ಭಾರತ ‘ಗಡುವು’ ನೀಡಿದ ನಂತರ ಭಾರತದಿಂದ ಅನೇಕ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ : ವರದಿ

ಟೊರೊಂಟೊ : ಕೆನಡಾ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ಸೂಚಿಸಿ ಅಕ್ಟೋಬರ್ 10ರ ಗಡುವು ನೀಡಿದ ನಂತರ ಕೆನಡಾವು ದೆಹಲಿಯ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ರಾಜತಾಂತ್ರಿಕರಲ್ಲಿ ಹೆಚ್ಚಿನವರನ್ನು ಕೌಲಾಲಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ ಸಿಂಗ್‌ ನಿಜ್ಜರ ಹತ್ಯೆಯಲ್ಲಿ ಭಾರತದ ಏಜೆಂಟರ ಸಂಬಂಧವಿದೆ ಎಂಬ ಆರೋಪದ ನಂತರ ರಾಜತಾಂತ್ರಿಕ ಬಿಕ್ಕಟ್ಟು ಭುಗಿಲೆದ್ದಿತು. ಈ ವಾರದ ಆರಂಭದಲ್ಲಿ ಭಾರತದಲ್ಲಿರುವ ಸುಮಾರು 40ರಷ್ಟು ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತವು ಕೆನಡಾಕ್ಕೆ ಸೂಚಿಸಿದ ನಂತರ ಕೆನಡಾದ ಈ ಕ್ರಮ ಬಂದಿದೆ ಎಂದು ಖಾಸಗಿ ಒಡೆತನದ ಕೆನಡಾದ ಟೆಲಿವಿಷನ್ ನೆಟ್‌ವರ್ಕ್ ಸಿಟಿವಿ ನ್ಯೂಸ್‌ನಲ್ಲಿ ವರದಿ ಮಾಡಿದೆ.
ಕೆನಡಾದ ಆರೋಪವನ್ನು ಭಾರತವು “ಅಸಂಬದ್ಧ” ಮತ್ತು “ಪ್ರೇರಣೆ” ಎಂದು ಸಾಋಾಸಗಟಾಗಿ ತಳ್ಳಿಹಾಕಿದೆ.
ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ಸಂಖ್ಯೆಗೆ ಸಮನವಾದ ಮಟ್ಟಕ್ಕೆ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯನ್ನು ತಗ್ಗಿಸಲು ಭಾರತ ಸರ್ಕಾರವು ಕೆನಡಾಕ್ಕೆ ಅಕ್ಟೋಬರ್ 10 ರವರೆಗೆ ಕಾಲಾವಕಾಶ ನೀಡಿದೆ ಎಂದು ಸಿಟಿವಿ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ನವದೆಹಲಿಯ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ಕೆನಡಾದ ರಾಜತಾಂತ್ರಿಕರಲ್ಲಿ ಹೆಚ್ಚಿನವರನ್ನು ಕೌಲಾಲಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಲಾಗಿದೆ” ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement