ಭಾರತ ವಿಶ್ವಕಪ್ ಗೆದ್ದಿದ್ದರೆ ಅದು ಕ್ರಿಕೆಟ್‌ ಆಟಕ್ಕೆ ದುಃಖದ ಕ್ಷಣವಾಗುತ್ತಿತ್ತು : ಭಾರತದ ವಿರುದ್ಧ ನಂಜು ಉಗುಳಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್

ಪದೇ ಪದೇ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಈಗ ಮತ್ತೊಮ್ಮೆ ಭಾರತ ವಿರುದ್ದ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ಬಗ್ಗೆ ಹೇಳಿಕೆ ನೀಡಿದ ನಂತರ ತಮ್ಮದೇ ದೇಶದ ಆಟಗಾರರಿಂದ ಕುಟುಟೀಕೆ ಎದುರಿಸಿದ ನಂತರ ಕ್ಷಮೆಯಾಚಿಸಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಮತ್ತೊಂದು ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಮುಗಿದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್‌ನಲ್ಲಿ ಭಾರತದ ಸೋಲು ಕ್ರಿಕೆಟ್‌ಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾರತದ ಸೋಲಿನ ನಂತರ, ಕ್ರಿಕೆಟ್ ಗೆದ್ದಿತು ಮತ್ತು ಭಾರತ ಸೋತಿತು. ಭಾರತ ವಿಶ್ವಕಪ್ ಗೆದ್ದಿದ್ದರೆ, ಕ್ರಿಕೆಟ್‌ ಆಟಕ್ಕೆ ಇದು ತುಂಬಾ ದುಃಖದ ಕ್ಷಣವಾಗಿತ್ತು. ಅವರು ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು, ಮತ್ತು ಇದುವರೆಗೆ ಯಾವುದೇ ICC ಫೈನಲ್‌ಗೆ ಅಂತಹ ಕೆಟ್ಟ ಪಿಚ್ ಅನ್ನು ನಾನು ನೋಡಿಲ್ಲ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.

“ಒಂದು ವೇಳೆ ಭಾರತ ವಿಶ್ವಕಪ್ ಗೆದ್ದಿದ್ದರೆ, ನಮಗೆ ನಿಜಕ್ಕೂ ಬೇಸರವಾಗುತ್ತಿತ್ತು. ಯಾಕೆಂದರೆ ಅವರು ತವರಿನ ಮೈದಾನದ ಲಾಭವನ್ನು ಬಳಸಿಕೊಂಡಂತೆ ಆಗುತ್ತಿತ್ತು. ಒಂದು ಸೆಮಿಫೈನಲ್ ಪಂದ್ಯದಲ್ಲಿ ಅವರು 400 ರನ್ ಬಾರಿಸಿದರೆ, ಎದುರಾಳಿ ತಂಡ 350 ರನ್ ಗಳಿಸಿತು. ಅದೇ ರೀತಿ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ 220-230 ರನ್‌ ಗಳಷ್ಟೇ ದಾಖಲಾದವು. ಇನ್ನು ಫೈನಲ್ ಪಂದ್ಯದಲ್ಲಿ 240 ರನ್ ದಾಖಲಾಯಿತು. ಅದರರ್ಥ ಎಲ್ಲೋ ಏನೋ ಯಡವಟ್ಟಾಗಿದೆ ಎಂದು. ಪಿಚ್‌ಗಳು ಹಾಗೂ ವಾತಾವರಣಗಳು ಯಾವಾಗಲೂ ನ್ಯಾಯಸಮ್ಮತವಾಗಿರಬೇಕು. ಪಿಚ್‌ಗಳು ಯಾವಾಗಲೂ ಎರಡು ತಂಡಗಳು ಸಮಬಲದ ಹೋರಾಟ ನೀಡುವಂತೆ ನಿರ್ಮಾಣ ಮಾಡಬೇಕು. ಒಂದು ವೇಳೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರೆ ಆಗ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು” ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಟಾಸ್ ಸೋತ ನಂತರ ಟೀಂ ಇಂಡಿಯಾಗೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಯಿತು. ಭಾರತದ ಬ್ಯಾಟರ್‌ಗಳು ಒಣ ಮೇಲ್ಮೈಯಲ್ಲಿ ತಮ್ಮ ಸಮಯವನ್ನು ಕಂಡುಹಿಡಿಯಲು ಹೆಣಗಾಡಿದರು, ಅವರು 240 ರನ್‌ ಗಳಿಸಲಷ್ಟೇ ಶಕ್ತರಾದರು. ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ ಕಳೆದುಕೊಂಡು ನಿಗದಿತ ಗುರಿಯನ್ನು ತಲುಪಿ ಆರನೇ ಬಾರಿಗೆ ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement