ವಿಶ್ವಕಪ್‌ : ಕೊಹ್ಲಿ 48ನೇ ಶತಕ, ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಏಳು ವಿಕೆಟ್‌ಗಳ ಭರ್ಜರಿ ಜಯ

ಪುಣೆ: ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಓಟ ಅಡೆತಡೆಯಿಲ್ಲದೆ ಮುಂದುವರಿದಿದೆ. ಗುರುವಾರ ರಾತ್ರಿ ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತದ ತಂಡವು ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಬಾಂಗ್ಲಾದೇಶದ ಎಂಟು ವಿಕೆಟ್‌ಗೆ 256 ರನ್‌ಗಳಿಗೆ ಉತ್ತರವಾಗಿ ಭಾರತವು 41.3 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 261 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ವಿರಾಟ್ ಕೊಹ್ಲಿ ಭರ್ಜರಿ ಶತಕ (103 , 97 ಬೌ, 6×4, 4×6) ಸಿಡಿಸಿ ಅಜೇಯರಾಗಿ ಉಳಿದರು.
ಮೊದಲ ಬ್ಯಾಟ್‌ ಮಾಡಿದ ಬಾಂಗ್ಲಾದೇಶ ತಂಡವು ಎಂಟು ವಿಕೆಟ್‌ ನಷ್ಟಕ್ಕೆ 256 ರನ್‌ ಗಳಿಸಿತು.
ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಇದು ಸತತ ನಾಲ್ಕನೇ ಗೆಲುವಾಗಿದೆ. ಶುಭಮನ್ ಗಿಲ್ (53) ಮತ್ತು ರೋಹಿತ್ ಶರ್ಮಾ (48) ಭಾರತಕ್ಕೆ ಉತ್ತಮ ಆರಂಭ ನೀಡಿದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತವು ಬಾಂಗ್ಲಾದೇಶವನ್ನು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 256 ರನ್‌ಗಳಿಗೆ ಸೀಮಿತಗೊಳಿಸಿದರು..
ಗಾಯದ ಕಾರಣದಿಂದ ಪಂದ್ಯದಿಂದ ಹೊರಗುಳಿದ ನಾಯಕ ಶಕೀಬ್ ಅಲ್ ಹಸನ್ ಅವರಿಲ್ಲದೆ ಭಾರತವನ್ನು ಎದುರಿಸುವುದು ಬಾಂಗ್ಲಾದೇಶಕ್ಕೆ ಕಠಿಣ ಸವಾಲಾಗಿತ್ತು. ನಜ್ಮುಲ್ ಹೊಸೈನ್ ಶಾಂಟೊ ನಾಯಕರಾದರು. ಬಾಂಗ್ಲಾದೇಶದ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಪುಣೆಯ ವಿಕೆಟ್‌ನಲ್ಲಿ ಅಬ್ಬರಿಸಲಿಲ್ಲ. ಭಾರತವು ಬಾಂಗ್ಲಾದೇಶವನ್ನು 256-8 ಗೆ ಸೀಮಿತಿಗೊಳಿಸಿತು..ತಂಝಿದ್ ಹಸನ್ ಮತ್ತು ಲಿಟ್ಟನ್ ದಾಸ್ ಅರ್ಧಶತಕಗಳನ್ನು ಬಾರಿಸಿದರು ಆದರೆ ಉಳಿದವರ ಗಣನೀಯ ಕೊಡುಗೆಯ ಕೊರತೆಯಿಂದಾಗಿ ಬಾಂಗ್ಲಾದೇಶವು ದೊಡ್ಡ ಸ್ಕೋರ್ ಅನ್ನು ಗಳಿಸುವಲ್ಲಿ ವಿಫಲವಾಯಿತು. ಬಾಂಗ್ಲಾದೇಶ ಗೌರವಾನ್ವಿತ ಮೊತ್ತವನ್ನು ಕಲೆಹಾಕಲು ಸಹಾಯ ಮಾಡಿದ ಮಹಮ್ಮದುಲ್ಲಾ ಮತ್ತೊಮ್ಮೆ ಪ್ರಭಾವಶಾಲಿಯಾದರು.
ಇದಕ್ಕೆ ಉತ್ತರವಾಗಿ ಭಾರತ ವಿರಾಟ್ ಕೊಹ್ಲಿ ಶತಕದ(97 ಎಸೆತಗಳಲ್ಲಿ 103*) ನೆರವಿನಿಂದ ಗೆಲುವಿನ ನಗೆ ಬೀರಿತು. ಅವರು ತಮ್ಮ 48 ನೇ ಶತಕ ಪೂರೈಇಸಿದರು. ಮತ್ತು ಈ ವಿಶ್ವಕಪ್‌ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಶತಕವನ್ನು ಬಾರಿಸಿದರು.
257 ರನ್‌ಗಳ ಮಧ್ಯಮ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (40 ಎಸೆತಗಳಲ್ಲಿ 48) ಮತ್ತು ಶುಭಮನ್ ಗಿಲ್ ಬಾಂಗ್ಲಾದೇಶದ ಬಾಂಗ್ಲಾ ಬೌಲರ್‌ಗಳನ್ನು ದಂಡಿಸುವ ಮೂಲಕ ಉತ್ತಮ ಆರಂಭ ನೀಡಿದರು. ಅವರು ಕೇವಲ 13 ಓವರ್‌ಗಳಲ್ಲಿ 88 ರನ್ ಸೇರಿಸಿದ್ದ ಈ ಜೋಡಿಯನ್ನು ಹಸನ್ ಮಹಮೂದ್ ಮುರಿದರು. ಇತ್ತೀಚೆಗಷ್ಟೇ ಡೆಂಗ್ಯೂನಿಂದ ಚೇತರಿಸಿಕೊಂಡಿರುವ ಗಿಲ್ ಅವರು ತಮ್ಮ ಐವತ್ತು ರನ್‌ ಗಳಿಸಿದರು. ಕೆ.ಎಲ್‌. ರಾಹುಲ್‌ 34 ರನ್‌ಗಳಿಸಿ ಅಜೇಯರಾಗಿ ಉಳಿದರು. ಶ್ರೇಯಸ್‌ ಅಯ್ಯರ್‌ 19 ರನ್‌ಗಳಿಸಿದರು.

ಪ್ರಮುಖ ಸುದ್ದಿ :-   ಹಮಾಸ್‌ ಜೊತೆ ನಂಟು ; ಅಮೆರಿಕದಲ್ಲಿ ಭಾರತದ ಸಂಶೋಧನಾ ವಿದ್ಯಾರ್ಥಿಯ ಬಂಧನ : ಶೀಘ್ರವೇ ಗಡೀಪಾರು

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement