ಕೋಳಿ ಮಾಂಸದೊಂದಿಗೆ ಬಸ್ ಏರಿದ ಪ್ರಯಾಣಿಕ: ಪೊಲೀಸ್ ಠಾಣೆಗೆ ಬಂದ ಬಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಪ್ರಯಾಣಿಕನೊಬ್ಬ ಕೋಳಿ ಮಾಂಸದೊಂದಿಗೆ ಬಸ್ ಏರಿದ ಕಾರಣಕ್ಕೆ ಬಸ್‌ ಪೊಲೀಸ್‌ ಠಾಣೆಗೆ ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ವರದಿಯಾಗಿದೆ.
ಸುರೇಶ ಎಂಬವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ ಪುತ್ತೂರು ಕೆ.ಎಸ್.ಆರ್.ಟಿ.ಸಿ.ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಈತನ ಕೈಯಲ್ಲಿ ಚೀಲವೊಂದನ್ನು ತಂದಿದ್ದು, ಅದು ಏನು ಎಂದು ವಿಚಾರಿಸಿದ್ದಾನೆ. ಪ್ರಯಾಣಿಕ ಅದು ಕೋಳಿ ಮಾಂಸ ಎಂದು ತಿಳಿಸಿದ್ದಾನೆ, ಆಗ ನಿರ್ವಾಹಕ ಮಾಂಸ ತರಲು ಬಸ್‌ನಲ್ಲಿ ಅವಕಾಶವಿಲ್ಲ, ಹೀಗಾಗಿ ಬಸ್ ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಆದರೆ ಕೂಲಿ ಕಾರ್ಮಿಕನಿಗೆ ಇದರ ಬಗ್ಗೆ ಅರಿವಿಲ್ಲದ ಕಾರಣ ಬಸ್ ನಿಂದ ಇಳಿಯಲು ಒಪ್ಪಲಿಲ್ಲ. ಹೀಗಾಗಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಜೋರಾದ ನಂತರ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನು ಸೀದಾ ಪೋಲೀಸ್ ಠಾಣೆಗೆ ತಂದು ಅಲ್ಲಿ ಪ್ರಯಾಣಿಕನನ್ನು ಇಳಿಸಲಾಗಿದೆ. ನಂತರ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement