ಕೊಚ್ಚಿ:ಮಾಲಿವುಡ್ ಸಿನಿಮಾರಂಗದ ನಟಿಯೊಬ್ಬರು ಸೋಮವಾರ(ಅಕ್ಟೋಬರ್ 30 ರಂದು) ತನ್ನ ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕೇರಳದ ತಿರುವನಂತಪುರಂನ ಕರಿಯಂನಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ನಟಿ ರೆಂಜೂಷಾ ಮೆನನ್ (35) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
.ಕಳೆದ ಕೆಲ ಸಮಯದಿಂದ ನಟಿ ರೆಂಜೂಷಾ ಮೆನನ್ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ರೆಂಜುಶಾ ಈ ಫ್ಲ್ಯಾಟ್‌ನಲ್ಲಿ ಪತಿ ಮನೋಜ್ ಜೊತೆ ವಾಸವಿದ್ದರು. ಪ್ರಾಥಮಿಕ ಮಾಹಿತಿ ಆಧರಿಸಿ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿರುವ ಪೊಲೀಸರು, ಸಾವಿನ ಸುತ್ತ ಘಟನಾವಳಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಸಿನಿಮಾರಂಗ ಮಾತ್ರವಲ್ಲದೆ ಕಿರುತೆರೆಯಲ್ಲೂ ಅವರು ಬಣ್ಣ ಹಚ್ಚಿದ್ದರು. ಧಾರಾವಾಹಿಗಳಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಕೊಚ್ಚಿ ಮೂಲದ ನಟಿ ಟಿವಿ ಕಾರ್ಯಕ್ರಮಗಳ ನಿರೂಪಕಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದರು. ‘ಸ್ತ್ರೀ’ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು. ನಂತರ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಅವರು, ‘ಸ್ತ್ರೀ’, ‘ನಿಜಾಲಟ್ಟಂ’, ‘ಮಗಳುದೆ ಅಮ್ಮ’ ಮತ್ತು ‘ಬಾಲಾಮಣಿ’ ಮುಂತಾದ ಧಾರಾವಾಹಿಗಳು ಹಾಗೂ ‘ಸಿಟಿ ಆಫ್ ಗಾಡ್’, ‘ಬಾಂಬೆ ಮಾರ್ಚ್ 12’, ‘ಲಿಸಮ್ಮಾಯುಡೆ ವೀಡು’, ‘ಅದ್ಭುತ ದ್ವೀಪ್’, ಮತ್ತು ‘ಕಾರ್ಯಸ್ಥಾನ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು. ಹಲವು ಧಾರಾವಾಹಿಗಳಲ್ಲಿ ನಿರ್ಮಾಪಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ. ವೃತ್ತಿಪರ ಭರತನಾಟ್ಯ ಕಲಾವಿದೆಯೂ ಆಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ