ನವದೆಹಲಿ: ಜಾತಿ ಆಧಾರಿತ ಸಮೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಬಿಹಾರ ಪಾತ್ರವಾಗಿದೆ. ಜನಸಂಖ್ಯೆಯ 36%ರಷ್ಟು ಅತ್ಯಂತ ಹಿಂದುಳಿದ ವರ್ಗಗಳಿಂದ, 27.1%ರಷ್ಟು ಹಿಂದುಳಿದ ವರ್ಗಗಳು, 19.7%ರಷ್ಟು ಪರಿಶಿಷ್ಟ ಜಾತಿ ದ ಮತ್ತು 1.7 ಪ್ರತಿಶತದಷ್ಟು ಪರಿಶಿಷ್ಟ ಪಂಗಡದವರು ಇದ್ದಾರೆ ಎಂದು ವರದಿ ಸೂಚಿಸುತ್ತದೆ. ಸಾಮಾನ್ಯ ವರ್ಷದವರು ಶೇಕಡಾ 15.5 ರಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆ 13.1 ಕೋಟಿಗೂ ಹೆಚ್ಚು ಜಾತಿ ಸಮೀಕ್ಷೆ ಹೇಳುತ್ತದೆ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಸೇರಿದ ಯಾದವ ಸಮುದಾಯವು ಅತಿದೊಡ್ಡ ಜಾತಿಯಾಗಿದೆ.ಇದು ಎಲ್ಲಾ ಒಬಿಸಿ ವರ್ಗಗಳಲ್ಲಿ 14.27%ರಷ್ಟನ್ನು ಹೊಂದಿದೆ ಎಂದು ಎಂದು ಸಮೀಕ್ಷೆ ಹೇಳಿದೆ. 2024 ರ ಲೋಕಸಭಾ ಚುನಾವಣೆಗೆ ತಿಂಗಳುಗಳ ಮೊದಲು ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಹಿಂದುಳಿದ ವರ್ಗಳು ಬಿಹಾರದ ಜನಸಂಖ್ಯೆಯ ಶೇಕಡಾ 63.1 ರಷ್ಟಿದ್ದಾರೆ.
ಭೂಮಿಹಾರ್ ಜನಸಂಖ್ಯೆಯ ಶೇಕಡಾ 2.86 ರಷ್ಟಿದ್ದರೆ, ಬ್ರಾಹ್ಮಣರು ಶೇಕಡಾ 3.66 ರಷ್ಟಿದ್ದಾರೆ. ಮುಖ್ಯಮಂತ್ರಿ ನಿತೀಶ ಕುಮಾರ ಅವರ ಸಮುದಾಯವಾದ ಕುರ್ಮಿಗಳು ಜನಸಂಖ್ಯೆಯ ಶೇಕಡಾ 2.87 ರಷ್ಟಿದ್ದಾರೆ. ಮುಸಾಹರ್‌ಗಳು ಶೇಕಡಾ 3 ರಷ್ಟಿದ್ದಾರೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಮುದಾಯಕ್ಕೆ ಸೇರಿದ ಯಾದವರು ಶೇಕಡಾ 14 ರಷ್ಟಿದ್ದಾರೆ.
ಸಮೀಕ್ಷೆಯ ಬಗ್ಗೆ ಮುಖ್ಯಮಂತ್ರಿ ನಿತೀಶಕುಮಾರ ಅವರು, ಎಲ್ಲಾ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗಾಗಿ ರಾಜ್ಯ ಸರ್ಕಾರದ ಉಪಕ್ರಮಗಳಿಗೆ ವರದಿಯು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇಂದು, ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ, ಬಿಹಾರದಲ್ಲಿ ನಡೆಸಿದ ಜಾತಿ ಆಧಾರಿತ ಜನಗಣತಿಯ ಮಾಹಿತಿಯನ್ನು ಪ್ರಕಟಿಸಲಾಗಿದೆ. ಜಾತಿ ಆಧಾರಿತ ಗಣತಿ ಕಾರ್ಯದಲ್ಲಿ ತೊಡಗಿರುವ ಇಡೀ ತಂಡಕ್ಕೆ ಅಭಿನಂದನೆಗಳು!’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ