ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ

ಭೂಪಾಲ್‌: ಮುಂದಿನ ತಿಂಗಳು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 88 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ ನಂತರ, ಶುಕ್ರವಾರ ರಾಜ್ಯದ ಹಲವು ಸ್ಥಳಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಪಕ್ಷದ ಕಾರ್ಯಕರ್ತರು ಕೆಲವು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದರ ವಿರುದ್ಧ ಮತ್ತು ಕೆಲವರಿಗೆ ಟಿಕೆಟ್ ನಿರಾಕರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುರ್ಹಾನ್‌ಪುರ, ಶಾಜಾಪುರ ಜಿಲ್ಲೆಯ ಶುಜಾಲ್‌ಪುರ, ನರ್ಮದಾಪುರಂ ಜಿಲ್ಲೆಯ ಸಿಯೋನಿ-ಮಾಲ್ವಾ, ರೇವಾ ಜಿಲ್ಲೆಯ ಸೆಮಾರಿಯಾ, ರತ್ಲಾಮ್ ಜಿಲ್ಲೆಯ ಜೌರಾ ಮತ್ತು ಅಲೋಟ್ ಸೇರಿದಂತೆ ಇತರ ಕೆಲವು ಕ್ಷೇತ್ರಗಳಲ್ಲಿ ಕೆಲವರಿಗೆ ಟಿಕೆಟ್‌ ನೀಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದರು.
ಪಕ್ಷದಿಂದ ಕಣಕ್ಕಿಳಿಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್‌ನ ಮಾಜಿ ಲೋಕಸಭಾ ಸದಸ್ಯ ಪ್ರೇಮಚಂದ್‌ ಗುಡ್ಡು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.ಅವರು ರತ್ಲಾಮ್‌ನ ಅಲೋಟ್ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು, ಆದರೆ ಪಕ್ಷವು ಹಾಲಿ ಶಾಸಕ ಮನೋಜ್ ಚಾವ್ಲಾ ಅವರನ್ನು ಅಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತು.
ನವದೆಹಲಿ ಮತ್ತು ಭೋಪಾಲ (ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕತ್ವ) ನಿರ್ಧಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಗುಡ್ಡು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂದು ಸುಳಿವು ನೀಡಿದರು.

ಪ್ರಮುಖ ಸುದ್ದಿ :-   "ನೀವು ಮತವನ್ನೂ ಹಾಕಿಲ್ಲ...": ತಮ್ಮದೇ ಪಕ್ಷದ ಸಂಸದನಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ..

ಅತೃಪ್ತ ಕಾಂಗ್ರೆಸ್ ಕಾರ್ಯಕರ್ತರ ಗುಂಪು ರತ್ಲಾಮ್ ಜಿಲ್ಲೆಯ ಜೌರಾ ಕ್ಷೇತ್ರದಿಂದ ಪಕ್ಷದಿಂದ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿ ಹಿಮ್ಮತ್ ಶ್ರೀಮಲ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದರು. ಪಕ್ಷದ ಕಾರ್ಯಕರ್ತರು ಶ್ರೀಮಲ್ ಅವರನ್ನು ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಶಜಾಪುರ ಜಿಲ್ಲೆಯ ಶುಜಲ್‌ಪುರ ವಿಧಾನಸಭಾ ಕ್ಷೇತ್ರದಿಂದ ರಾಮವೀರ್ ಸಿಂಗ್ ಸಿಕರ್ವಾರ್ ಅವರಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು, ಅವರು ಸಾರಾಯಿ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಅವರನ್ನು ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಟಿಕೆಟ್ ನಿರಾಕರಿಸಿದ ಯೋಗೇಂದ್ರ ಸಿಂಗ್ ಅಕಾ ಬಂಟಿ ಬನಾ ಬೆಂಬಲಿಗರು ಸಿಕರ್ವಾರ್ ಅವರ ಪ್ರತಿಕೃತಿ ದಹಿಸಿದರು. ನರ್ಮದಾಪುರಂ ಜಿಲ್ಲೆಯ ಸಿಯೋನಿ-ಮಾಲ್ವಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ಮಾಜಿ ಶಾಸಕ ಓಂಪ್ರಕಾಶ್ ರಘುವಂಶಿ ಅವರ ಬೆಂಬಲಿಗರು ಸಹ ಪ್ರತಿಭಟನೆ ನಡೆಸಿದರು. ಅಜಯ ಬಲರಾಮ ಪಟೇಲ್ ಬದಲಿಗೆ ರಘುವಂಶಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಗ್ರ್ಯಾಂಡ್ ಓಲ್ಡ್ ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ತಡರಾತ್ರಿ ಬಿಡುಗಡೆ ಮಾಡಿದೆ. ಇದರೊಂದಿಗೆ ನವೆಂಬರ್ 17ಕ್ಕೆ ನಿಗದಿಯಾಗಿದ್ದ 230 ಸದಸ್ಯ ಬಲದ ವಿಧಾನಸಭೆಗೆ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳನ್ನು ಘೋಷಿಸಂತಾಗಿದೆ.
ಜಿಲ್ಲಾಧಿಕಾರಿ ನಿಶಾ ಬೇಂಗ್ರೆ ಅವರು ಟಿಕೆಟ್ ಬಯಸುತ್ತಿರುವ ಬೇತುಲ್ ಜಿಲ್ಲೆಯ ಆಮ್ಲಾ ಕ್ಷೇತ್ರದಿಂದ ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ, ಯಾಕೆಂದರೆ ಆಡಳಿತಾರೂಢ ಬಿಜೆಪಿ ಸರ್ಕಾರವು ಅವರ ಸೇವೆಗೆ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.

ಪ್ರಮುಖ ಸುದ್ದಿ :-   ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳು 3 ಅವಕಾಶಗಳನ್ನು ಕಳೆದುಕೊಂಡಿವೆ...ಆದರೆ ಈಗ...: ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement