ವೀಡಿಯೊ | ಅಂಕೋಲಾದಲ್ಲಿ ಬೃಹತ್‌ ಕಾಳಿಂಗ ಸರ್ಪ ಸೆರೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೃಷ್ಣಾಪುರದಲ್ಲಿ ಬೃಹತ್‌ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಗಿದೆ.
ಅಂಕೋಲಾದ ಕೃಷ್ಣಾಪುರದಲ್ಲಿ ಪ್ರಶಾಂತ ನಾಯಕ ಎಂಬವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪ (King Cobra) ಕಾಣಿಸಿಕೊಂಡಿತ್ತು. ಮನೆಯವರು ಕೂಡಲೇ ಸ್ಥಳೀಯ ಉರಗ ತಜ್ಞ ಮಹೇಶ ನಾಯ್ಕ ಎಂಬವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಅವರು ಗಿಡಗಂಟಿಗಳ ನಡುವೆ ಅವಿತುಕೊಂಡಿದ್ದ ಹಾವಿನ ಬಾಲ ಹಿಡಿದು ನಿಧಾನವಾಗಿ ಹೊರಗೆಳೆದಾಗ ಅದು ಬೃಹತ್‌ ಕಾಳಿಂಗ ಸರ್ಪ ಎಂದು ಅಲ್ಲಿದ್ದವರಿಗೆ ಗೊತ್ತಾಯಿತು. ಈ ಕಾಳಿಂಗ ಸರ್ಪವು ಬರೊಬ್ಬರಿ 13 ಅಡಿ ಉದ್ದವಾಗಿದೆ.

ಈ ಕಾಳಿಂಗ ಸರ್ಪ ಪ್ರಶಾಂತ ನಾಯಕ ಎನ್ನುವವರ ಮನೆಯ ಆವರಣದ ಪೊದೆಯೊಂದರಲ್ಲಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಇದು ಹೆಬ್ಬಾವೆಂದು ಭಾವಿಸಿದ ಮನೆಯವರು ಉರಗ ಸಂರಕ್ಷಕ ಮಹೇಶ ನಾಯ್ಕ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ತಕ್ಷಣವೇ ಅವರು ತಮ್ಮ ಮಗ ಗಗನ್‌ ನಾಯ್ಕ ಜೊತೆ ಆಗಮಿಸಿದರು. ಪೊದೆಯಲ್ಲಿ ಅಡಗಿಕೊಂಡಿದ್ದ ಹಾವಿನ ಬಾಲವನ್ನು ಹಿಡಿದು ಎಳೆದಾಗ ಅದು ಸಂಪೂರ್ಣವಾಗಿ ಹೊರಬಂದಾಗಲೇ ಅಲ್ಲಿದ್ದವರಿಗೆ ಅದು ಕಾಳಿಂಗ ಸರ್ಪ ಎಂಬುದು ಗೊತ್ತಾಯಿತು. ಅತ್ಯಂತ ವಿಷಕಾರಿ ಹಾವಾದ ಇದನ್ನು ಕಂಡು ಕ್ಷಣಕಾಲ ಹೌಹಾರಿದರು. ಈ ಹಾವನ್ನು ಸೆರೆ ಹಿಡಿದ ನಂತರ ಮಹೇಶ ನಾಯ್ಕ ಅವರು ಸ್ಥಳೀಯ ಯುವಕ ಸಂದೀಪ ನಾಯ್ಕ ಅವರ ಸಹಾಯದಿಂ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ಇತ್ತೀಚೆಗಷ್ಟೇ ಜಿಲ್ಲೆಯ ಕಾರವಾರದ ಮನೆಯೊಂದರಲ್ಲಿ ಅಪರೂಪದ ತೋಳ ಹಾವು ಪತ್ತೆಯಾಗಿತ್ತು. ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಎಚ್ಚರಿಕೆಯಿಂದ ಹಾವನ್ನು ಡಬ್ಬವೊಂದರಲ್ಲಿ ಸೆರೆ ಹಿಡಿದು ರಕ್ಷಿಸಿದ್ದಾರೆ.
ಕೆಲವು ದಿನಗಳ ಹಿಂದೆ ಶಿರಸಿ ತಾಲೂಕಿನಲ್ಲಿ ಮನೆಯಂಗಳದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ನಂತರ ಅದನ್ನು ಉರಗ ತಜ್ಞ ಪ್ರಶಾಂತ ಹುಲೇಕಲ್‌ ಅವರು ಹಿಡಿದು ಕಾಡಿಗೆ ಬಿಟ್ಟಿದ್ದರು.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement