ಉಡುಪಿಯಲ್ಲಿ ನಾಲ್ವರ ಕೊಲೆ ಪ್ರಕರಣ; ಫೇಸ್​​ಬುಕ್​ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದವನ ವಿರುದ್ಧ ಪ್ರಕರಣ ದಾಖಲು

ಉಡುಪಿ : ಉಡುಪಿ ಸಮೀಪದ ನೇಜಾರಿನ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬ ಫೇಸ್​​ಬುಕ್​ನಲ್ಲಿ ಪ್ರಚೋದನಾಕಾರಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದ ಕಾರಣಕ್ಕೆ ಆತನ ವಿರುದ್ಧ
ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕುಟುಂಬದ ಹಂತಕನನ್ನು ‘ಮುಗಿಸುವ’ ಅವಕಾಶ ಕೈತಪ್ಪಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದಕ್ಕಾಗಿ ಜಿಲ್ಲೆಯ ಹಫೀಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಶಿವಮೊಗ್ಗದ ಹಫೀಜ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.

ಆತನ ವಿರುದ್ಧ ಐಪಿಸಿ ಸೆಕ್ಷನ್ 155 (ಗಲಭೆ ನಡೆದ ವ್ಯಕ್ತಿಯ ಹೊಣೆಗಾರಿಕೆ) ಮತ್ತು 505 (2) (ನಿರ್ದಿಷ್ಟ ಉದ್ದೇಶದಿಂದ ಸುಳ್ಳು ಹೇಳಿಕೆ ಅಥವಾ ಮಾಹಿತಿ ನೀಡುವುದು ಅಥವಾ ಪ್ರಸಾರ ) ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯ ನೇಜಾರು ನಿವಾಸಿಗಳು ಯಾವುದೇ ಸಿದ್ಧತೆಯಿಲ್ಲದೆ ಕೊಲೆ ಆರೋಪಿ ಪ್ರವೀಣ ಚೌಗಲೆಯನ್ನು ಹತ್ಯೆ ಮಾಡುವ ಸುಲಭದ ಅವಕಾಶ ಕಳೆದುಕೊಂಡಿದ್ದಾರೆ ಎಂದು ಆರೋಪಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾನೆ.
ಈ ಸಂಬಂಧ ಉಡುಪಿ ಸೈಬರ್, ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಅಂಬಾರಿ ಹೊತ್ತಿದ್ದ ಆನೆ ಅರ್ಜುನನಿಗೆ ಭಾವಪೂರ್ಣ ವಿದಾಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement