ಕ್ರಿಕೆಟ್‌ ವಿಶ್ವಕಪ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಂಚುರಿ ಸಿಡಿಸಿದ ನ್ಯೂಜಿಲೆಂಡ್ ಆಟಗಾರ ʼರಚಿನ್ʼ ರವೀಂದ್ರ ಕನ್ನಡಿಗ ; ಈ ಆಟಗಾರನ ಹೆಸರಲ್ಲಿರುವ ವಿಶೇಷತೆ ಏನು..?

ಗಾಯಗೊಂಡಿದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದು ಹಾಲಿ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ಅದ್ಭುತ ಆಟದೊಂದಿಗೆ ಗಮನ ಸೆಳೆದ ಭಾರತೀಯ ಮೂಲದ ಯುವ ಕ್ರಿಕೆಟರ್‌ ರಚಿನ್ ರವೀಂದ್ರ ಈಗ ಭಾರಿ ಸುದ್ದಿಯಾಗಿದ್ದಾರೆ.
ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಗುರುವಾರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಜೇಯರಾಗಿ ಉಳಿದ ನ್ಯೂಜಿಲೆಂಡ್ ತಂಡದ 23 ವರ್ಷದ ಯುವ ಆಟಗಾರ ರಚಿನ್ ರವೀಂದ್ರ (Rachin Ravindra), ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಕಾಯಂ ನಾಯಕ ಕೇನ್​​ ವಿಲಿಯಮ್ಸನ್​ ಜಾಗದಲ್ಲಿ ಅವಕಾಶ ಪಡೆದ ರಚಿನ್, ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
23 ವರ್ಷದ ಭಾರತೀಯ ಸಂಜಾತ ಯುವ ಆಲ್‌ರೌಂಡರ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ ಎದುರಿಸಿದ 96 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್​ ಸಹಿತ 123 ರನ್​ ಗಳಿಸಿದರು. ರಚಿನ್ ಅವರು ತಮ್ಮ ಮೊದಲ ವಿಶ್ವಕಪ್‌ ಪಂದ್ಯದಲ್ಲೇ ಕೇವಲ 82 ಎಸೆತಗಳಲ್ಲೇ ಶತಕ ಪೂರೈಸಿ ಕಿವೀಸ್ ಪರ ವಿಶ್ವಕಪ್​ನಲ್ಲಿ ವೇಗ ಶತಕ ಬಾರಿಸಿದ ದಾಖಲೆ ಮಾಡಿದ್ದಾರೆ. ರಚಿನ್‌, ಆಟದ ಜೊತೆಗೆ ತನ್ನ ಹೆಸರಿನಿಂದಲೂ ಹೆಚ್ಚು ಸುದ್ದಿಯಲ್ಲಿದ್ದಾರೆ.

ಕರ್ನಾಟಕದ ಮೂಲದ ಈ ರಚಿನ್‌ ಯಾರು..?
ರಚಿನ್‌ ರವೀಂದ್ರ ಜನಿಸಿದ್ದು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಾದರೂ ಅವರ ತಂದೆ-ತಾಯಿ ಬೆಂಗಳೂರು ಮೂಲದವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಇಬ್ಬರೂ ಸಾಫ್ಟ್‌ವೇರ್‌ ಇಂಜಿನಿಯರ್​​​ಗಳು. ಉದ್ಯೋಗಕ್ಕಾಗಿ 1990ರ ದಶಕದಲ್ಲಿ ಅವರು ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದ್ದಾರೆ. ರಚಿನ್‌ ತಂದೆ ಸಾಫ್ಟ್‌ವೇರ್‌ ಇಂಜಿನಿಯರ್​ ಆದರೂ ಕ್ರಿಕೆಟ್‌ ಆಟಗಾರರೇ. ಅವರು ಬೆಂಗಳೂರಿನಲ್ಲಿದ್ದಾಗ ಕ್ಲಬ್‌ ತಂಡಗಳಿಗೆ ಕ್ರಿಕೆಟ್‌ ಆಡುತ್ತಿದ್ದರಂತೆ.

ಪ್ರಮುಖ ಸುದ್ದಿ :-   ಮಂಗನ ಕಾಯಿಲೆಗೆ ಉತ್ತರ ಕನ್ನಡದಲ್ಲಿ ಮತ್ತೊಬ್ಬ ಮಹಿಳೆ ಸಾವು

ಸಚಿನ್‌-ದ್ರಾವಿಡ್‌ ಹೆಸರಿನಿಂದ ರಚಿನ್ ಹೆಸರು…
ರಚಿನ್ ರವಿಂದ್ರ ಅವರ ಹೆಸರಿನಲ್ಲಿ ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರ ಹೆಸರು ಅಡಗಿದೆ. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಅಪ್ಪಟ ಅಭಿಮಾನಿಯಾಗಿರುವ ಅವರ ತಂದೆ ಈ ಇಬ್ಬರು ಆಟಗಾರರ ಹೆಸರನ್ನು ಸೇರಿಸಿ ಮಗನಿಗೆ ರಚಿನ್ ಎಂದು ಹೆಸರಿಟ್ಟಿದ್ದಾರೆ. ರಾಹುಲ್‌ ದ್ರಾವಿಡ್‌ ಹೆಸರಿನಿಂದ ‘ರ’ ಮತ್ತು ಸಚಿನ್‌ ತೆಂಡೂಲ್ಕರ್‌ ಹೆಸರಿನಿಂದ ‘ಚಿನ್‌’ ಅಕ್ಷರಗಳನ್ನು ಸೇರಿಸಿ ರವಿ ಕೃಷ್ಣಮೂರ್ತಿಯವರು ತಮ್ಮ ಪುತ್ರನಿಗೆ ರಚಿನ್‌ ಎಂದು ಹೆಸರಿಟ್ಟಿದ್ದಾರೆ. ರಚಿನ್ ಅವರು​​, ಸಚಿನ್​ ತೆಂಡೂಲ್ಕರ್​ ಅವರ ದೊಡ್ಡ ಅಭಿಮಾನಿ.

ಅಂಡರ್‌ 19 ವಿಶ್ವಕಪ್ ಆಡಿರುವ ರಚಿನ್‌ ರವೀಂದ್ರ
ನ್ಯೂಜಿಲೆಂಡ್​ ತಂಡದ ಪರ ಅಂಡರ್​​-19 ವಿಶ್ವಕಪ್​​​ ಟೂರ್ನಿಯಲ್ಲಿ ರಚಿನ್ ಆಡಿದ್ದಾರೆ. ಆರು ಪಂದ್ಯಗಳಿಂದ 13 ವಿಕೆಟ್‌ಗಳನ್ನು ಪಡೆದರು, ಅಗ್ರ ಐದು ವಿಕೆಟ್ ಟೇಕರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. 2016 ಮತ್ತು 2018ರ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ನಂತರ ಕಿವೀಸ್ ದೇಶೀ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​​ಗೂ ಪದಾರ್ಪಣೆ ಮಾಡಿದರು. 2021ರಲ್ಲಿ ಭಾರತದ ವಿರುದ್ದ ಕಣಕ್ಕಿಳಿಯುವ ಮೂಲಕ ಟೆಸ್ಟ್‌ ಕ್ರಿಕೆಟ್​ಗೆ ಕಿವೀಸ್​​ ಪರ ಪದಾರ್ಪಣೆ ಮಾಡಿದ್ದಾರೆ. ರವೀಂದ್ರ ಅವರು ಜೂನ್ 2021 ರಲ್ಲಿ ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ನ್ಯೂಜಿಲೆಂಡ್ ತಂಡದಲ್ಲಿದ್ದರೂ, ಅವರು ಅದೇ ವರ್ಷ ನವೆಂಬರ್‌ನಲ್ಲಿ ಭಾರತದ ವಿರುದ್ಧವೂ ತಮ್ಮ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ರಚಿನ್ ಆಲ್ ರೌಂಡರ್ ಆಗಿದ್ದಾರೆ. ಅವರು ಆಕ್ರಮಣಕಾರಿ ಎಡಗೈ ಬ್ಯಾಟರ್ ಆಗಿದ್ದು ಕೆಲವು ಎಡಗೈ ಸ್ಪಿನ್ ಬೌಲ್ ಮಾಡುತ್ತಾರೆ. ಸೆಪ್ಟೆಂಬರ್ 2021 ರಲ್ಲಿ, ರಚಿನ್ ಬಾಂಗ್ಲಾದೇಶದ ವಿರುದ್ಧ ಮಿರ್‌ಪುರದಲ್ಲಿ ತಮ್ಮ T20 ಚೊಚ್ಚಲ ಪಂದ್ಯ ಆಡಿದರು. ಅವರು ಈ ವರ್ಷದ ಆರಂಭದಲ್ಲಿ ಆಕ್ಲೆಂಡ್‌ನಲ್ಲಿ ಶ್ರೀಲಂಕಾ ವಿರುದ್ಧ ಮಾರ್ಚ್‌ನಲ್ಲಿ ಏಕದಿನದ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಇಲ್ಲಿಯವರೆಗೆ, ರಚಿನ್ 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 39 ರ ಸರಾಸರಿಯಲ್ಲಿ 312 ರನ್ ಗಳಿಸಿದ್ದಾರೆ. ಾವರು ವಯಸ್ಸಿನವರು 6.31 ರ ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ನಿಂದನೆ : ಅನಂತಕುಮಾರ​ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement