ಸೂಪರ್‌ ಶ್ವಾನ…: ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದ ನಾಯಿ ; ಮುಂದೇನಾಯ್ತು ನೋಡಿ

ಮನುಷ್ಯ ಎತ್ತರದ ಕಟ್ಟಡದ ಮೇಲಿನಿಂದ ವಿವಿಧ ಸಾಹಸಗಳನ್ನು ಮಾಡುವುದನ್ನು ನೀವೆಲ್ಲಾ ನೋಡಿರ್ತಿರಾ. ಆದ್ರೆ ಅದೇ ರೀತಿ ನಾಯಿಯೊಂದು ಸಾಹಸವನ್ನು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಆ ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣ X ನಲ್ಲಿ ಕಪ್ಪು ಬಣ್ಣದ ಬೀದಿ ನಾಯಿಯೊಂದು ಬಹುಮಹಡಿ ಕಟ್ಟಡದಿಂದ ಜಿಗಿಯುವ ಸಣ್ಣ ವೀಡಿಯೊ ಕ್ಲಿಪ್‌ ಈಗ ಸದ್ದು ಮಾಡುತ್ತಿದೆ.
ವೀಡಿಯೊದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ 5 ನೇ ಮಹಡಿಯಲ್ಲಿ ನಾಯಿಯು ಇರುವುದು ಕಂಡು ಬಂದಿದೆ. ನಾಯಿ ಕಟ್ಟಡದ ಅಂಚಿಗೆ ಬಂದು ಕಳಗೆ ನೋಡುತ್ತದೆ ಹಾಗೂ ತಾನು ಎಷ್ಟು ಎತ್ತರದಲ್ಲಿ ಕಟ್ಟಡದ ಮೇಲೆ ಇದ್ದೇನೆ ಅಳತೆ ಮಾಡಿ ಅಂದಾಜು ಮಾಡುತ್ತಿರುವಂತೆ ಕಾಣುತ್ತದೆ. ನಂತರ ಎತ್ತರದ ಆ ಕಟ್ಟಡದ ಮೇಲಿನಿಂದ ನಾಯಿ ಕೆಳಕ್ಕೆ ಜಂಪ್ ಮಾಡುತ್ತದೆ.

ವಿಶೇಷವೆಂದರೆ ಕೆಳಭಾಗದಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆಯೂ ನಾಯಿಯು ತನ್ನ ಈ ಸಾಹಸದಿಂದ ಬದುಕುಳಿದಿದೆ. ಅಷ್ಟು ಎತ್ತರದಿಂದ ಬಿದ್ದರೂ ಏನೂ ಆಗಿಯೇ ಇಲ್ಲ ಎಂಬಂತೆ ಅಲ್ಲಿಂದ ಓಡಿ ಹೋಗಿದೆ.
ನಾಯಿ ಕಟ್ಟಡದ ಮೇಲಿನಿಂದ ಹಾರುವ ಸಂದರ್ಭದಲ್ಲಿ ಕೆಳಗಿದ್ದ ಬೇಲಿ ಮೇಲೆ ಬಂದು ಬಿದ್ದಿದೆ. ವೈರಲ್ ಆಗಿರುವ ಈ ವಿಡಿಯೋ 11.6 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಆಗಿದೆ.. crazyclipsonly ಎಂಬ ಹೆಸರಿನ X (ಹಿಂದೆ ಟ್ವಿಟರ್) ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊಕ್ಕೆ “5ನೇ ಮಹಡಿಯಿಂದ ಜಿಗಿದ ನಂತರ ನಾಯಿ ಏನೂ ಆಗಿಲ್ಲ ಎಂಬಂತೆ ಹೆಜ್ಜೆ ಹಾಕಿದೆ” ಎಂಬ ಶೀರ್ಷಿಕೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಮುನ್ನಡೆ

ಎಕ್ಸ್‌ನಲ್ಲಿ ಬಳಕೆದಾರರೊಬ್ಬರು, “ಅದು ಸೂಪರ್ ನಾಯಿ. ಆದರೆ ಏಕೆ ಜಿಗಿದಿದೆ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು “ಇದು ಅಪರೂಪದ ನಾಯಿ ಎಂದು ಬರೆದಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement