ಏಷ್ಯನ್ ಗೇಮ್ಸ್ 2023 : 4×400 ಮೀ ಓಟದಲ್ಲಿ ಚಿನ್ನ ಗೆದ್ದ ಭಾರತದ ಪುರುಷರ ರಿಲೇ ತಂಡ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಅಕ್ಟೋಬರ್ 4, ಬುಧವಾರ ವಿವಿಧ ವಿಭಾಗಗಳಲ್ಲಿ ಕ್ರೀಡೆಯಲ್ಲಿ ಅಥ್ಲೆಟಿಕ್ಸ್ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ತಂದು ಕೊಡುವುದನ್ನು ಮುಂದುವರೆಸಿದೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರ ಚಿನ್ನ ಸೇರಿದಂತೆ ಡಬಲ್ ಪೋಡಿಯಂ ಫಿನಿಶ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳ ಸಾಧನೆಯನ್ನು ಮುಖ್ಯವಾಗಿಸಿದೆ.
ಬುಧವಾರ, ಮುಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ಮತ್ತು ರಾಜೇಶ ರಮೇಶ ಒಳಗೊಂಡ ಪುರುಷರ ರಿಲೇ ತಂಡವು 4×400 ಮೀ ಓಟವನ್ನು 3:01.58 ಸಮಯಲ್ಲಿ ಓಡಿ ಚಿನ್ನದ ಪದಕ ಪಡೆದಿದೆ.
ಜಾವೆಲಿನ್ ಮತ್ತು ರಿಲೇ ಹೊರತಾಗಿ, ಇತರ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಪುರುಷರ 5000 ಮೀ. ಅಲ್ಲಿ ಅವಿನಾಶ್ ಸೇಬಲ್ ಅವರು ಬೆಳ್ಳಿ ಪದಕ ಗೆದ್ದರೆ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಚಿನ್ನದ ಪದಕ ಗೆದ್ದರು. ಹರ್ಮಿಲನ್ ಬೇನ್ಸ್ ಅವರು 800 ಮೀಟರ್ ಓಟ ಹಾಗೂ 1500 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಪಡೆದರು ಮತ್ತು ವಿತ್ಯಾ ರಾಮರಾಜ, ಪ್ರಾಚಿ, ಶುಭಾ ವೆಂಕಟೇಶನ್ ಮತ್ತು ಐಶ್ವರ್ಯ ಕೈಲಾಶ್ ಮಿಶ್ರಾ ಅವರ ಮಹಿಳಾ ತಂಡ 4×400 ಮೀ ರಿಲೇಯಲ್ಲಿ ಬೆಳ್ಳಿ ಗೆದ್ದಿತು.
ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ 18 ಚಿನ್ನದ ಪದಕಗಳು ಭಾರತಕ್ಕೆ ಅತ್ಯಧಿಕವಾಗಿದೆ ಮತ್ತು ಭಾರತದ ಒಟ್ಟಾರೆ ಪದಕವು ಈಗ 81 ಕ್ಕೆ ತಲುಪಿದೆ, ಇದು ಭಾರತವು ಏಷ್ಯನ್‌ ಗೇಮ್ಸ್‌ ನಲ್ಲಿ ಗೆದ್ದ ಅತ್ಯಧಿಕ ಪದಕವಾಗಿದೆ. ಅಥ್ಲೆಟಿಕ್ಸ್ ಭಾರತಕ್ಕೆ ಇದುವರೆಗೆ 29 ಪದಕಗಳನ್ನು ನೀಡಿದೆ, ಮ್ಯಾರಥಾನ್‌ನಲ್ಲಿ ಕೇವಲ ಒಂದೆರಡು ಪದಕಗಳು ಬಾಕಿ ಉಳಿದಿವೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement