ವಿಪಕ್ಷಗಳ ʼಇಂಡಿಯಾ ಮೈತ್ರಿಕೂಟʼಕ್ಕೆ ನಾವು ಬದ್ಧ, ಆದರೆ…: ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಖೈರಾ ಬಂಧನದ ಬಗ್ಗೆ ದೆಹಲಿ ಸಿಎಂ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ತಮ್ಮ ಪಕ್ಷವು ವಿಪಕ್ಷಗಳ ಇಂಡಿಯಾ ( I.N.D.I.A) ಮೈತ್ರಿಕೂಟಕ್ಕೆ ಬದ್ಧವಾಗಿದೆ, ಆದರೆ ಪಂಜಾಬ್‌ನಲ್ಲಿನ ತಮ್ಮ ಸರ್ಕಾರವು ಡ್ರಗ್ ಕಾರ್ಟೆಲ್ ವಿರುದ್ಧ ಕಾರ್ಯನಿರ್ವಹಿಸುವುದನ್ನು ತಡೆಯುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
I.N.D.I.A ಮೈತ್ರಿಕೂಟದ ಘಟಕ ಪಕ್ಷವಾದ ಕಾಂಗ್ರೆಸ್‌ನ ನಾಯಕ ಸುಖಪಾಲ್ ಸಿಂಗ್ ಖೈರಾ ಅವರ ಬಂಧನವನ್ನು ಉಲ್ಲೇಖಿಸಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. “ಪಂಜಾಬ್‌ನ ಭಗವಂತ್ ಮಾನ್ ಸರ್ಕಾರವು ಡ್ರಗ್ಸ್ ಹಾವಳಿಯನ್ನು ಕೊನೆಗೊಳಿಸಲು ಬದ್ಧವಾಗಿದೆ. ಅದರ ವಿರುದ್ಧದ ಹೋರಾಟದಲ್ಲಿ, ಅವರು ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಯಾರನ್ನೂ ಬಿಡಲಾಗುವುದಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.
ಆಮ್‌ ಆದ್ಮಿ ಪಕ್ಷವು ವಿಪಕ್ಷಗಳ I.N.D.I.A ಮೈತ್ರಿಕೂಟಕ್ಕೆ ಬದ್ಧವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಎಎಪಿ ಮೈತ್ರಿಕೂಟದಿಂದ ದೂರವಾಗುವುದಿಲ್ಲ. “ನಿನ್ನೆ, ಪಂಜಾಬ್ ಪೊಲೀಸರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಾಯಕನನ್ನು [ಸುಖಪಾಲ್ ಸಿಂಗ್ ಖೈರಾ] ಬಂಧಿಸಿದ್ದಾರೆ ಎಂದು ನಾನು ಕೇಳಿದೆ. ನನ್ನ ಬಳಿ ವಿವರಗಳಿಲ್ಲ. ಅದಕ್ಕಾಗಿ ನೀವು ಪಂಜಾಬ್ ಪೊಲೀಸರೊಂದಿಗೆ ಮಾತನಾಡಬೇಕು ಎಂದು ಹೇಳಿದ್ದಾರೆ.

ಫಝ್ಲಿಕಾದಲ್ಲಿರುವ ಜಲಾಲಾಬಾದ್ ನ್ಯಾಯಾಲಯವು ಗುರುವಾರ ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಸೆಪ್ಟೆಂಬರ್ 30 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪಂಜಾಬ್ ಪೊಲೀಸರ ತಂಡವು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಅಡಿಯಲ್ಲಿ 2015 ರಲ್ಲಿ ಜಲಾಲಾಬಾದ್‌ನಲ್ಲಿ ಎನ್‌ಡಿಪಿಎಸ್ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಖೈರಾ ಅವರ ನಿವಾಸವನ್ನು ಗುರುವಾರ ಸಂಪೂರ್ಣ ತಪಾಸಣೆ ನಡೆಸಿತು. . ಪಂಜಾಬ್ ವಿಧಾನಸಭೆಯಲ್ಲಿ ಭೋಲಾತ್ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್‌ ಶಾಸಕರನ್ನು ಗುರುವಾರ ಬೆಳಿಗ್ಗೆ ಚಂಡೀಗಢದ ಅವರ ನಿವಾಸದಲ್ಲಿ ನಾಟಕೀಯ ಶೈಲಿಯಲ್ಲಿ ಬಂಧಿಸಲಾಯಿತು. ನಂತರ ಅವರನ್ನು ಮಧ್ಯಾಹ್ನ ಜಲಾಲಾಬಾದ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ಖೈರಾ ಪ್ರತಿಕ್ರಿಯೆ
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಸುಖಪಾಲ್ ಸಿಂಗ್ ಖೈರಾ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ, ಅವರು ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ನಾಯಕರು ಭರವಸೆಯ ‘ಬದಲಾವಣೆಯ ರಾಜಕೀಯ’ಕ್ಕಿಂತ ‘ಸೇಡಿನ ರಾಜಕಾರಣ’ದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಖೈರಾ, “ಭಗವಂತ್ ಮಾನ್ ರಕ್ತದ ದಾಹಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಸ್ಥಾನಮಾನವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಎಎಪಿ ತನ್ನನ್ನು ಬಂಧಿಸಿದೆ ಎಂದು ಖೈರಾ ಆರೋಪಿಸಿದ್ದಾರೆ.

ಪಂಜಾಬ್ ಪೊಲೀಸರ ವಿರುದ್ಧ ಕಾಂಗ್ರೆಸ್ ಆರೋಪ…
ಶಾಸಕ ಖೈರಾ ಅವರನ್ನು ಬಂಧಿಸಲು ಪಂಜಾಬ್ ಪೊಲೀಸರು ಚಂಡೀಗಢಕ್ಕೆ ಅನಧಿಕೃತ ಪ್ರವೇಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಪಂಜಾಬ್ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಪರತಾಪ್ ಸಿಂಗ್ ಬಾಜ್ವಾ ಅವರು ಖೈರಾ ಅವರ ಬಂಧನದ ಬಗ್ಗೆ ಚರ್ಚಿಸಲು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿದರು ಮತ್ತು ಪಂಜಾಬ್ ಪೋಲಿಸ್ ಸಿಬ್ಬಂದಿ ಖೈರಾ ಅವರ ಚಂಡೀಗಢ ನಿವಾಸಕ್ಕೆ ಬಲವಂತವಾಗಿ ಪ್ರವೇಶಿಸಿ ಬಂಧಿಸಿದ್ದಾರೆ ಎಂದು ಹೇಳಿದರು.
ಬಜ್ವಾ ಪ್ರಕಾರ, “ಪಂಜಾಬ್ ಪೊಲೀಸರು ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಸಾಧ್ಯವಿಲ್ಲ. ಅವರು ಚಂಡೀಗಢ ಪೊಲೀಸರಿಂದ ಅನುಮತಿ ಪಡೆದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರು ಬಲವಂತವಾಗಿ ಅವರ ಮನೆಗೆ ಪ್ರವೇಶಿಸಿದ್ದಾರೆ. ನಾವು ರಾಜ್ಯಪಾಲರಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು ಚಂಡೀಗಢ ಪೊಲೀಸರಿಗೆ ಮಾಹಿತಿ ನೀಡದೆ ಪ್ರವೇಶಿಸಿದ್ದಾರೆ, ಅವರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement