‘ನನಗೆ ಬೆಂಬಲವಿಲ್ಲ ಮಾತ್ರವಲ್ಲ…’: 25 ವರ್ಷಗಳ ನಂತರ ಬಿಜೆಪಿಗೆ ನಟಿ ಗೌತಮಿ ರಾಜೀನಾಮೆ

ಚೆನ್ನೈ: ತಮ್ಮ ಆಸ್ತಿ ಕಬಳಿಸಿದ ವ್ಯಕ್ತಿಗೆ ಪಕ್ಷದ ಹಿರಿಯರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಗೌತಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಗೌತಮಿ ಅವರು ತಮ್ಮ ದುಸ್ಥಿತಿಯನ್ನು ‘X’ ನಲ್ಲಿ ತಿಳಿಸಿದ್ದಾರೆ, ತಾನು ಕಳೆದ 25 ವರ್ಷಗಳಿಂದ ಬಿಜೆಪಿಯ ಸದಸ್ಯನಾಗಿದ್ದೆ ಮತ್ತು ಪ್ರಾಮಾಣಿಕ ಬದ್ಧತೆಯಿಂದ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಪಕ್ಷದಿಂದ ಬೆಂಬಲದ ಕೊರತೆಯನ್ನು ಉಲ್ಲೇಖಿಸಿದ ಅವರು, ಪಕ್ಷದ ಹಲವಾರು ಜನರು ತನಗೆ ದ್ರೋಹ ಮಾಡಿದ ವ್ಯಕ್ತಿಗೆ ಸಕ್ರಿಯವಾಗಿ ಸಹಾಯ ಮತ್ತು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿದ್ದ ನಟಿ ಗೌತಮಿ ಅವರು , ಸಿ ಅಳಗಪ್ಪನ್ ಎಂಬ ವ್ಯಕ್ತಿ ತನ್ನ ಹಣ, ಆಸ್ತಿ ಮತ್ತು ದಾಖಲೆಗಳನ್ನು ಲಪಟಾಯಿಸಿದ್ದಾರೆ ಎಂದು ಹೇಳಿದ್ದು, ಆತನಿಗೆ ಪಕ್ಷದ ಹಿರಿಯ ಸದಸ್ಯರು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟಿನ ಹಂತದಲ್ಲಿ ನಿಂತಿದ್ದೇನೆ ಮತ್ತು ನನಗೆ ಪಕ್ಷ ಮತ್ತು ನಾಯಕರಿಂದ ಯಾವುದೇ ಬೆಂಬಲವಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ, ಆದರೆ ಪಕ್ಷದಲ್ಲಿನ ಹಲವರು ಸಕ್ರಿಯವಾಗಿ ಅಳಗಪ್ಪನ್ ಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ ಎಂಬುದು ನನ್ನ ಅರಿವಿಗೆ ಬಂದಿದೆ. ನನ್ನ ನಂಬಿಕೆಗೆ ದ್ರೋಹ ಬಗೆದು ನನ್ನ ಜೀವನದ ಉಳಿತಾಯಕ್ಕೆ ಅಳಗಪ್ಪನ್ ವಂಚಿಸಿದ್ದಾರೆ ಎಂದು ಗೌತಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ 2021 ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಟಿಕೆಟ್‌ ಕೊಡದಿದ್ದರೂ, ತಾನು ಬಿಜೆಪಿಗೆ ಬದ್ಧನಾಗಿದ್ದೆ ಎಂದು ಗೌತಮಿ ತಾಡಿಮಲ್ಲ ತಮ್ಮ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಭಾರವಾದ ಹೃದಯ ಮತ್ತು ಭ್ರಮನಿರಸನ” ದಿಂದ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಮತ್ತು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಕೇಸರಿ ಪಕ್ಷದ ತಮಿಳುನಾಡಿನ ಮುಖ್ಯಸ್ಥ ಕೆ. ಅಣ್ಣಾಮಲೈ ಸೇರಿದಂತೆ ಇತರರನ್ನು ಟ್ಯಾಗ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಪವಿತ್ರಗೌಡ ನಟ ದರ್ಶನ್ ಪತ್ನಿ ಅಲ್ಲ ; ವಕೀಲರ ಸ್ಪಷ್ಪನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement