ಒಕ್ಕಲಿಗರ ಬಗ್ಗೆ ಪ್ರೊ. ಭಗವಾನ್ ವಿವಾದಾತ್ಮಕ ಹೇಳಿಕೆ : ಭುಗಿಲೆದ್ದ ಪ್ರತಿಭಟನೆ

ಮೈಸೂರು: ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವ ಪ್ರೊ. ಕೆ.ಎಸ್. ಭಗವಾನ್ ಈಗ ಒಕ್ಕಲಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ತೀವ್ರ ಪ್ರತಿಭಟನೆ ಎದುರಿಸುತ್ತಿದ್ದಾರೆ.
ಮೈಸೂರಿನ ಟೌನ್ ಹಾಲ್ ನಲ್ಲಿ ಶುಕ್ರವಾರ (ಅಕ್ಟೋಬರ್‌ 13) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಸಂಸ್ಕೃತಿ ಹೀನರು ಅಥವಾ ಅವರು ಹೀನ ಸಂಸ್ಕೃತಿಯವರು ಎಂದು ಹೇಳಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರು ಹೀಗೆ ಹೇಳಿ, “ಇದನ್ನು ನಾನು ಹೇಳಿದ್ದಲ್ಲ… ಕುವೆಂಪು ಅವರೇ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾನು ಉಲ್ಲೇಖ ಮಾಡುತ್ತಿದ್ದೇನೆ ಅಷ್ಟೆ’’ ‘ಅದನ್ನು ನಾನು ಹೇಳಿದರೆ ಹೊಡೆಯುತ್ತಾರೆ’ ಎಂದು ಹೇಳಿರುವುದು ಸಹ ಚರ್ಚೆಗೆ ಕಾರಣವಾಗಿದೆ.
ತಮ್ಮ ಹೇಳಿಕೆಗೆ ಇದು ನನ್ನ ಹೇಳಿಕೆಯಲ್ಲ, ಕುವೆಂಪು ಅವರ ಹೇಳಿಕೆ ಎಂದು ಅವರು ಉಲ್ಲೇಖಿಸಿದ್ದರೂ ಭಗವಾನ್ ಹೇಳಿಕೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ. ಶನಿವಾರ ಮೈಸೂರಿನಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಪ್ರತಿಭಟನೆ ನಡೆಸಿದೆ. ಈ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿರುವ ಭಗವಾನ್ ಅವರ ನಿವಾಸಕ್ಕೆ ಬಿಗಿಭದ್ರತೆ ನೀಡಲಾಗಿದೆ.

ಭಗವಾನ್‌ ನಿವಾಸದ ಮುಂದೆ ಒಕ್ಕಲಿಗರ ಪ್ರತಿಭಟನೆ…
ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿನಲ್ಲಿನ ಪ್ರಗತಿಪರ ಚಿಂತಕ ಪ್ರೊ.ಭಗವಾನ್ ನಿವಾಸಕ್ಕೆ ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದಿಂದ ಮುತ್ತಿಗೆಗೆ ಯತ್ನಿಸಲಾಯಿತು. ಮಹಿಷಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೊ. ಭಗವಾನ್ ‘ಒಕ್ಕಲಿಗರು ಸಂಸ್ಕೃತಿ ಹೀನರು. ಹೀಗೆಂದು ಕುವೆಂಪು ಹೇಳಿದ್ದರು’ ‘ಅದನ್ನು ನಾನು ಹೇಳಿದರೆ ಹೊಡೆಯುತ್ತಾರೆ’ ಎಂದು ಹೇಳಿರುವುದು ಬಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರೊ.ಭಗವಾನ್ ಹೇಳಿಕೆಯಿಂದ ಆಕ್ರೋಶಗೊಂಡ ಮೈಸೂರು ಚಾಮರಾಜ ಒಕ್ಕಲಿಗರ ಸಂಘದಿಂದ ಮೈಸೂರಿನ ಕುವೆಂಪು ನಗರದಲ್ಲಿರುವ ಪ್ರೊ.ಭಗವಾನ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ. ಭಾನುವಾರ ಬೆಳಗ್ಗೆಯೇ ಮೈಸೂರು ಚಾಮರಾಜನಗರದ ಒಕ್ಕಲಿಗರ ಸಂಘದವರು ಮುತ್ತಿಗೆ ಹಾಕಿ ಪ್ರೊ. ಭಗವಾನ್ ಅವರ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement