ಮಧ್ಯಪ್ರದೇಶ ವಿಧಾನಸಭಾ ಚುನಾವಣೆ : ವಿವಿಧ ಸಮುದಾಯಗಳ ಮತದಾರರ ಒಲವು ಯಾರತ್ತ..? ಬಿಜೆಪಿಯೋ-ಕಾಂಗ್ರೆಸ್ಸೋ..? ಇಂಡಿಯಾ ಟಿವಿ ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ಮುಂದಿನ ತಿಂಗಳು ನವೆಂಬರ್ 17 ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿವಿಧ ಸಮುದಾಯಗಳಿಗೆ ನಂಬರ್ ಒನ್ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಕಂಡುಬಂದಿದೆ.
ಬ್ರಾಹ್ಮಣ, ಬನಿಯಾ, ಕಿರಾರ್-ಧಕಡ್, ಕುರ್ಮಿ, ಯಾದವ್, ಜಾತವ್-ಸತ್ನಾಮಿ ಮತ್ತು ರಜಪೂತ್, ಅಲ್ಪಸಂಖ್ಯಾತ ಸೇರಿದಂತೆ ಹಲವಾರು ಸಮುದಾಯಗಳಲ್ಲಿ ಕಮಲನಾಥ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ಹೆಚ್ಚು ಮುಂದಿದೆ ಎಂದು ಸಮೀಕ್ಷೆಗಳು ತೋರಿಸಿವೆ. ರಾಜ್ಯದಲ್ಲಿ ಮುಸಲ್ಮಾನರ ಮತಗಳು ಮತ್ತು ಭಿಲ್ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬೀಳುವ ಸಾಧ್ಯತೆ ಇದೆ. ಹಿಂದಿನ ಸಮೀಕ್ಷೆಯು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಮತ್ತು 116 ಸ್ಥಾನಗಳ ಅರ್ಧದಷ್ಟು ಗಡಿಯನ್ನು ಮುಟ್ಟಬಹುದು ಎಂದು ಅಂದಾಜಿಸಿದೆ. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆಲ್ಲಬಹುದು ಹಾಗೂ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ 110 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯು ಅಂದಾಜಿಸಿದೆ.

ಬ್ರಾಹ್ಮಣ, ಬನಿಯಾ ಮತ್ತು ರಜಪೂತ ಸಮುದಾಯಗಳಲ್ಲಿ ಯಾರು ಮುಂದೆ ..?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ ಶೇ.80 ರಷ್ಟು ಬ್ರಾಹ್ಮಣ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ಕೇವಲ ಶೇ.12 ರಷ್ಟು ಬ್ರಾಹ್ಮಣ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 8 ಪ್ರತಿಶತ ಬ್ರಾಹ್ಮಣ ಮತದಾರರು ಇತರ ಪಕ್ಷಗಳ ಪರವಾಗಿರಬಹುದು ಎಂದು ಅದು ಹೇಳಿದೆ. ಅದೇ ರೀತಿ ಶೇ.68ರಷ್ಟು ಬನಿಯಾ ಮತದಾರರು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಬನಿಯಾ ಮತಗಳಲ್ಲಿ ಕೇವಲ ಶೇ.14ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಸುಮಾರು 18 ಪ್ರತಿಶತದಷ್ಟು ಬನಿಯಾ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಅದು ಹೇಳಿದೆ. ಸಮೀಕ್ಷೆಯ ಪ್ರಕಾರ, ರಜಪೂತ ಮತದಾರರಲ್ಲಿ 72 ಪ್ರತಿಶತದಷ್ಟು ಜನರು ಬಿಜೆಪಿಗೆ ಮತ ಹಾಕುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಶೇ.12 ರಜಪೂತ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 16 ಪ್ರತಿಶತ ರಜಪೂತ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

ಕುರ್ಮಿ, ಯಾದವ್ ಮತ್ತು ಇತರ ಹಿಂದುಳಿದ ಸಮುದಾಯಗಳಲ್ಲಿ ಯಾರು ಮುನ್ನಡೆ…?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಪ್ರಕಾರ, ಮಧ್ಯಪ್ರದೇಶದಲ್ಲಿ ಶೇ.54ರಷ್ಟು ಕುರ್ಮಿ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ಶೇ.41ರಷ್ಟು ಕುರ್ಮಿ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 5 ಪ್ರತಿಶತದಷ್ಟು ಕುರ್ಮಿ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು. ಅದೇ ರೀತಿ ಶೇ.47 ಯಾದವ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಶೇ.35ರಷ್ಟು ಯಾದವ ಮತಗಳು ಬೀಳುವ ಸಾಧ್ಯತೆ ಇದೆ. ಸುಮಾರು 18 ಪ್ರತಿಶತ ಯಾದವ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು. ಸಮೀಕ್ಷೆಯ ಪ್ರಕಾರ ಶೇ.56ರಷ್ಟು ಇತರೆ ಹಿಂದುಳಿದ ಸಮುದಾಯಗಳು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ಶೇ.32ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 12 ಪ್ರತಿಶತ ಮತದಾರರು ಇತರ ಪಕ್ಷಗಳ ಪರವಾಗಿರಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.

ಕಿರಾರ್-ಧಕಡ್, ಭೀಲ್, ಜಾತವ್-ಸತ್ನಾಮಿ,  ಇತರ ದಲಿತ ಸಮುದಾಯಗಳ ಮತದಾರರ  ಒಲವು…?
ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ 84 ಪ್ರತಿಶತ ಕಿರಾರ್-ಧಕಡ್ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಕೇವಲ 15 ಪ್ರತಿಶತದಷ್ಟು ಕಿರಾರ್-ಧಕಡ್ ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಸುಮಾರು 1 ಪ್ರತಿಶತದಷ್ಟು ಕಿರಾರ್-ಧಕಡ್ ಮತದಾರರು ಇತರ ಪಕ್ಷಗಳ ಪರವಾಗಿರಬಹುದು.
ಆದಾಗ್ಯೂ, ಸುಮಾರು 54 ಪ್ರತಿಶತ ಭಿಲ್ ಮತದಾರರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಸಾಧ್ಯತೆಯಿದೆ. ಬಿಜೆಪಿ ಶೇ.35ರಷ್ಟು ಭೀಲ್ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಶೇಕಡ 11 ರಷ್ಟು ಭಿಲ್ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿ ಶೇ.45ರಷ್ಟು ಜಾತವ್-ಸತ್ನಾಮಿ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಶೇ.42ರಷ್ಟು ಜಾತವ್-ಸತ್ನಾಮಿ ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಸುಮಾರು 13 ಪ್ರತಿಶತದಷ್ಟು ಜಾತವ್-ಸತ್ನಾಮಿ ಮತದಾರರು ಇತರ ಪಕ್ಷಗಳ ಪರವಾಗಿರಬಹುದು. ರಾಜ್ಯದಲ್ಲಿ ಸುಮಾರು 44 ಪ್ರತಿಶತದಷ್ಟು ಇತರ ದಲಿತರು ಬಿಜೆಪಿಗೆ ಮತ ಹಾಕಬಹುದು ಮತ್ತು ಅವರಲ್ಲಿ ಸುಮಾರು 40 ಪ್ರತಿಶತದಷ್ಟು ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬಹುದು ಎಂದು ಸಮೀಕ್ಷೆ ತೋರಿಸುತ್ತದೆ. ಸುಮಾರು 16 ಪ್ರತಿಶತದಷ್ಟು ಇತರ ದಲಿತ ಮತದಾರರು ಇತರ ಪಕ್ಷಗಳ ಪರವಾಗಿರಬಹುದು ಎಂದು ಸಮೀಕ್ಷೆ ಹೇಳಿದೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಮುಸ್ಲಿಂ ಮತದಾರರ ಒಲವು ಯಾರ ಪರ..?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ 87 ಪ್ರತಿಶತದಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಸಾಧ್ಯತೆಯಿದೆ. ಬಿಜೆಪಿ ಕೇವಲ ಶೇ.2ರಷ್ಟು ಮುಸ್ಲಿಂ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 11 ಪ್ರತಿಶತದಷ್ಟು ಮುಸ್ಲಿಂ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಅದು ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement