ʼಸಂಗಮ ಸಿರಿʼ ಪ್ರಶಸ್ತಿಗೆ ಬಿಜ್ಜೂರ ಆಯ್ಕೆ

ಡಾ.ಸಂಗಮೇಶ ಹಂಡಿಗಿ

ಹುಬ್ಬಳ್ಳಿ: ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ “ಸಂಗಮ ಸಿರಿ”- 23ರ ಪ್ರಶಸ್ತಿಯನ್ನು ವಚನ ರಚನೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಸರೂರ್ ಗ್ರಾಮದ ಬಸನಗೌಡ ಬಿಜ್ಜೂರ ಅವರು ರಚಿಸಿದ” ಮೃದು ವಚನ” ಆಧುನಿಕ ವಚನ ಸಂಕಲನಕ್ಕೆ ನೀಡಲಾಗಿದೆ. ಪ್ರಶಸ್ತಿಯುವ10 ಸಾವಿರ ರೂ.ಹಾಗೂ ಫಲಕವನ್ನು ಒಳಗೊಂಡಿದೆ.
ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ.ಗೌಡಪ್ಪಗೊಳ ಆದ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಕಳೆದ ವರ್ಷ ಸಂಶೋಧನ ಕ್ಷೇತ್ರದಲ್ಲಿ ಡಾ.ದಂಡೆ ದಂಪತಿಗೆ ನೀಡಲಾಗಿತ್ತು.
ಆಯ್ಕೆ ಸಮೀತಿ ಸಭೆಯಲ್ಲಿ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿ ಡಾ. ವೀರೇಶ ಹಂಡಿಗಿ, ಆಯ್ಕೆ ಸಮಿತಿಯ ಮುಖ್ಯಸ್ಥರಾದ ಸಾಹಿತಿ ಮಹಾಂತಪ್ಪ ನಂದೂರು, ಸುಶೀಲೇಂದ್ರ ಕುಂದರಗಿ, ಜಿ.ಎಸ್. ಅಂಗಡಿ, ಡಾ. ಬಿ. ಎಸ್. ಮಾಳವಾಡ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕಾರ್ಯದರ್ಶಿ ರವೀಂದ್ರ ರಾಮದುರ್ಗಕರ ಇತರರು ಪಾಲ್ಗೊಂಡಿದ್ದರು. ನವೆಂಬರ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕವಿ ಪರಿಚಯ: ಸಿದ್ದನಗೌಡ ಬಿಜ್ಜೂರ ಅವರು ವೃತ್ತಿಯಿಂದ ಶಿಕ್ಷಕರಾಗಿ ಸದ್ಯ ಮುದ್ದೇಬಿಹಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತಿಯಾಗಿ ಗುರುತಿಸಿಕೊಂಡ ಸಿದ್ದನಗೌಡರು ವಚನ ಸಾಹಿತ್ಯದಲ್ಲಿಯೂ ತೊಡಗಿಸಿಕೊಂಡು ವಿಜಯಪುರ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌, ಪವಿತ್ರ ಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement