ರಾಜಸ್ಥಾನ ವಿಧಾನಸಭೆ ಚುನಾವಣೆ: ಯಾವ್ಯಾವ ಸಮುದಾಯಗಳ ಒಲವು ಯಾವ ಪಕ್ಷಗಳತ್ತ ? ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳುವುದೇನು..?

ಮುಂದಿನ ತಿಂಗಳು ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಸಮುದಾಯಗಳಿಗೆ ಯಾವ್ಯಾವ ಪಕ್ಷಗಳು ಪ್ರಮುಖ ಆಯ್ಕೆಯಾಗಿವೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ತಿಳಿಸಿದೆ.
ರಜಪೂತ, ಬನಿಯಾ, ಜಾಟ್ ಮತ್ತು ಮೀನಾ ಸೇರಿದಂತೆ ಹಲವು ಸಮುದಾಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ಸಮೀಕ್ಷೆಗಳು ತೋರಿಸಿವೆ. ರಾಜ್ಯದಲ್ಲಿ ಗುಜ್ಜರ್, ಮಾಲಿ ಮತ್ತು ಮುಸ್ಲಿಮರ ಮತಗಳನ್ನು ಕಾಂಗ್ರೆಸ್ ಹೆಚ್ಚು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಈ ಹಿಂದೆ ಸಮೀಕ್ಷೆಯು 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 125 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಹಾಗೂ ಕಾಂಗ್ರೆಸ್ 72 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.
ರಜಪೂತ ಮತ್ತು ವೈಶ್ಯ (ಬನಿಯಾ ಮತ್ತು ಅಗರ್ವಾಲ್) ಸಮುದಾಯಗಳಲ್ಲಿ ಯಾರು ಮುಂದೆ…?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಶೇ.73 ರಜಪೂತ ಮತದಾರರು ರಾಜಸ್ಥಾನದಲ್ಲಿ ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಕೇವಲ ಶೇ.15 ರಜಪೂತ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 12 ಪ್ರತಿಶತ ರಜಪೂತ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು. ಅದೇ ರೀತಿ ಶೇ.64ರಷ್ಟು ಬನಿಯಾ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಬನಿಯಾ ಮತಗಳಲ್ಲಿ ಕೇವಲ ಶೇಕಡಾ 20 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಸುಮಾರು 16 ಪ್ರತಿಶತದಷ್ಟು ಬನಿಯಾ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ...

ಜಾಟ್, ಮೀನಾ ಮತ್ತು ಗುಜ್ಜರ್ ಸಮುದಾಯಗಳಲ್ಲಿ ಯಾರ ಪರ ಒಲವು..?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಶೇ.44 ರಷ್ಟು ಜಾಟ್ ಮತದಾರರು ರಾಜಸ್ಥಾನದಲ್ಲಿ ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಶೇ.24ರಷ್ಟು ಜಾಟ್ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 32 ಪ್ರತಿಶತದಷ್ಟು ಜಾಟ್ ಮತದಾರರು ಇತರ ಪಕ್ಷಗಳ ಪರವಾಗಿರಬಹುದು. ಅದೇ ರೀತಿ ಶೇ.65 ರಷ್ಟು ಮೀನಾ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಶೇ.18ರಷ್ಟು ಮತಗಳನ್ನು ಕಾಂಗ್ರೆಸ್ ಪಡೆಯುವ ಸಾಧ್ಯತೆ ಇದೆ. ಸುಮಾರು 17 ಪ್ರತಿಶತ ಮೀನಾ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ, ರಾಜಸ್ಥಾನದಲ್ಲಿ ಕೇವಲ 27 ಪ್ರತಿಶತ ಗುಜ್ಜರ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಶೇ.63 ರಷ್ಟು ಗುಜ್ಜರ್ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 10 ಪ್ರತಿಶತ ಇತರ ಗುಜ್ಜರ್ ಮತದಾರರು ಇತರ ಪಕ್ಷಗಳ ಪರವಾಗಿರಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಮಾಲಿ, ಭೀಲ್, ಜಾತವ್ ಮತ್ತು ಇತರ ಹಿಂದುಳಿದ ಸಮುದಾಯಗಳಲ್ಲಿ ಯಾರ ಪರ ಒಲವು..?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ, ರಾಜಸ್ಥಾನದಲ್ಲಿ ಕೇವಲ 12 ಪ್ರತಿಶತ ಮಾಲಿ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆಯಿದೆ. 84ರಷ್ಟು ಮಾಲಿ ಮತಗಳನ್ನು ಕಾಂಗ್ರೆಸ್ ಪಡೆಯುವ ಸಾಧ್ಯತೆ ಇದೆ. ಸುಮಾರು 4 ಪ್ರತಿಶತ ಮಾಲಿ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು. ಸುಮಾರು 32 ಪ್ರತಿಶತ ಭಿಲ್ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆಯಿದೆ. 46ರಷ್ಟು ಭೀಲ್ ಮತಗಳನ್ನು ಕಾಂಗ್ರೆಸ್ ಪಡೆಯುವ ಸಾಧ್ಯತೆ ಇದೆ. ಶೇಕಡ 22ರಷ್ಟು ಭಿಲ್ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ ಶೇ.40 ರಷ್ಟು ಜಾತವ್ ಮತದಾರರು ಬಿಜೆಪಿಗೆ ಮತ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಶೇ.42 ರಷ್ಟು ಜಾತವ್ ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಸುಮಾರು 18 ಪ್ರತಿಶತದಷ್ಟು ಜಾತವ್ ಮತದಾರರು ಇತರ ಪಕ್ಷಗಳ ಪರವಾಗಿರಬಹುದು. ಇತರ OBC ಮತದಾರರಲ್ಲಿ ಸುಮಾರು 45 ಪ್ರತಿಶತದಷ್ಟು ಜನರು ರಾಜಸ್ಥಾನದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆಯಿದೆ ಮತ್ತು 42% ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬಹುದು ಎಂದು ಕಂಡುಬಂದಿದೆ.
ಮುಸ್ಲಿಂ ಮತದಾರರ ಒಲವು ಯಾರತ್ತ…?
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಪ್ರಕಾರ, ಶೇ.92 ರಷ್ಟು ಮುಸ್ಲಿಂ ಮತದಾರರು ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ ಇದೆ. ಬಿಜೆಪಿ ಕೇವಲ ಶೇ.3ರಷ್ಟು ಮುಸ್ಲಿಂ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಸುಮಾರು 5 ಪ್ರತಿಶತದಷ್ಟು ಮುಸ್ಲಿಂ ಮತದಾರರು ಇತರ ಪಕ್ಷಗಳ ಪರವಾಗಿ ನಿಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement