ಕ್ರಿಕೆಟ್‌ ವಿಶ್ವಕಪ್ 2023 : ʼಪ್ಲೇಯರ್ ಆಫ್ ದಿ ಟೂರ್ನಮೆಂಟ್‌ʼ ರೇಸ್‌ನಲ್ಲಿ ನಾಲ್ವರು ಭಾರತದ ಆಟಗಾರರು ಸೇರಿ 9 ಆಟಗಾರರ ಹೆಸರು ಪ್ರಕಟಿಸಿದ ಐಸಿಸಿ

ನವದೆಹಲಿ: ಭಾನುವಾರ ಅಹಮದಾಬಾದಿನಲ್ಲಿ ನಡೆಯಲಿರುವ ಕ್ರಿಕೆಟ್‌ ವಿಶ್ವಕಪ್ 2023 ಅಂತಿಮ ಪಂದ್ಯದ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪಂದ್ಯಾವಳಿ ಆಟಗಾರ ಪ್ರಶಸ್ತಿ (Player of the tournament award)ಗಾಗಿ ಸ್ಪರ್ಧಿಗಳನ್ನು ಪ್ರಕಟಿಸಿದೆ. ಐಸಿಸಿ(ICC)ಯು ಪ್ರತಿಷ್ಠಿತ ಪ್ರಶಸ್ತಿಗಾಗಿ ಒಂಬತ್ತು ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಿದೆ.
ನಾಲ್ಕು ಸೆಮಿಫೈನಲಿಸ್ಟ್ ತಂಡಗಳ ಒಂಬತ್ತು ಆಟಗಾರರನ್ನು ಪ್ರಶಸ್ತಿಗಾಗಿ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ, ನಾಲ್ವರು ಭಾರತದ ಅಟಗಾರರು, ಇಬ್ಬರು ಆಸ್ಟ್ರೇಲಿಯನ್ನರು, ಇಬ್ಬರು ನ್ಯೂಜಿಲೆಂಡ್‌ ಮತ್ತು ಒಬ್ಬರು ದಕ್ಷಿಣ ಆಫ್ರಿಕಾದವರು ಇದ್ದಾರೆ. ಸ್ಟಾರ್-ಸ್ಟಡ್ ನಾಮನಿರ್ದೇಶಿತ ಪಟ್ಟಿಯಲ್ಲಿ, ಭಾರತದ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಆಡಮ್ ಝಂಪಾ, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ, ಡೆರಿಲ್ ಮಿಚೆಲ್ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರು ಸಹ ಸ್ಥಾನ ಪಡೆದಿದ್ದಾರೆ.

ನಾಮನಿರ್ದೇಶಿತ ಪಟ್ಟಿಯಲ್ಲಿ ಹೆಸರಿಸಲಾದ ಎಲ್ಲಾ ಆರು ಬ್ಯಾಟರ್‌ಗಳು ಪಂದ್ಯಾವಳಿಯಲ್ಲಿ ರೆಡ್-ಹಾಟ್ ಫಾರ್ಮ್‌ನಲ್ಲಿದ್ದಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 10 ಪಂದ್ಯಗಳಲ್ಲಿ 711 ರನ್ ಗಳಿಸಿ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಕ್ವಿಂಟನ್ ಡಿ ಕಾಕ್ 594 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ, ನಂತರ ರಚಿನ್ ರವೀಂದ್ರ (578) ರನ್‌ಗಳು ಹಾಗೂ ಐದು ವಿಕೆಟ್‌ಗಳು, ಡೆರಿಲ್ ಮಿಚೆಲ್ (552) ಮತ್ತು ರೋಹಿತ್ ಶರ್ಮಾ ಅಗ್ರ ಐದು ರನ್ ಸ್ಕೋರರ್‌ಗಳ ಪಟ್ಟಿಯಲ್ಲಿದ್ದಾರೆ.
8 ಪಂದ್ಯಗಳಲ್ಲಿ 398 ರನ್ ಗಳಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ರನ್-ಸ್ಕೋರಿಂಗ್ ಚಾರ್ಟ್‌ನಲ್ಲಿ ಸ್ವಲ್ಪ ಕೆಳಗಿದ್ದಾರೆ ಆದರೆ ಪಂದ್ಯಾವಳಿಯಲ್ಲಿ ಅವರ ಆಕ್ರಮಣವು ಈವೆಂಟ್‌ನಲ್ಲಿ ಆಸ್ಟ್ರೇಲಿಯಾದ ಯಶಸ್ಸಿಗೆ ಕೊಡುಗೆ ನೀಡುವಲ್ಲಿ ಅವರನ್ನು ಎರಡನೇ ಸ್ಥಾನದಲ್ಲಿರಿಸುತ್ತದೆ. ಜೊತೆಗೆ ಐದು ವಿಕೆಟ್‌ ಸಹ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

ಬುಮ್ರಾ, ಶಮಿ ಮತ್ತು ಝಂಪಾ ಪಟ್ಟಿಯಲ್ಲಿ…
ಬೌಲರ್‌ ಗಳ ಪೈಕಿ ಭಾರತದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಆಸ್ಟ್ರೇಲಿಯಾದ ಆಡಮ್ ಝಂಪಾ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೌಲರ್‌ಗಳು. ಶಮಿ ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್-ಟೇಕರ್ ಆಗಿದ್ದಾರೆ – ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆದರೆ, ಝಂಪಾ 10 ಪಂದ್ಯಗಳಲ್ಲಿ 22 ವಿಕೆಟ್‌ ಪಡೆದಿದ್ದಾರೆ. ಬುಮ್ರಾ ಅವರ ಅತ್ಯುತ್ತಮ ರನ್‌ ರೇಟ್‌ ಮತ್ತು ವಿಕೆಟ್ ಕಬಳಿಸುವ ಸಾಮರ್ಥ್ಯ ಅವರನ್ನು ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯನ್ನಾಗಿ ಮಾಡುತ್ತದೆ. ಅವರು 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಹೊಂದಿದ್ದಾರೆ ಮತ್ತು ಪಂದ್ಯಾವಳಿಯಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement