ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ತುರುಸಿನ ಸ್ಪರ್ಧೆಯಲ್ಲಿ ಬಿಜೆಪಿ ಮುಂದೆ ಎಂದ ಹೆಚ್ಚಿನ ಎಕ್ಸಿಟ್‌ ಪೋಲ್‌ಗಳು

ನವದೆಹಲಿ : ಭಾರತದ ಚುನಾವಣಾ ಆಯೋಗವು (ಇಸಿಐ) ದೇಶದ ಐದು ರಾಜ್ಯಗಳಾದ ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣಗಳಲ್ಲಿ 2023 ರ ರಾಜ್ಯ ವಿಧಾನಸಭಾ ಚುನಾವಣೆಗಳ ಮತದಾನ ಪೂರ್ಣಗೊಂಡಿದ್ದು ಡಿಸೆಂಬರ್ 3ರಂದು ಫಲಿತಾಂಶಗಳು ಪ್ರಕಟವಾಗಲಿದೆ.
ಐದು ರಾಜ್ಯಗಳ ಎಕ್ಸಿಟ್ ಪೋಲ್‌ಗಳು ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ಅನುಕೂಲಕರ ಸಂಖ್ಯೆ ಸಿಗಲಿದೆ ಎಂದು ತೋರಿಸಿದರೆ ಮತ್ತು ಕಾಂಗ್ರೆಸ್‌ಗೆ ಎರಡು ರಾಜ್ಯಗಳಲ್ಲಿ ಅನುಕೂಲಕರ ಸಂಖ್ಯೆ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಬಹುತೇಕ ಎಲ್ಲ ಸಮೀಕ್ಷೆಗಳು ಮಿಜೊರಾಂನಲ್ಲಿ ಅತಂತ್ರ ಸ್ಥಿತಿಯಾಗಬಹುದು ಎಂದು ಹೇಳಿವೆ.
ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ಸರಳ ಬಹುಮತ ಪಡೆಯಲಿದೆ ಎಂದು ಹೇಳಿದರೆ ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ ಸರಳ ಬಹುಮತ ಪಡೆಯಬಹುದು ಎಂದು ಹೇಳಿದೆ. ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಪಕ್ಷವು 116 ಸ್ಥಾನಗಳಲ್ಲಿ ಗೆಲ್ಲಬೇಕು.
ಮಧ್ಯಪ್ರದೇಶ ಎಕ್ಸಿಟ್ ಪೋಲ್ಸ್ 2023:
ನ್ಯೂಸ್‌ 24 ಚಾಣಕ್ಯ
ಬಿಜೆಪಿ 151 ± 12 ಸ್ಥಾನಗಳು
ಕಾಂಗ್ರೆಸ್ 74 ± 12 ಸ್ಥಾನಗಳು
ಇತರರು 5 ± 4 ಸ್ಥಾನಗಳು
TV9 ಭಾರತ ವರ್ಷ
ಬಿಜೆಪಿ: 106-116
ಕಾಂಗ್ರೆಸ್: 111-121
ಇತರೆ: 0-6

ಪ್ರಮುಖ ಸುದ್ದಿ :-   ಸಾಲದ ಹಣ ಮರಳಿ ಕೊಡಲು ತಡವಾಗಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ : ಮನನೊಂದು ರೈತ ಆತ್ಮಹತ್ಯೆ

ರಿಪಬ್ಲಿಕ್‌ ಟಿವಿ
ಬಿಜೆಪಿ 118-130
ಕಾಂಗ್ರೆಸ್‌ 97-107
ದೈನಿಕ್ ಭಾಸ್ಕರ್ ಎಕ್ಸಿಟ್‌ ಪೋಲ್‌
ಬಿಜೆಪಿ: 95-115
ಕಾಂಗ್ರೆಸ್: 105-120

ಇಂಡಿಯಾ ಟುಡೆ ಎಕ್ಸಿಸ್‌ ಮೈ ಇಂಡಿಯಾ
ಬಿಜೆಪಿ 140-162
ಕಾಂಗ್ರೆಸ್‌ 68-90
ಇತರರು 0-3

ಪೋಲ್‌ಸ್ಟ್ರಾಟ್
ಬಿಜೆಪಿ 106-116
ಕಾಂಗ್ರೆಸ್‌ 106-116
ಇತರರು 0-8
ಮ್ಯಾಟ್ರಿಜ್:
ಬಿಜೆಪಿ 118-130
ಕಾಂಗ್ರೆಸ್‌ 97-107
ಇತರರು 0-2
ಜನ್ ಕಿ ಬಾತ್
ಬಿಜೆಪಿ 100-123
ಕಾಂಗ್ರೆಸ್‌ 102-125
ಇತರರು 0-5

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement