ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಏಷ್ಯನ್ ಗೇಮ್ಸ್- 2023 : ಚಿನ್ನ ಗೆದ್ದ ಅನ್ನು ರಾಣಿ, ಪಾರುಲ್ ಚೌಧರಿ-ದಾಖಲೆ ಪದಕ ಗೆಲ್ಲುವತ್ತ ಭಾರತ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತನ್ನ ಅತಿದೊಡ್ಡ ಪದಕ ಗಳಿಕೆಯ ಹಾದಿಯಲ್ಲಿದೆ. ಏಷ್ಯನ್ ಗೇಮ್ಸ್ 2018 ರಲ್ಲಿ, ಭಾರತವು 70 ಪದಕಗಳನ್ನು ಗೆದ್ದುಕೊಂಡಿದ್ದು ಏಷ್ಯನ್‌ ಗೇಮ್ಸ್‌ನಲ್ಲಿ ಇದುವರೆಗಿನ ಭಾರತದ ಅತ್ಯಧಿಕ ಪದಕಗಳ ಸಂಖ್ಯೆಯಾಗಿದೆ.
2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈಗಾಗಲೇ 69 ಪದಕಗಳನ್ನು ಗೆದ್ದಿದೆ. ಐದು ದಿನಗಳ ಪದಕ ಸ್ಪರ್ಧೆಗಳು ಉಳಿದಿವೆ. ಮಂಗಳವಾರ, ಅಥ್ಲೆಟಿಕ್ಸ್ ಬೆಳಿಗ್ಗೆ ಅದು ಬಿಲ್ಲುಗಾರಿಕೆಯ್ಲಿ ಚಿನ್ನಗೆದ್ದ ಭಾರತ ಮಧ್ಯಾಹ್ನ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ತೋರಿದೆ.

ಪಾರುಲ್ ಚೌಧರಿ (ಚಿನ್ನ, ಮಹಿಳೆಯರ 5000 ಮೀ), ಅನ್ನು ರಾಣಿ (ಚಿನ್ನ, ಮಹಿಳೆಯರ ಜಾವೆಲಿನ್ ಎಸೆತ), ತೇಜಸ್ವಿನ್ ಶಂಕರ (ಬೆಳ್ಳಿ ಡೆಕಾಥ್ಲಾನ್), ಮೊಹಮ್ಮದ್ ಅಫ್ಸಲ್ (ಬೆಳ್ಳಿ, ಪುರುಷರ 800 ಮೀ), ಪ್ರವೀಣ ಚಿತ್ತಾರವೆಲ್ (ಕಂಚು, ಪುರುಷರ ಟ್ರಿಪಲ್ ಜಂಪ್), ವಿತ್ಯಾ (ಕಂಚು, ಮಹಿಳೆಯರ 400ಮೀ ಹರ್ಡಲ್ಸ್) ಪದಕಗಳನ್ನು ಗೆದ್ದರು. ಭಾರತವು ಕ್ಯಾನೋಯಿಂಗ್ ಮೂಲಕ ದಿನದ ಮೊದಲ ಪದಕವನ್ನು ಗಳಿಸಿತು, ಅಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಂ ಅವರು ಪುರುಷರ ಕ್ಯಾನೋ ಡಬಲ್ 1000 ಮೀ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದರು.

ಪ್ರಮುಖ ಸುದ್ದಿ :-   ವಿಶ್ವದ ಅತ್ಯಂತ ಹಿರಿಯ ಸಂಯೋಜಿತ ಅವಳಿಗಳು 62ನೇ ವಯಸ್ಸಿನಲ್ಲಿ ನಿಧನ

https://twitter.com/manibhaii16/status/1709194764422127950?ref_src=twsrc%5Etfw%7Ctwcamp%5Etweetembed%7Ctwterm%5E1709194764422127950%7Ctwgr%5E5b8194fae6895b4017a82369aa91dad98882c864%7Ctwcon%5Es1_&ref_url=https%3A%2F%2Fsports.ndtv.com%2Fasian-games-2023%2Fasian-games-2023-live-october-3-latest-updates-4443967

ಅಲ್ಲದೆ, ಸ್ಕ್ವಾಷ್‌ನಲ್ಲಿ ಭಾರತಕ್ಕೆ ಮೂರು ಪದಕಗಳು ಖಚಿತವಾಗಿವೆ – ಸೌರವ್ ಘೋಸಲ್ (ಪುರುಷರ ಸಿಂಗಲ್ಸ್), ದೀಪಿಕಾ ಪಲ್ಲಿಕಲ್ / ಹರಿಂದರ್ ಪಾಲ್ ಸಿಂಗ್ (ಮಿಶ್ರ ಡಬಲ್ಸ್), ಅಭಯ್ ಸಿಂಗ್ / ಅನಾಹತ್ ಸಿಂಗ್ (ಮಿಶ್ರ ಡಬಲ್ಸ್) ಅವರು ಪದಕವನ್ನು ಖಚಿತಪಡಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ, ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಆದರೆ ಪ್ರೀತಿ ಮತ್ತು ನರೇಂದರ್ಅವರು ಕಂಚಿನ ಪದಕ ತೃಪ್ತಿಪಟ್ಟರು. ಭಾರತೀಯ ಬಿಲ್ಲುಗಾರರು ಸಂಯುಕ್ತ ಸ್ಪರ್ಧೆಗಳಲ್ಲಿ ಕನಿಷ್ಠ ಮೂರು ಪದಕಗಳನ್ನು ಖಚಿತಪಡಿಸಿದ್ದಾರೆ. ಓಜಸ್ ಪ್ರವೀಣ ಮತ್ತು ಅಭಿಷೇಕ ವರ್ಮಾ ಪುರುಷರ ಸಂಯುಕ್ತ ವೈಯಕ್ತಿಕ ಸ್ಪರ್ಧೆಯಲ್ಲಿ ಫೈನಲ್‌ಗೆ ಸಿದ್ಧರಾದರು. ಜ್ಯೋತಿ ಸುರೇಖಾ ವೆನ್ನಂ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ಆರ್ಚರಿ ಸ್ಪರ್ಧೆಯಲ್ಲಿ ಫೈನಲ್‌ಗೆ ತಲುಪಿದ್ದಾರೆ. .

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement