ರಾಜ್ಯದಲ್ಲಿ 5980 ಡಾಟಾ ಎಂಟ್ರಿ ಆಪರೇಟರುಗಳ ನೇರ ನೇಮಕಾತಿ : ವಿದ್ಯಾರ್ಹತೆ, ವೇತನ, ಇತರ ಮಾಹಿತಿಗಳ ಬಗ್ಗೆ ಇಲ್ಲಿದೆ…

ಬೆಂಗಳೂರು : ಎಲ್ಲ ಗ್ರಾಮ ಪಂಚಾಯತಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯತಗಳಲ್ಲೂ ಪ್ರತಿ ಗ್ರಾಪಂಗೆ ಒಬ್ಬರಂತೆ ಒಟ್ಟು 5,980 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಸೂಚನೆ ನೀಡಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ(PUC) ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಶಿಕ್ಷಣದ ಸರ್ಟಿಫಿಕೇಟ್ ಕೂಡ ಹೊಂದಿರಬೇಕು ಎಂದು ತಿಳಿಸಲಾಗಿದೆ.
ರಾಜ್ಯದ ಗ್ರಾಮ ಪಂಚಾಯತಗಳಲ್ಲಿ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಈ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ.

ದ್ವಿತೀಯ ಪಿಯುಸಿ ಅರ್ಹತೆಯ ಅಂಕಗಳು ಹಾಗೂ ರಾಜ್ಯ ಸರ್ಕಾರ ದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಕೇಂದ್ರಗಳಿಂದ ತರಬೇತಿ ಪಡೆದ ಕಂಪ್ಯೂಟರ್ ಟ್ರೈನಿಂಗ್ ತರಬೇತಿ ಪ್ರಮಾಣಪತ್ರ ಆಧರಿಸಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಅದರಲ್ಲಿ ಆಯ್ಕೆಯಾದವರನ್ನು ನೇಮಕ ಮಾಡಲಾಗುತ್ತದೆ. ಆಯ್ಕೆಯಾದ ನೌಕರರಿಗೆ ಪ್ರತಿ ತಿಂಗಳು 16,738 ರೂ. ವೇತನ ನೀಡಲು ಸೂಚನೆ ನೀಡಲಾಗಿದೆ. ಅರ್ಜಿ ಸ್ವೀಕಾರ ಮಾಡುವ ದಿನಾಂಕದ ಬಗ್ಗೆ ನಿಖರವಾದ ಮಾಹಿತಿಯಿಲ್ಲ.
ಡಾಟಾ ಎಂಟ್ರಿ ಆಪರೇಟರ್ ಗಳ ನೇರ ನೇಮಕಾತಿಗೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲೆಯನ್ನು ಒಂದು ಜೇಷ್ಠತಾ ಘಟಕವೆಂದು ಪರಿಗಣಿಸಿ ಉಲ್ಲೇಖ (1) ರಲ್ಲಿ ನಿರ್ದೇಶಿಸಿರುವಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಈ ಹುದ್ದೆಗೆ ಆಯ್ಕೆಯಾದ ನೌಕರರಿಗೆ ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನವನ್ನು ಪಾವತಿಸಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರು ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement