ಶಿವಮೊಗ್ಗ ಪ್ರವೇಶಿಸದಂತೆ ಪ್ರಮೋದ ಮುತಾಲಿಕಗೆ ನಿರ್ಬಂಧ

ಶಿವಮೊಗ್ಗ: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ ಅವರಿಗೆ ಶಿವಮೊಗ್ಗಕ್ಕೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಲಾಗಿದೆ.
ಶಿವಮೊಗ್ಗದ ಗಲಭೆ ಪೀಡಿತ ಪ್ರದೇಶ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಪ್ರಮೋದ್ ಮುತಾಲಿಕ್ ಅವರನ್ನು ಮಂಗಳವಾರ ರಾತ್ರಿ ಹೊಸನಗರದ ತಾಲೂಕಿನ ಮಾಸ್ತಿಕಟ್ಟೆ ಬಳಿ ತಡೆದ ಪೊಲೀಸರು ಮುಂದಿನ ಮೂವತ್ತು ದಿನಗಳ ಮಟ್ಟಿಗೆ ಶಿವಮೊಗ್ಗ ತೆರಳದಂತೆ ನಿರ್ಬಂಧ ಹೇರಲಾಗಿರುವ ಪ್ರತಿಯನ್ನು ನೀಡಿದ್ದಾರೆ.
ಗಲಭೆ ಪೀಡಿತ ಪ್ರದೇಶದಲ್ಲಿ ಪ್ರಮೋದ್ ಮುತಾಲಿಕ ಭೇಟಿ ನೀಡಿ ಪ್ರಚೋದನಕಾರಿ ಭಾಷಣ ಮಾಡಿದರೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಾಗಿದೆ ಅಲ್ಲದೆ ರಾಗಿಗುಡ್ಡ ಪ್ರದೇಶದಲ್ಲಿ ಈಗಾಗಲೇ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಲ್ಲಿದ್ದು ಹೀಗಾಗಿ ಮುಂದಿನ 30 ದಿನ ಶಿವಮೊಗ್ಗ ಪ್ರವೇಶಿಸದಂತೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement