ಹ್ಯಾಂಗ್ಝೌ : ಚೀನಾದಲ್ಲಿ ಹ್ಯಾಂಗ್ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಓಜಸ್ ದಿಯೋತಾಲೆ, ಅಭಿಷೇಕ ವರ್ಮಾ ಮತ್ತು ಪ್ರಥಮೇಶ ಜಾವ್ಕರ್ ಅವರ ಭಾರತೀಯ ಪುರುಷರ ಸಂಯುಕ್ತ ಬಿಲ್ಲುಗಾರಿಕೆ ತಂಡವು ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ. ಇದು ಭಾರತದ 23ನೇ ಚಿನ್ನದ ಪದಕವಾಗಿದೆ. ಭಾರತದ ಮೂವರು ಕೊರಿಯಾದ ಜೇಹೂನ್ ಜೂ, ಜೇವೊನ್ ಯಾಂಗ್ ಮತ್ತು ಜೊಂಗೊ ಕಿಮ್ ಅವರನ್ನು 235-230 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಪು
ಆರಂಭದಿಂದಲೇ ಭಾರತೀಯರು ತಮ್ಮ ಆಟದಲ್ಲಿ ಅಗ್ರಸ್ಥಾನದಲ್ಲಿದ್ದರು. ತಂಡವು ಗುರಿಯತ್ತ ಎಸೆದ 24 ಬಾಣಗಳಲ್ಲಿ ಅವರು 20 ಸಂದರ್ಭಗಳಲ್ಲಿ ಹತ್ತು ಅಂಕಗಳನ್ನು ಗಳಿಸಿತು. ಪ್ರತ್ಯುತ್ತರವಾಗಿ, ಕೊರಿಯನ್ನರು 10-ಪಾಯಿಂಟರ್ಗಳ 14 ಬಾಣಗಳನ್ನು ಮಾತ್ರ ಗುರು ತಲುಪಿಸಿದರು. ಮೊದಲ ಅವಧಿಯಲ್ಲಿ ನಂತರ ಭಾರತದ ತಂಡ 58-55 ಅಅಂಕಗಳಿಂದ ಮುನ್ನಡೆಯಿತು. ದ್ವಿತೀಯ ಅವಧಿಯ ಅಂತ್ಯದ ಮುಕ್ತಾಯದಲ್ಲಿ 116-114 ಅಂಕಗಳಿಂದ ಎರಡು ಪಾಯಿಂಟ್ಗಳಿಂದ ಮುನ್ನಡೆ ಸಾಧಿಸಿತು. ಮೂರನೇ ಅವಧಿಯಲ್ಲಿ ಭಾರತೀಯ ತಂಡದ ಅಂಕ 175ಕ್ಕೆ ಏರಿತು, ಕೊರಿಯನ್ನರು 171 ಅಂಕಗಳಲ್ಲಿ ಉಳಿದರು. ಕೊನೆಯ ಅವಧಿಯಲ್ಲಿ ಸಂಪೂರ್ಣ 10-ಪಾಯಿಂಟರ್ ಮೂಲಕ ಭಾರತ 235-230 ಅಂಕಗಳಿಂದ ಜಯಗಳಿಸಿತು.
ಇದಕ್ಕೂ ಮೊದಲು, 12 ನೇ ದಿನ ಭಾರತೀಯ ಆಟಗಾರರು ಇನ್ನೂ ಎರಡು ಚಿನ್ನದ ಪದಕಗಳನ್ನು ಗಳಿಸಿದರು. ಜ್ಯೋತಿ ಸುರೇಖಾ ವೆನ್ನಂ, ಅದಿತಿ ಗೋಪಿಚಂದ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರ ಮಹಿಳಾ ಸಂಯುಕ್ತ ಬಿಲ್ಲುಗಾರಿಕೆ ತಂಡವು ದಿನದ ಭಾರತದ ಮೊದಲ ಚಿನ್ನ ಮತ್ತು ಒಟ್ಟಾರೆ 19 ನೇ ಚಿನ್ನವನ್ನು ಗೆದ್ದುಕೊಂಡಿತು. ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಮಿಶ್ರ ಸ್ಕ್ವಾಷ್ ತಂಡ ದಿನದ ಎರಡನೇ ಚಿನ್ನವನ್ನು ಗೆದ್ದುಕೊಂಡಿತು. ಅವರು ಮಲೇಶಿಯಾದ ಐಫಾ ಅಜ್ಮಾನ್ ಮತ್ತು ಮೊಹಮ್ಮದ್ ಅವರನ್ನು ಸೋಲಿಸಿದರು. ಫುಯಾಂಗ್ ಯಿನ್ಹು ಸ್ಪೋರ್ಟ್ಸ್ ಸೆಂಟರ್ ಫೈನಲ್ ಫೀಲ್ಡ್ನಲ್ಲಿ ನಡೆದ ಫೈನಲ್ನಲ್ಲಿ ಭಾರತ ತಂಡವು 230-229 ಅಂಕಗಳಿಂದ ಜಯಗಳಿಸಿ ಚಿನ್ನದ ಪದಕವನ್ನು ಪಡೆದುಕೊಂಡಿತು. ಇದು ಅಕ್ಟೋಬರ್ 5ರ ದಿನ ಭಾರತಕ್ಕೆ ಮೊದಲ ಪದಕವಾಗಿದೆ ಮತ್ತು ಹ್ಯಾಂಗ್ಝೌ ಕ್ರೀಡಾಕೂಟದಲ್ಲಿ ಒಟ್ಟಾರೆ 82ನೇ ಪದಕವಾಗಿದೆ.
ಅಕ್ಟೋಬರ್ 5ರಂದು ನಡೆದ ಸ್ಕ್ವಾಷ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಅವರು ಭಾರತಕ್ಕೆ ಚಿನ್ನತಂದುಕೊಟ್ಟರು. ಈ ಜೋಡಿಯು ಭಾರತಕ್ಕೆ ದಿನದ ಎರಡನೇ ಚಿನ್ನವನ್ನು ಮತ್ತು 2023 ರ ಏಷ್ಯನ್ ಗೇಮ್ಸ್ನಲ್ಲಿ 20 ನೇ ಚಿನ್ನದ ಪದಕವನ್ನು ತಂದುಕೊಟ್ಟರು. ಭಾರತವು ಮಲೇಷ್ಯಾದ ಐಫಾ ಅಜ್ಮಾನ್ ಮತ್ತು ಕಮಾಲ್ ಮೊಹಮ್ಮದ್ ಸಯಾಫಿಕ್ ಅವರನ್ನು 2-0 (11-10, 11-10) ನೇರ ಸೆಟ್ಗಳ ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು.
ನಿಮ್ಮ ಕಾಮೆಂಟ್ ಬರೆಯಿರಿ