ನಿತ್ಯಾನಂದನ ʼಕೈಲಾಸʼದ ಜೊತೆ ಜ್ಞಾಪಕ ಪತ್ರಕ್ಕೆ ಸಹಿ : ಕೆಲಸ ಕಳೆದುಕೊಂಡ ಪರಾಗ್ವೆ ಅಧಿಕಾರಿ…!

ಅಸುನ್ಸಿಯಾನ್ : ಅಸ್ತಿತ್ವದಲ್ಲಿ ಇಲ್ಲದ ಕೈಲಾಶ ದೇಶದೊಂದಿಗೆ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ ನಂತರ ಪರಾಗ್ವೆಯ ಹಿರಿಯ ಅಧಿಕಾರಿಯೊಬ್ಬರು ಈ ವಾರ ಕೆಲಸ ಕಳೆದುಕೊಂಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಉದ್ದೇಶಿತ ಅಧಿಕಾರಿಗಳೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ ನಂತರ ಕೃಷಿ ಸಚಿವರ ಸಿಬ್ಬಂದಿಯ ಮುಖ್ಯಸ್ಥ ಹುದ್ದೆಯಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂದು ಅರ್ನಾಲ್ಡೊ ಚಮೊರೊ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೈಲಾಸ ದೇಶವು ದಕ್ಷಿಣ ಅಮೆರಿಕದ ದ್ವೀಪ ಎಂದು ಪರುಗ್ವೆ ಅಧಿಕಾರಿಗೆ ನಂಬಿಸಲಾಗಿತ್ತು.
ಅವರು (“ಅಧಿಕಾರಿಗಳು”) ಬಂದು ಪರಾಗ್ವೆಗೆ ಸಹಾಯ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರು ಹಲವಾರು ಯೋಜನೆಗಳನ್ನು ಪ್ರಸ್ತುತಪಡಿಸಿದರು, ನಾವು ಅವುಗಳನ್ನು ಕೇಳಿದ್ದೇವೆ ಎಂದ ಅವರು ಅದನ್ನು ನಂಬಿ ತಾವು ಮೂರ್ಖರಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ನಕಲಿ ದೇಶದ ಅಧಿಕಾರಿಗಳು ತಮ್ಮ ಸಚಿವ ಕಾರ್ಲೋಸ್ ಗಿಮೆನೆಜ್ ಅವರನ್ನು ಭೇಟಿಯಾದರು. ಅವರ ಉದ್ದೇಶ ತಿಳಿದಿರಲಿಲ್ಲ ಎಂದು ಚಮೊರೊ ಹೇಳಿದ್ದಾರೆ.
ಎರಡು ಪಕ್ಷಗಳು ಸಹಿ ಮಾಡಿದ ಜ್ಞಾಪಕ ಪತ್ರವು ಎರಡು “ದೇಶಗಳ” ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವುದನ್ನು ಕಲ್ಪಿಸಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಸಚಿವಾಲಯದ ಲೆಟರ್‌ಹೆಡ್ ಮತ್ತು ಅಧಿಕೃತ ಮುದ್ರೆಯೊಂದಿಗೆ ಜ್ಞಾಪಕ ಪತ್ರದಲ್ಲಿ ಚಮೊರೊ ಅವರು “ಕೈಲಾಸ ಯುನೈಟೆಡ್ ಸ್ಟೇಟ್ಸ್‌ನ ಸಾರ್ವಭೌಮ ಗೌರವಾನ್ವಿತ ನಿತ್ಯಾನಂದ ಪರಮಶಿವಂ” ಅವರನ್ನು ವಂದಿಸಿದ್ದಾರೆ ಮತ್ತು “ಹಿಂದೂ ಧರ್ಮ, ಮಾನವೀಯತೆ ಮತ್ತು ಪರಾಗ್ವೆ ಗಣರಾಜ್ಯಕ್ಕೆ ಅವರ ಕೊಡುಗೆಗಳನ್ನು” ಹೊಗಳಿದ್ದಾರೆ.
“ಪರಾಗ್ವೆ ಸರ್ಕಾರವು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವುದನ್ನು ಸಕ್ರಿಯವಾಗಿ ಅನ್ವೇಷಿಸುತ್ತದೆ ಮತ್ತು ವಿಶ್ವಸಂಸ್ಥೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಾರ್ವಭೌಮ ದೇಶವಾಗಿ ಅದರ ಪ್ರವೇಶವನ್ನು ಬೆಂಬಲಿಸುತ್ತದೆ” ಎಂದು ಜ್ಞಾಪಕ ಪತ್ರವು ಶಿಫಾರಸು ಮಾಡುತ್ತದೆ.
ಪರಾಗ್ವೆಯ ಮಾಧ್ಯಮಗಳು “ಪರಮಶಿವಂ” ವಾಸ್ತವದಲ್ಲಿ ಭಾರತೀಯ ಪ್ರಜೆ ಹಾಗೂ ತನ್ನ ದೇಶದಲ್ಲಿ ಮಾಡಿದ ಅಪರಾಧಗಳಿಗಾಗಿ ವಾಂಟೆಡ್‌ ವ್ಯಕ್ತಿಯಾಗಿದ್ದಾನೆ ಎಂದು ವರದಿ ಮಾಡಿದೆ. ಕೃಷಿ ಸಚಿವಾಲಯವು ಹೇಳಿಕೆಯಲ್ಲಿ “ಕಾರ್ಯವಿಧಾನದ ದೋಷಗಳು” ಎಂದು ವಿಷಾದಿಸಿದೆ ಮತ್ತು ಜ್ಞಾಪಕ ಪತ್ರವನ್ನು “ಅಧಿಕೃತವೆಂದು ಪರಿಗಣಿಸಲಾಗುವುದಿಲ್ಲ” ಎಂದು ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement