ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಿಸಿಕೊಂಡ ಸಂಸದ ಪ್ರತಾಪ ಸಿಂಹ

ಮೈಸೂರು : ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರು ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಇಂಗ್ಲಿಷ್‌ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ Prathap simha ಎಂಬ ಹೆಸರನ್ನು ಅವರು Pratap Simmha ಎಂದು ಬದಲಾವಣೆ ಮಾಡಿಕೊಂಡಿರುವದಾಗಿ ಅಫಿಡೆವಿಟ್‌ ಮೂಲಕ ಘೋಷಿಸಿಕೊಂಡಿದ್ದಾರೆ.
ಕೆಲವು ರಾಜಕಾರಣಿಗಳು ಸಂಖ್ಯಾ ಶಾಸ್ತ್ರದ ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ಮೊದಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ತಮ್ಮ ಹೆಸರನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು. ಅವರು ಯಡ್ಯೂರಪ್ಪ (Yeddyurappa) ಎಂದು ಇದ್ದ ಹೆಸರನ್ನು ಯಡಿಯೂರಪ್ಪ (Yediyurappa) ಎಂದು ಬದಲಾಯಿಸಿಕೊಂಡಿದ್ದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸೇರಿದಂತೆ ಹಲವು ರಾಜಕಾರಣಿಗಳು ಸಂಖ್ಯಾಶಾಸ್ತ್ರದ ಪ್ರಕಾರ ಬದಲಿಸಿಕೊಂಡ ಉದಾಹರಣೆ ಇದೆ.
ಈಗ ಸಂಸದ ಪ್ರತಾಪ ಸಿಂಹ ಕೂಡ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಇಂಗ್ಲೀಷ್ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement