ಅಮೆರಿಕಾದಲ್ಲಿ ಹಮಾಸ್​ ವಿರುದ್ಧ ಬೃಹತ್‌ ರ‍್ಯಾಲಿ : ಸುಮಾರು 30 ಲಕ್ಷ ಜನರು ಭಾಗಿ

ವಾಷಿಂಗ್ಟನ್: ಅಮೆರಿಕಾ ಇತಿಹಾಸದಲ್ಲಿಯೇ ಇಸ್ರೇಲ್ ಪರವಾದ ಅತಿ ದೊಡ್ಡ ರ‍್ಯಾಲಿ ಮಂಗಳವಾರ ನಡೆಯಿತು. ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಬಿಗಿ ಭದ್ರತೆ ನಡುವೆ ನಡೆದ ಈ ರ‍್ಯಾಲಿಯಲ್ಲಿ 30 ಲಕ್ಷ ಜನರು ಭಾಗವಹಿಸಿದ್ದರು.
ಅಕ್ಟೋಬರ್ 7 ರ.ದು ಹಮಾಸ್​ ಉಗ್ರರು ದಾಳಿ ನಡೆಸಿದ ಸಂದರ್ಭ ವಿದೇಶಿಯರೂ ಸೇರಿದಂತೆ ಹಮಾಸ್‌ ಗುಂಪು ಇಸ್ರೇಲ್​ನ 240 ಜನರನ್ನು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ‘ನೆವರ್ ಎಗೇನ್’ ಎಂಬ ಘೋಷಣೆ ಕೂಗಿ ಉಗ್ರರಿಗೆ ಎಚ್ಚರಿಕೆ ನೀಡಲಾಯಿತು.
ಸ್ಥಳೀಯ ಯಹೂದಿ ಒಕ್ಕೂಟಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಇಸ್ರೇಲಿ ವಲಸಿಗ ಗುಂಪುಗಳು ಮತ್ತು ಯಹೂದಿ ಸಮುದಾಯ ಕೇಂದ್ರಗಳು ರ‍್ಯಾಲಿ ಆಯೋಜಿಸಿದ್ದವು. ಅಮೆರಿಕನ್ನರು ಬೃಹತ್​ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಹಮಾಸ್ ದಾಳಿ ನಂತರ ಇಸ್ರೇಲ್ ಸಮರ ಸಾರಿದೆ. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಯುದ್ಧ ನಡೆಯುತ್ತಿದ್ದು, 11,000 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದು, 2,700 ಮಂದಿ ನಾಪತ್ತೆಯಾಗಿದ್ದಾರೆ. ಅಕ್ಟೋಬರ್‌ 7ರಂದು ನಡೆದ ಹಮಾಸ್‌ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,200 ಜನರು ಸಾವಿಗೀಡಾಗಿದ್ದಾರೆ. 240 ಜನರನ್ನು ಹಮಾಸ್​ ಉಗ್ರರು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಶ್ರಮಿಸುತ್ತಿವೆ. ಹೀಗಾಗಿ ಗಾಜಾಕ್ಕೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ರ‍್ಯಾಲಿ ನಡೆಸಲಾಯಿತು.
ಯಹೂದಿ ವಿರೋಧಿ ಪ್ರವೃತ್ತಿ ನಿಲ್ಲಬೇಕು, ಒತ್ತೆಯಾಳುಗಳ ಬಿಡುಗಡೆ ಕೂಡಲೇ ಆಗಬೇಕು ಎಂದು ಪ್ರತಿಭಟನಾಕಾರರು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗಿದರು.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement