ಬಲೂಚಿಸ್ತಾನ್‌ ಅವಳಿ ಬಾಂಬ್ ಸ್ಫೋಟದಲ್ಲಿ ಭಾರತದ ಕೈವಾಡ: ಪಾಕಿಸ್ತಾನ ಆರೋಪ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶುಕ್ರವಾರ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಸಮೀಪ ಶುಕ್ರವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಘಟನೆಯಲ್ಲಿ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟವರ ಸಂಖ್ಯೆ 65ಕ್ಕೆ ಏರಿದೆ. ಇದರ ಬೆನ್ನಿಗೇ ಈ ದಾಳಿಗಳ ಹಿಂದೆ ಭಾರತದ ಬೇಹುಗಾರಿಕಾ ಸಂಸ್ಥೆ ರಾ ಕೈವಾಡ ಇದೆ ಎಂದು ಪಾಕಿಸ್ತಾನ ಒಳಾಡಳಿತ ಸಚಿವರು ಆರೋಪಿಸಿದ್ದಾರೆ.
.ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯಲ್ಲಿ ಪ್ರವಾದಿ ಮಹಮದ್ ಅವರ ಜನ್ಮದಿನದ ಆಚರಣೆ ಸಲುವಾಗಿ ಮೆರವಣಿಗೆ ತೆರಳುವುದಕ್ಕಾಗಿ ಜನರು ಮಸೀದಿಯೊಂದರ ಸಮೀಪ ಸೇರಿದ್ದರು. ಆಗ ಆತ್ಮಾಹುತಿ ಬಾಂಬರ್ ಒಬ್ಬ ಪೊಲೀಸ್ ವಾಹನವೊಂದರ ಸಮೀಪ ಸ್ಫೋಟಕಗಳನ್ನು ಸಿಡಿಸಿದ್ದಾನೆ ಎಂದು ವರದಿಯಾಗಿದೆ.
ಇದಾದ ಕೆಲವೇ ಗಂಟೆಗಳ ನಂತರ ಖೈಬರ್ ಪಖ್ತುಂಖ್ವಾದಲ್ಲಿನ ಹಂಗು ನಗರದಲ್ಲಿನ ಮಸೀದಿಯೊಂದರಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತ್ತು. ಅದರಲ್ಲಿ ಕನಿಷ್ಠ 5 ಮಂದಿ ಮೃತಪಟ್ಟಿದ್ದರು. ಈ ಆತ್ಮಾಹುತಿ ದಾಳಿಯಲ್ಲಿ ಭಾರತದ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಭಾಗಿಯಾಗಿದೆ ಎಂಬುದು ಪಾಕಿಸ್ತಾನದ ಒಳಾಡಳಿತ ಸಚಿವ ಸರ್ಫರಾಜ್ ಬುಗ್ತಿ ಅವರ ಆರೋಪವಾಗಿದೆ.

ಬಲೂಚಿಸ್ತಾನ ರಾಜಧಾನಿ ಕ್ವೆಟ್ಟಾದಲ್ಲಿ ಮಾತನಾಡಿದ ಸಚಿವ ಬುಗ್ತಿ, ಆತ್ಮಾಹುತಿ ದಾಳಿಯಲ್ಲಿ ರಾ ಕೈವಾಡ ಇದೆ” ಎಂದು ದೂರಿದ್ದಾರೆ.
ಆತ್ಮಾಹುತಿ ಬಾಂಬರ್‌ನ ದಾಳಿಕೋರನ ಡಿಎನ್‌ಎ ಮಾದರಿಗಳನ್ನು ವಿಶ್ಲೇಷಣೆಗೆಂದು ಕಳುಹಿಸಲಾಗಿದೆ.
ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಸಮೀಪದಲ್ಲಿ ನಡೆದ ಭಯಾನಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 65 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಎರಡನೇ ಬಾಂಬ್ ದಾಳಿಯು ಮಸೀದಿ ಬಳಿಯ ಪೊಲೀಸ್ ಠಾಣೆಯನ್ನು ಗುರಿಯಾಗಿಸಿ ಖೈಬರ್ ಪಖ್ತುಂಖ್ವಾದ ಹಂಗುದಲ್ಲಿ ನಡೆದಿದ್ದು, ಅದರಲ್ಲಿ ಐದು ಮಂದಿ ಸಾವಿಗೀಡಾಗಿದ್ದರು. ಸ್ಫೋಟದ ತೀವ್ರತೆಯಿಂದ ಮಸೀದಿಯ ಚಾವಣಿ ಕುಸಿದು 12 ಮಂದಿ ಗಾಯಗೊಂಡಿದ್ದರು.
ಅಪರಿಚಿತ ದಾಳಿಕೋರನ ವಿರುದ್ಧ ಕೊಲೆ ಆರೋಪಗಳೊಂದಿಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಹೇಳಿಕೆ ನೀಡಿರುವುದಾಗಿ ಡಾನ್ ವರದಿ ಮಾಡಿದೆ.
ದಾಳಿಗೆ ಇದುವರೆಗೂ ಯಾವುದೇ ಗುಂಪು ಹೊಣೆಗಾರಿಕೆ ವಹಿಸಿಕೊಂಡಿಲ್ಲ. ಆದರೆ, ಪಾಕಿಸ್ತಾನದಲ್ಲಿ ಅನೇಕ ಭೀಕರ ದಾಳಿಗಳನ್ನು ನಡೆಸಿರುವ ನಿಷೇಧಿತ ತೆಹ್ರೀಕ್- ಇ- ತಾಲಿಬಾನ್ (ಟಿಟಿಪಿ) ತನ್ನ ಕೈವಾಡವನ್ನು ಅಲ್ಲಗಳೆದಿದೆ” ಎಂದು ವರದಿ ತಿಳಿಸಿದೆ.
ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸಿಟಿಡಿ ತಿಳಿಸಿದೆ. ಬಲೂಚಿಸ್ತಾನದ ಹಂಗಾಮಿ ಸರ್ಕಾರವು ದಾಳಿ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement