ಈ ಸಂಸ್ಥೆಯು ತಮ್ಮ ಶ್ರೇಯಾಂಕಗಳನ್ನು 1001-1200 ಬ್ಯಾಂಡ್‌ನಿಂದ 601-800 ಕ್ಕೆ ಹೆಚ್ಚಿಸಿಕೊಂಡಿವೆ.
ಪಟ್ಟಿಯಲ್ಲಿ ಮೊದಲ ಬಾರಿಗೆ ಪ್ರವೇಶ ಮಾಡುವುದರ ಮೂಲಕ, ಜೈಪುರದ ಮಾಳವೀಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 601-800 ಬ್ಯಾಂಡ್‌ ನಲ್ಲಿ ಸ್ಥಾನ ಪಡೆದಿದೆ.
ಏತನ್ಮಧ್ಯೆ, ಹಲವಾರು ಉನ್ನತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು) ಸತತ ನಾಲ್ಕನೇ ವರ್ಷ ಟೈಮ್ಸ್ ಹೈಯರ್ ಎಜುಕೇಶನ್ (THE) ನಿಯತಕಾಲಿಕದ ಶ್ರೇಯಾಂಕಗಳನ್ನು ಬಹಿಷ್ಕರಿಸಿದ್ದಾರೆ. ಈ ಸಂಸ್ಥೆಗಳು ಶ್ರೇಯಾಂಕಗಳ ಪಾರದರ್ಶಕತೆ ಮತ್ತು ಮಾನದಂಡಗಳ ಮೇಲೆ ಅನುಮಾನ ವ್ಯಕ್ತಪಡಿಸಿವೆ. ಈ ಸಂಸ್ಥೆಗಳು ಬಾಂಬೆ, ದೆಹಲಿ, ಗುವಾಹಟಿ, ಕಾನ್ಪುರ, ಖರಗ್‌ಪುರ, ಮದ್ರಾಸ್ ಮತ್ತು ರೂರ್ಕಿಯ ಏಳು ಐಐಟಿಗಳನ್ನು ಒಳಗೊಂಡಿವೆ. ಐಐಟಿ ಗುವಾಹತಿ ಕಳೆದ ವರ್ಷ ಟೈಮ್ಸ್ ಹೈಯರ್ ಎಜುಕೇಶನ್ (THE) ನಿಯತಕಾಲಿಕದ ಶ್ರೇಯಾಂಕಕ್ಕೆ ಸೇರಿತ್ತು.
ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು 2024 ರಲ್ಲಿ ಕಾಣಿಸಿಕೊಂಡಿರುವ ಭಾರತೀಯ

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ವಿಶ್ವವಿದ್ಯಾಲಯಗಳು/ಸಂಸ್ಥೆಗಳ ಪಟ್ಟಿ ಇಲ್ಲಿದೆ
-ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (IISc)
– ಅಣ್ಣಾ ವಿಶ್ವವಿದ್ಯಾಲಯ
-ಜಾಮಿಯಾ ಮಿಲಿಯಾ ಇಸ್ಲಾಮಿಯಾ
-ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ
-ಶೂಲಿನಿ ಯೂನಿವರ್ಸಿಟಿ ಆಫ್ ಬಯೋಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಸೈನ್ಸಸ್
-ಅಳಗಪ್ಪ ವಿಶ್ವವಿದ್ಯಾಲಯ
-ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ
-ಬನಾರಸ್ ಹಿಂದೂ ವಿಶ್ವವಿದ್ಯಾಲಯ
-ಭಾರತೀಯಾರ್ ವಿಶ್ವವಿದ್ಯಾಲಯ
– ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹತಿ
-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್) ಧನ್ಬಾದ್
-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾಟ್ನಾ
-ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಹೈದರಾಬಾದ್
-ಜಾಮಿಯಾ ಹಮ್ದರ್ದ್ ವಿಶ್ವವಿದ್ಯಾಲಯ
-ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
-ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಭುವನೇಶ್ವರ
-ಮಾಳವಿಯಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
-ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕೆಲಾ
-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಲ್ಚಾರ್
-ಪಂಜಾಬ್ ವಿಶ್ವವಿದ್ಯಾಲಯ
-ಸವೀತಾ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನ ಸಂಸ್ಥೆ
-ಥಾಪರ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ
-ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
-ಅಮಿಟಿ ವಿಶ್ವವಿದ್ಯಾಲಯ
-ಅಮೃತ ವಿಶ್ವ ವಿದ್ಯಾಪೀಠ
-ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಪಿಲಾನಿ
– ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
– ದೆಹಲಿ ವಿಶ್ವವಿದ್ಯಾಲಯ
-ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ
-ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಪುಣೆ
-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗಾಂಧಿನಗರ
-ಇಂದ್ರಪ್ರಸ್ಥ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ದೆಹಲಿ
-ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ ಅನಂತಪುರ (ಜೆಎನ್‌ಟಿಯುಎ)
-ಜೇಪೀ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯ
-ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ
ಕಲಾಸಲಿಂಗಂ ಅಕಾಡೆಮಿ ಆಫ್ ರಿಸರ್ಚ್ ಅಂಡ್ ಎಜುಕೇಶನ್
-ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ
-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿರುಚಿರಾಪಳ್ಳಿ
– ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ ಎನರ್ಜಿ ಸ್ಟಡೀಸ್, ಡೆಹ್ರಾಡೂನ್
-ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ
-ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯ
-ಶಿಕ್ಷಾ ‘ಓ’ ಅನುಸಂಧಾನ

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement