ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸುವ ಗಡುವನ್ನು ಫೆಬ್ರವರಿ 17 ರವರೆಗೆ ವಿಸ್ತರಿಸಿದ ಸರ್ಕಾರ

ಬೆಂಗಳೂರು: ಹೆಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್‌ ಅಳವಡಿಸಲು ನಿಗದಿ ಮಾಡಿದ್ದ ಗಡುವನ್ನು ಸರ್ಕಾರ 2024ರ ಫೆಬ್ರವರಿ 17ರ ವರೆಗೆ ವಿಸ್ತರಿಸಿದೆ.
2019 ಏಪ್ರಿಲ್‌ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ (HSRP) ಅಳವಡಿಸುವುದಕ್ಕೆ ಈ ಮೊದಲು ನವೆಂಬರ್ 17ರ ಗಡುವನ್ನು ಸಾರಿಗೆ ಇಲಾಖೆ ನೀಡಿತ್ತು. ಈಗ ಈ ಗಡುವನ್ನು ವಿಸ್ತರಣೆ ಮಾಡಲಾಗಿದೆ.
ಕರ್ನಾಟಕದಲ್ಲಿ ಈವರೆಗೆ 2.30 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿದರೆ ಅಂದಾಜು 1.70 ಕೋಟಿ ವಾಹನಗಳಿವೆ. 2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿದ ಎಲ್ಲ ವಾಹನಗಳಿಗೆ ಡಿಲೆವರಿ ಮಾಡುವ ಹೊತ್ತಲ್ಲೇ ಡೀಲರ್‌ಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿ ಕೊಡ್ತಿದ್ದಾರೆ. ಇದಕ್ಕೂ ಮುಂಚೆ ಖರೀದಿ ಮಾಡಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಇರಲಿಲ್ಲ. ಇದಕ್ಕೆ ಹೋಲಿಸಿದರೆ ಎಚ್‌ಎಸ್‌ಆರ್‌ಪಿ ಅಳವಡಿಸುವ ವಿಚಾರದಲ್ಲಿ ವಾಹನ ಮಾಲೀಕರಲ್ಲಿ ಜಾಗೃತಿ ಇಲ್ಲದೇ ಇರುವುದು ಗೋಚರಿಸಿದೆ. ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆ ಕಾರ್ಯ ನಡೆಯದಿರುವುದರಿಂದಾಗಿ ವಾಹನ ಮಾಲಕರನ್ನು ದೃಷ್ಟಿಯಲ್ಲಿರಿಸಿಕೊಂಡು ಮತ್ತೊಂದು ಅವಕಾಶ ನೀಡಬೇಕು ಎನ್ನುವ ನಿರ್ಧಾರಕ್ಕೆ ಸಾರಿಗೆ ಇಲಾಖೆ ಬಂದಿದೆ. ಆದ್ದರಿಂದ 3 ತಿಂಗಳ ಮಟ್ಟಿಗೆ ಅವಧಿ ವಿಸ್ತರಣೆ ಮಾಡಿದೆ.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

ಹೆಚ್‌ಎಸ್‌ಆರ್‌ಪಿ ಹೊಸ ಪ್ಲೇಟ್ ಹಾಕಿಸುವುದು ಹೇಗೆ…?
ಕರ್ನಾಟಕದಲ್ಲಿ ಹೆಚ್‌ಎಸ್‌ಆರ್‌ಪಿ ಅಥವಾ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಸ್ ಅನ್ನು ಪಡೆಯಲು ಈ ರೀತಿ ಮಾಡಬಹುದು.
ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು.
ಬುಕ್‌ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಬೇಕು.
ನಂತರ ಅಲ್ಲಿ ಬೇಸಿಕ್ ವೆಹಿಕಲ್ ಮಾಹಿತಿ ಕೇಳಿರುವುದನ್ನು ಭರ್ತಿ ಮಾಡಬೇಕು.
ಬಳಿಕ ಡೀಲರ್ ಸ್ಥಳವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.
ಹೆಚ್‌ಎಸ್‌ಆರ್‌ಪಿಯನ್ನು ಫಿಕ್ಸ್ ಮಾಡುವುದಕ್ಕಾಗಿ ಡೀಲರ್‌ ಲೊಕೇಶನ್ ಸೆಲೆಕ್ಟ್ ಮಾಡಬೇಕು.
ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement