ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ, ಅಮಾನತು ಪ್ರಶ್ನಿಸಿ ಕೋರ್ಟಿಗೆ ಹೋಗ್ತೇನೆ: ಸಿಎಂ ಇಬ್ರಾಹಿಂ

ಬೆಂಗಳೂರು: ಜೆಡಿಎಸ್ ಪಕ್ಷದ ಅಮಾನತುಗೊಂಡಿರುವ ನಾಯಕ ಸಿ.ಎಂ.ಇಬ್ರಾಹಿಂ ಅವರು ತಾವು ಈಗಲೂ ಜೆಡಿಎಸ್ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದು, ತಮ್ಮ ಅಮಾನತು ನಿರ್ಧಾರದ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಉಳಿಯುತ್ತಾರೆಯೇ ಎಂಬುದು ಡಿಸೆಂಬರ್ 9 ರಂದು ಗೊತ್ತಾಗಲಿದೆ ಎಂದು ಹೇಳಿರು. ನನ್ನನ್ನು ಪಕ್ಷದಿಂದ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಮತ್ತು ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿಯೂ ಇಬ್ರಾಹಿಂ ಹೇಳಿದ್ದಾರೆ. ಕುಮಾರಸ್ವಾಮಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಿದ್ದು ಮೊದಲ ತಪ್ಪು. ಅಮಾನತು ಮಾಡಲು ನನಗೆ ನೋಟಿಸ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ನಾನು ಈಗಲೂ ಜೆಡಿಎಸ್‌ನ ರಾಜ್ಯಾಧ್ಯಕ್ಷ, ದೇವೇ ಗೌಡ ಅವರು ರಾಷ್ಟ್ರೀಯ ಅಧ್ಯಕ್ಷರೇ. ಆದರೆ ರಾಷ್ಟ್ರೀಯ ಪರಿಷತ್ ಸದಸ್ಯರು ಮತ್ತು ರಾಜ್ಯಾಧ್ಯಕ್ಷರು ಅವರನ್ನು ತೆಗೆದುಹಾಕುತ್ತಾರೆಯೇ ಎಂಬ ಬಗ್ಗೆ  ಶೀಘ್ರವೇ ಗೊತ್ತಾಗಲಿದೆ ಎಂದು ಹೇಳಿದರು.
ನಾನು ದೇವೇಗೌಡರಿಗೆ ಮನವಿ ಮಾಡುತ್ತೇನೆ. ನಿಮಗೆ 90 ವರ್ಷ, ಬಿಜೆಪಿ ಜೊತೆ ಮೈತ್ರಿ ನಿರ್ಧಾರ ಮಾಡಬೇಡಿ. ನಿಮ್ಮ ಮಗನ ಸಲುವಾಗಿ, ನೀವು ನಿಮ್ಮ ಇಡೀ ಜೀವನದಲ್ಲಿ ಪಾಲಿಸಿದ ತತ್ವಗಳನ್ನು ಬಲಿಕೊಡಬೇಡಿ. ರಾಮ್‌ವಿಲಾಸ್ ಪಾಸ್ವಾನ್ ಮತ್ತು ಶರದ್ ಯಾದವ್ ಅವರು ದೂರ ಹೋದಾಗಲೂ ನೀವು ನಿಮ್ಮ ಸಿದ್ಧಾಂತದ ಮೇಲೆ ನಿಂತಿದ್ದೀರಿ ಮತ್ತು 1999 ರಲ್ಲಿ ಜನತಾ ದಳದ ವಿಭಜನೆಯ ನಂತರ ಜನತಾ ದಳ ಸೆಕ್ಯುಲರ್ ಅಸ್ತಿತ್ವಕ್ಕೆ ಬಂದಿತು ಎಂದು ನೆನಪಿಸಿದ್ದಾರೆ.

ಪ್ರಮುಖ ಸುದ್ದಿ :-   ವಂಚನೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಿಂದ ಚೈತ್ರಾ ಬಿಡುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement