ಮಹಿಳೆಯರ ಕುರಿತು ಹೇಳಿಕೆ: ಕ್ಷಮೆ ಯಾಚಿಸಿದ ಬಿಹಾರ ಸಿಎಂ

ಪಾಟ್ನಾ : ಮಹಿಳೆಯರ ಕುರಿತು ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಕ್ಷಮೆ ಯಾಚಿಸಿದ್ದಾರೆ.
ತನ್ನ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ ಹೇಳಿಕೆಯಲ್ಲಿ ಏನಾದರು ತಪ್ಪಾಗಿದ್ದರೆ, ಯಾರ ಮನಸ್ಸಿಗಾದರು ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಹಾಗೂ ಹೇಳಿಕೆ ಹಿಂಪಡೆಯುತ್ತೇನೆ” ಎಂದು ಹೇಳಿದ್ದಾರೆ.
ನನ್ನ ಮಾತುಗಳು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣ ಅಗತ್ಯ ಎಂದು ಸದಾ ಹೇಳಿಕೊಂಡು ಬಂದಿದ್ದೇನೆ. ನಾನು ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿಯ ಪರ ನಿಂತಿದ್ದೇನೆ ಎಂದು ಹೇಳಿದ್ದಾರೆ.
ಮಹಿಳೆಯರು ಶಿಕ್ಷಣ ಪಡೆದರೆ ಅವರು ತನ್ನ ಲೈಂಗಿಕತೆಯನ್ನು ತಡೆಯಬಲ್ಲರು. ಈ ಮೂಲಕ ಜನಸಂಖ್ಯೆ ನಿಯಂತ್ರಣ ಮಾಡಬಹುದು. ಜನಸಂಖ್ಯೆ ನಿಯಂತ್ರಣಕ್ಕೆ ಮಹಿಳೆಯರ ಶಿಕ್ಷಣ ಅಗತ್ಯ ಎಂದು ನಿತೀಶಕುಮಾರ ಮಂಗಳವಾರ (ನ.7) ವಿಧಾನಸಭೆಯಲ್ಲಿ ಮಾತನಾಡುವಾಗ ಹೇಳಿದ್ದರು.
ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಿತೀಶಕುಮಾರ ಮಹಿಳೆಯರ ಲೈಂಗಿಕತೆ ಬಗ್ಗೆ ಮಾತನಾಡಿ ರಾಜ್ಯದ ಮಹಿಳಯರು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಅನೇಕರು ಕಿಡಿ ಕಾರಿದ್ದರು. ತನ್ನ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ನಿತೀಶಕುಮಾರ ಕ್ಷಮೆ ಯಾಚಿಸಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement