ಸ್ಟಾಪ್ ಕ್ಲಾಕ್ ನಿಯಮ ಜಾರಿಗೆ ತಂದ ಐಸಿಸಿ : ಬೌಲಿಂಗ್ ತಡವಾದರೆ 5 ರನ್ ದಂಡ….!

ಸ್ಟಾಪ್ ಕ್ಲಾಕ್ ಎಂಬ ಹೊಸ ನಿಯಮವನ್ನು ಐಸಿಸಿ ಜಾರಿಗೆ ತಂದಿದೆ. ಅಹಮದಾಬಾದ್​ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ನಿಯಮಗಳನ್ನು ತರಲಾಗುತ್ತದೆ ಮತ್ತು ಏಕದಿನ ಹಾಗೂ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಬಳಸಲಾಗುವುದು ಎಂದು ಮಾಹಿತಿ ನೀಡಿದೆ.
ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯ (ODI) ಮತ್ತು T20 ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ತಂಡಗಳು ಇನಿಂಗ್ಸ್‌ನಲ್ಲಿ ಮೂರನೇ ಸಲ ಮುಂದಿನ ಓವರ್‌ ಬೌಲಿಂಗ್ ಮಾಡುವ 60 ಸೆಕೆಂಡ್‌ಗಳ ( ಒಂದು ನಿಮಿಷ) ಮಿತಿಯನ್ನು ಮೀರಿದರೆ ಐದು ರನ್‌ಗಳ ದಂಡವನ್ನು ವಿಧಿಸಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ಮಂಗಳವಾರ ತಿಳಿಸಿದೆ.

ಇದನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. “ಸೆಪ್ಟೆಂಬರ್‌ 2023 ರಿಂದ ಏಪ್ರಿಲ್ 2024 ರವರೆಗೆ ಪುರುಷರ ODI ಮತ್ತು T20I ಕ್ರಿಕೆಟ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ಟಾಪ್ ಕ್ಲಾಕ್‌ ಪರಿಚಯಿಸಲು ಐಸಿಸಿಯ ಸಿಇಸಿ(CEC) ಸಮ್ಮತಿಸಿದೆ. ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ನಿಯಂತ್ರಿಸಲು ಗಡಿಯಾರವನ್ನು ಬಳಸಲಾಗುತ್ತದೆ. “ಬೌಲಿಂಗ್ ತಂಡವು ಹಿಂದಿನ ಓವರ್ ಮುಗಿದ 60 ಸೆಕೆಂಡುಗಳ ಒಳಗೆ ಮುಂದಿನ ಓವರ್ ಅನ್ನು ಬೌಲ್ ಮಾಡಬೇಕು. ಇನ್ನಿಂಗ್ಸ್‌ನಲ್ಲಿ ಮೂರನೇ ಬಾರಿ ಇದಕ್ಕಿಂತ ತಡ ಮಾಡುವುದು ಸಂಭವಿಸಿದರೆ 5 ರನ್ ಪೆನಾಲ್ಟಿ ವಿಧಿಸಲಾಗುತ್ತದೆ” ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement