ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌: ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ ; ಅತಿ ಹೆಚ್ಚು ಸಿಕ್ಸರ್‌ ಹೊಡೆದ ಟಾಪ್‌ 10 ಆಟಗಾರರ ಪಟ್ಟಿ

ನವದೆಹಲಿ: ಭಾರತದ ಬ್ಯಾಟರ್ ರೋಹಿತ್ ಶರ್ಮಾ ಬುಧವಾರ ದೆಹಲಿಯಲ್ಲಿ ನಡೆದ ಐಸಿಸಿ ವಿಶ್ವಕಪ್ 2023ರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಅತಿ ಹೆಚ್ಚು ಸಿಕ್ಸರ್‌ ಹೊಡೆದ ದಾಖಲೆಯನ್ನು ಮುರಿದಿದ್ದಾರೆ, ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್‌ಗಳ ಹೊಡೆದ ಆಟಗಾರ ಎಂದು ಅವರು ನೂತನ ದಾಖಲೆ ಬರೆದಿದ್ದಾರೆ.
ವೆಸ್ಟ್ ಇಂಡೀಸ್‌ನ ಬಿರುಸಿನ ಬ್ಯಾಟರ್‌ ಕ್ರಿಸ್ ಗೇಲ್ ಅವರು ಒಟ್ಟು 553 ಸಿಕ್ಸರ್‌ಗಳನ್ನು (551 ಇನ್ನಿಂಗ್ಸ್) ಹೊಡೆದಿದ್ದಾರೆ. ಇದನ್ನು ರೋಹಿತ್ ಶರ್ಮಾ ಕೇವಲ 473 ಇನ್ನಿಂಗ್ಸ್‌ಗಳಲ್ಲಿಯೇ ಮುರಿದಿದ್ದಾರೆ. ಏಕದಿನದ ಪಂದ್ಯಗಳಲ್ಲಿ ಶಾಹಿದ್ ಅಫ್ರಿದಿ ಮತ್ತು ಕ್ರಿಸ್‌ ಗೇಲ್ ನಂತರದ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ ಆದರೆ T20I ಗಳಲ್ಲಿ 140 ಇನ್ನಿಂಗ್ಸ್‌ಗಳಿಂದ 182 ಸಿಕ್ಸರ್‌ಗಳೊಂದಿಗೆ ಸಿಕ್ಸರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 77 ಸಿಕ್ಸರ್‌ಗಳೊಂದಿಗೆ ಭಾರತೀಯರ ಪೈಕಿ ರೋಹಿತ್ ಮೂರನೇ ಪ್ರಮುಖ ಸಿಕ್ಸರ್ ಹೊಡೆದ ಆಟಗಾರರಾಗಿದ್ದಾರೆ. ವೀರೇಂದ್ರ ಸೆಹ್ವಾಗ್ (91) ಮತ್ತು ಎಂಎಸ್ ಧೋನಿ (78) ನಂತರ ಇವರು ಮೂರನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಹೊಡೆದ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.
ರೋಹಿತ್ ಶರ್ಮಾ (ಭಾರತ) – 554 ಸಿಕ್ಸರ್*
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 553 ಸಿಕ್ಸರ್
ಶಾಹಿದ್ ಅಫ್ರಿದಿ (ಪಾಕಿಸ್ತಾನ) – 476 ಸಿಕ್ಸರ್‌ಗಳು
ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) – 398 ಸಿಕ್ಸರ್‌ಗಳು
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) – 383 ಸಿಕ್ಸರ್‌ಗಳು
ಮಹೇಂದ್ರ ಸಿಂಗ್‌ ಧೋನಿ (ಭಾರತ) – 359 ಸಿಕ್ಸರ್‌ಗಳು
ಸನತ್ ಜಯಸೂರ್ಯ (ಶ್ರೀಲಂಕಾ) – 352 ಸಿಕ್ಸರ್‌ಗಳು
ಇಯಾನ್ ಮಾರ್ಗನ್ (ಇಂಗ್ಲೆಂಡ್) – 346 ಸಿಕ್ಸರ್‌ಗಳು
ಎ.ಬಿ. ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) – 328 ಸಿಕ್ಸರ್‌ಗಳು
ಜೋಸ್ ಬಟ್ಲರ್ – (ಇಂಗ್ಲೆಂಡ್‌)-312 ಸಿಕ್ಸರ್*

ಪ್ರಮುಖ ಸುದ್ದಿ :-   ಸಾರ್ವಜನಿಕರ ಖರೀದಿಗಾಗಿ ಅಯೋಧ್ಯಾ ರಾಮಲಲ್ಲಾ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ ಮೋದಿ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement