ಲೋಕಸಭೆ ಚುನಾವಣೆ 2024-ಎನ್‌ಡಿಎ Vs ವಿಪಕ್ಷಗಳ ಇಂಡಿಯಾ ಒಕ್ಕೂಟದ ಜಿದ್ದಾಜಿದ್ದಿಯಲ್ಲಿ ಗೆಲ್ಲೋರು ಯಾರು..? : ಟೈಮ್ಸ್‌ ನೌ – ಇಟಿಜಿ ರಿಸರ್ಚ್ಸ್‌ ಸಮೀಕ್ಷೆ ಏನು ಹೇಳಿದೆ..? ಇಲ್ಲಿದೆ…

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಸಜ್ಜಾಗಿರುವ ಹೊತ್ತಲ್ಲೇ ಈಗ ಮತ್ತೊಂದು ಸಮೀಕ್ಷೆ ಹೊರಬಿದ್ದಿದೆ. ಟೈಮ್ಸ್‌ ನೌ – ಇಟಿಜಿ ರಿಸರ್ಚ್ಸ್‌ ಸಮೀಕ್ಷಾ ವರದಿ ಪ್ರಕಟವಾಗಿದೆ. ಈಗಲೇ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅದು ಹೇಳಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಪ್ರಬಲ ಸ್ಪರ್ಧೆ ನೀಡಿದರೂ ಅಧಿಕಾರ ಹಿಡಿಯಲು ವಿಫಲವಾಗಲಿದೆ ಎಂದು ಅದು ಹೇಳಿದೆ.
ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಗಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಈಗ ‘ಟೈಮ್ಸ್ ನೌ’ ಬಿಡುಗಡೆ ಮಾಡಿರುವ ಸಮೀಕ್ಷೆ ವರದಿಯಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಒಟ್ಟು 543 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 297ರಿಂದ 317 ಸ್ಥಾನ ಪಡೆದು ಸರ್ಕಾರ ರಚಿಸುವ ಸಾಧ್ಯತೆ ಕಂಡುಬಂದಿದೆ ಸಮೀಕ್ಷೆ ಹೇಳಿದೆ.

ಬಿಜೆಪಿ ಎನ್‌ಡಿಎ ವಿರುದ್ಧ ರಚನೆಯಾಗಿರುವ ವಿಪಕ್ಷಗಳ ಮೈತ್ರಿಕೂಡ ‘ಇಂಡಿಯಾ’ ಬ್ಲಾಕ್‌ ಎಷ್ಟು ಸ್ಥಾನ ಗಳಿಸಬಹುದು ಎಂಬ ಬಗ್ಗೆಯೂ ಈ ಸಮೀಕ್ಷೆ ಅಂದಾಜಿಸಿದೆ. ಸಮೀಕ್ಷಾ ವರದಿಯಂತೆ, 543 ಸ್ಥಾನಗಳಲ್ಲಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 165ರಿಂದ 185 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಿದೆ. ಎನ್‌ಡಿಎ ಒಕ್ಕೂಟವು 297-317 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದೆ. ಆಂಧ್ರಪ್ರದೇಶದ ಜಗನ್ಮೋಹನ ರೆಡ್ಡಿ ಅವರ ಅವರ YSRCP ಯು 24ರಿಂದ 25 ಸ್ಥಾನ ಪಡೆಯಬಹುದು. ತೆಲಂಗಾಣದ ಬಿಆರ್‌ಎಸ್ ಪಕ್ಷವು 9ರಿಂದ 11 ಸ್ಥಾನಗಳು ಒಡಿಸ್ಸಾದ ನವೀನ್‌ ಪಟ್ನಾಯಕ್‌ ಅವರ ಬಿಜೆಡಿ ಪಕ್ಷವು 13ರಿಂದ 15 ಸ್ಥಾನ, ಇತರರು 11ರಿಂದ 14 ಸ್ಥಾನ ಪಡೆಯಬಹುದು ಎಂದು ಟೈಮ್ಸ್‌ ನೌ – ಇಟಿಜಿ ರಿಸರ್ಚ್ಸ್‌ ಸಮೀಕ್ಷೆಯಲ್ಲಿ ಕಂಡುಬಂದಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು ದೆಹಲಿಯ ಲೋಕಸಭಾ ಚುನಾವಣೆಯಲ್ಲಿ 3-5 ಸ್ಥಾನ ಎಎಪಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಕರ್ನಾಟಕದಲ್ಲಿ ಬಿಜೆಪಿಗೆ 20 ಸ್ಥಾನ…
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 18 – 20 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್‌ 3 ರಿಂದ 9 ಸ್ಥಾನಗಳಲ್ಲಿ ಮತ್ತು ಜೆಡಿಎಸ್ 1 – 2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಅಲ್ಲದೇ, ಬಿಜೆಪಿ ಶೇ. 46.1, ಕಾಂಗ್ರೆಸ್‌ 41.9, ಜೆಡಿಎಸ್‌ ಶೇ. 7.2 ಮತ್ತು ಇತರರು ಶೇ. 4.8 ರಷ್ಟು ಮತ ಪಡೆದುಕೊಳ್ಳಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಅದು ಹೇಳಿದೆ.
ಲೋಕಸಭೆ ಚುನಾವಣೆಗೆ ಬಹುತೇಕ 7- 8 ತಿಂಗಳು ಮಾತ್ರ ಬಾಕಿ ಇದ್ದು, ಲೋಕಸಭೆ ಚುನಾವಣೆಗಾಗಿ ಪಕ್ಷಗಳು ತಯಾರಿ ನಡೆಸುತ್ತಿರುವ ವೇಳೆ ಟೈಮ್ಸ್‌ ನೌ – ಇಟಿಜಿ ರಿಸರ್ಚ್ಸ್‌ ಸಮೀಕ್ಷೆಹೊರಬಿದ್ದಿದೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement