ಪ್ರಶ್ನೆಗಳಿಗೆ ಲಂಚ : ಬಿಜೆಪಿ ಸಂಸದ, ಸುಪ್ರೀಂ ಕೋರ್ಟ್ ವಕೀಲr ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮಹುವಾ ಮೊಯಿತ್ರಾ

ನವದೆಹಲಿ: ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ, ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಮತ್ತು ಹಲವಾರು ಮಾಧ್ಯಮ ಸಂಸ್ಥೆಗಳ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಮಂಗಳವಾರ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಸಂಸದರು “ಲಂಚ” ಪಡೆದಿದ್ದಾರೆ ಎಂದು ನಿಶಿಕಾಂತ್ ದುಬೆ ಮತ್ತು ದೇಹಾದ್ರಾಯಿ ಆರೋಪಿಸಿದ್ದಾರೆ. ಈ ಅರ್ಜಿಯನ್ನು ಮಂಗಳವಾರ ನ್ಯಾಯಮೂರ್ತಿ ಸಚಿನ್ ದತ್ತಾ ಅವರ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ಇದೀಗ ಶುಕ್ರವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ
ಮಹುವಾ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ “ನಿರಾಕರಿಸಲಾಗದ” ಪುರಾವೆಗಳಿವೆ ಎಂದು ಹೇಳಲು ದೆಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿ ನಿಶಿಕಾಂತ ದುಬೆ ಅವರು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಷಯದ ಬಗ್ಗೆ ಪ್ರತ್ಯೇಕ ತನಿಖೆಯನ್ನು ಪ್ರಾರಂಭಿಸುವಂತೆ ದುಬೆ ಅವರು, ಸ್ಪೀಕರ್ ಓಂ ಬಿರ್ಲಾ ಮತ್ತು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ ಅವರನ್ನು ಒತ್ತಾಯಿಸಿದ್ದಾರೆ.
ನಿಶಿಕಾಂತ ದುಬೆ ಮಾಡಿದ ಆರೋಪಗಳನ್ನು ಹಿರನಂದಾನಿ ಗುಂಪು ನಿರಾಕರಿಸಿದೆ ಮತ್ತು “ರಾಜಕೀಯ ವ್ಯವಹಾರದಲ್ಲಿ ಭಾಗಿಯಾಗಿಲ್ಲ” ಎಂದು ಅದು ಹೇಳಿದೆ.

ಅಕ್ಟೋಬರ್ 16 ರ ದಿನಾಂಕದ ನೋಟಿಸ್‌ನಲ್ಲಿ, ಪಶ್ಚಿಮ ಬಂಗಾಳದ ಕೃಷ್ಣನಗರದ ಸಂಸದರಾದ ಮಹುವಾ ಮೊಯಿತ್ರಾ ಅವರು “ಲೋಕಸಭಾ ಸದಸ್ಯರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಪ್ರಯೋಜನವನ್ನು” ಸ್ವೀಕರಿಸಿದ್ದೇನೆ ಎಂಬ ನನ್ನ ವಿರುದ್ಧ ಮಾಡಿದ ಆರೋಪಗಳು “ಮಾನಹಾನಿಕರ, ಸುಳ್ಳು, ಆಧಾರರಹಿತವಾಗಿದೆ” ಎಂದು ಹೇಳಿದ್ದಾರೆ. ನಿಶಿಕಾಂತ ದುಬೆ ಮತ್ತು ಜೈ ಅನಂತ ದೇಹದ್ರಾಯ್ ಅವರು “ವೈಯಕ್ತಿಕ ಮತ್ತು ರಾಜಕೀಯ ದ್ವೇಷದಿಂದ” ನನ್ನ ಖ್ಯಾತಿ ಮತ್ತು ಸೌಹಾರ್ದತೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಬ್ಬರು ಸಂಸದರಾದ ಮಹುವಾ ಮೊಯಿತ್ರಾ ಮತ್ತು ನಿಶಿಕಾಂತ್ ದುಬೆ ಅವರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯ” ಕ್ಕಾಗಿ ವಾಗ್ಯುದ್ಧ ನಡೆಸಿದ್ದಾರೆ ಎಂದು ಲೀಗಲ್‌ ನೋಟಿಸ್ ಹೇಳುತ್ತದೆ. ದುಬೆ ಅವರು ಮೊಯಿತ್ರಾ ವಿರುದ್ಧದ ವಿಶೇಷ ಹಕ್ಕು ನೋಟೀಸ್ ಅನ್ನು ಬೆಂಬಲಿಸಿದ್ದರು ಮತ್ತು ಸಂಸತ್ತಿನ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದರು ಎಂದು ಅದು ಉಲ್ಲೇಖಿಸುತ್ತದೆ.
“ಮಾರ್ಚ್ 2023 ರಲ್ಲಿ, ನಮ್ಮ ಕಕ್ಷಿದಾರರು (ಮಹುವಾ ಮೊಯಿತ್ರಾ) ನಿಶಿಕಾಂತ ದುಬೆ ಅವರ ಶೈಕ್ಷಣಿಕ ಅರ್ಹತೆಗಳು ಮತ್ತು ಅವರ ಚುನಾವಣಾ ನಾಮನಿರ್ದೇಶನ ಪತ್ರಗಳಲ್ಲಿ ಅನುಗುಣವಾದ ಬಹಿರಂಗಪಡಿಸುವಿಕೆಯ ಬಗ್ಗೆ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ” ಎಂದು ನೋಟಿಸ್ ಹೇಳಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತ ವಿದ್ಯಾರ್ಥಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಂಬೈ ಶಿಕ್ಷಕಿ...! ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಿದ್ದಳಂತೆ

ನಿಶಿಕಾಂತ ದುಬೆ ಅವರು ಮಹುವಾ ಮೊಯಿತ್ರಾ ವರಿದ್ಧ “ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ನೋಟಿಸ್‌ ಹೇಳಿದೆ.
ಮಹುವಾ ಮೊಯಿತ್ರಾ ಹಾಗೂ ವಕೀಲ ಜೈ ಅನಂತ ದೇಹದ್ರಾಯ್ ಅವರು ಹಲವಾರು ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದರು. ಆದರೆ “ವೈಯಕ್ತಿಕ ಕಾರಣಗಳಿಂದಾಗಿ ವಿಷಯಗಳು ಕಠೋರವಾಗಲು ಪ್ರಾರಂಭಿಸಿದವು” ಎಂದು ನೋಟಿಸ್ ಹೇಳುತ್ತದೆ.
ದೇಹದ್ರಾಯ್‌ ಅವರು “ಮಹುವಾ ಮೊಯಿತ್ರಾ ಅವರಿಗೆ ದುರುದ್ದೇಶಪೂರಿತ ಮತ್ತು ಅಸಭ್ಯ ಸಂದೇಶಗಳೊಂದಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಅವರ ಅಧಿಕೃತ ಸರ್ಕಾರಿ ನಿವಾಸಕ್ಕೆ ಅತಿಕ್ರಮಣ ಮಾಡಿ ಅವರ ಕೆಲವು ವೈಯಕ್ತಿಕ ಆಸ್ತಿಗಳನ್ನು ಕದ್ದಿದ್ದಾರೆ” ಎಂದು ನೋಟಿಸ್ ಉಲ್ಲೇಖಿಸಿದೆ. ಮಾರ್ಚ್ 25, 2023 ಮತ್ತು ಸೆಪ್ಟೆಂಬರ್ 23, 2023 ರಂದು – ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ದೇಹದ್ರಾಯ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅದು ಹೇಳಿದೆ.
ಲೋಕಸಭೆ ಸ್ಪೀಕರ್‌ಗೆ ಬರೆದ ಪತ್ರದಲ್ಲಿ ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಹಿಂಪಡೆಯುವಂತೆ ಮಹುವಾ ಮೊಯಿತ್ರಾ ಅವರು ನಿಶಿಕಾಂತ ದುಬೆ ಅವರಿಗೆ ಹೇಳಿದ್ದಾರೆ. ದುಬೆ ಮತ್ತು ದೇಹದ್ರಾಯ್ ಇಬ್ಬರೂ ಲಿಖಿತ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement