ಏಷ್ಯನ್ ಗೇಮ್ಸ್ 2023 : ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಚಿನ್ನ, ಕಿಶೋರ ಜೆನಾಗೆ ಬೆಳ್ಳಿ

ಚೀನಾದ ಹ್ಯಾಂಗ್‌ಝೌದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಜಾವೆಲಿನ್ ಫೈನಲ್‌ನಲ್ಲಿ ಇಬ್ಬರು ಭಾರತೀಯರು ಪ್ರಾಬಲ್ಯ ಮೆರೆದರು. ನೀರಜ ಚೋಪ್ರಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಜಾವೆಲಿನ್ ಚಿನ್ನದ ಪದಕವನ್ನು ಉಳಿಸಿಕೊಂಡರು ಮತ್ತು ಉದಯೋನ್ಮುಖ ತಾರೆ ಕಿಶೋರ್ ಜೆನಾ ಅವರು ಬೆಳ್ಳಿ ಗೆದ್ದರು.
ಮಹಿಳೆಯರ ಜಾವೆಲಿನ್ ನಲ್ಲಿ ಅನ್ನು ರಾಣಿ ಚಿನ್ನದ ಪದಕವನ್ನು ಗೆದ್ದ ಮಾರನೇ ದಿನ, 12 ಮಂದಿಯ ಫೈನಲ್‌ ನಲ್ಲಿ ನೀರಜ್ ಮತ್ತು ಜೆನಾ ಚಿನ್ನ ಮತ್ತು ಬೆಳ್ಳಿಗಾಗಿ ಪದಕ ಗೆದ್ದರು.ಈ ವರ್ಷದ ಆರಂಭದಲ್ಲಿ ನಡೆದ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಕಿಶೋರ್ ಜೆನಾ, ಅಕ್ಟೋಬರ್ 4 ರ ಬುಧವಾರ ನಡೆದ ಫೈನಲ್‌ನಲ್ಲಿ ಒಂದು ಹಂತದಲ್ಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾಗೆ ಭಯವನ್ನುಂಟು ಮಾಡಿದರು.

ಪುರುಷರ ಜಾವೆಲಿನ್ ಫೈನಲ್‌ನ ಆರಂಭದಲ್ಲಿ ನೀರಜ್ ಮತ್ತು ಕಿಶೋರ್ ತಾಂತ್ರಿಕ ವೈಫಲ್ಯಗಳಿಂದ ಒತ್ತಡಕ್ಕೆ ಒಳಗಾಗಿದ್ದರು. ನೀರಜ್ ಅವರ ಮೊದಲ ಥ್ರೋ ತಾಂತ್ರಿಕ ಕಾರಣಗಳಿಂದ ಸ್ಕ್ರಾಚ್ ಆಗಿದ್ದು ಭಾರೀ ವಿಳಂಬಕ್ಕೆ ಕಾರಣವಾಯಿತು. ಕಿಶೋರ್ ಜೆನಾ ಅವರ ಎರಡನೇ ಎಸೆತವನ್ನು ಬಿಳಿ ಧ್ವಜವನ್ನು ನೀಡುವ ಮೊದಲು ತಪ್ಪಾಗಿ ಫೌಲ್ ಎಂದು ಕರೆಯಲಾಯಿತು. ಆದಾಗ್ಯೂ, ಇಬ್ಬರೂ ಸ್ಟಾರ್‌ಗಳು ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತರು.
ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಕಿಶೋರ್ ಅವರು ತಮ್ಮ ವೈಯಕ್ತಿಕ ಅತ್ಯುತ್ತಮ 87.54 ಮೀಟರ್‌ಗಳನ್ನು ಎಸೆದರು. ತೋಷಪಟ್ಟರು.
ನೀರಜ್ ಚೋಪ್ರಾ ಅವರು 88.88 ಮೀಟರ್‌ಗಳ ದೂರ ಥ್ರೋ ಮಾಡಿ ಚಿನ್ನದ ಪದಕ ಗೆದ್ದರು. ಇದು ಅವರ ಈ ಋತುವಿನ ಅತ್ಯುತ್ತಮ ಎಸೆತವಾಗಿತ್ತು.
ನೀರಜ್ ಚೋಪ್ರಾ : 82.38ಮೀ, 84.49ಮೀ, x, 88.88ಮೀ, 80.80ಮೀ, x
ಅರ್ಜುನ್‌ ಜೆನಾ : 81.26m, 79.76m, 86.77m, 87.54m, x, x

ಪ್ರಮುಖ ಸುದ್ದಿ :-   ವೀಡಿಯೊ..| ತನ್ನ ಮರಿಯನ್ನು ಕಾಪಾಡಿದ ಅರಣ್ಯ ಸಿಬ್ಬಂದಿಗೆ 'ಕೃತಜ್ಞತೆ' ಸಲ್ಲಿಸಿದ ಕಾಡಾನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement