ಪತ್ನಿ ಜೊತೆ ಕಲ್ಲುಕಟ್ಟೆಯ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌

ಮೈಸೂರು: ಭಾರತದ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾದ ರಾಹುಲ್‌ ದ್ರಾವಿಡ್‌ ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯ ಆಯೋಜಿಸಿದ್ದ U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ತಮ್ಮ ಪತ್ನಿ ಜೊತೆ ಮೈಸೂರಿಗೆ ಬಂದಿದ್ದಾರೆ.
ಈ ಪಂದ್ಯಗಳು ಮೈಸೂರಿನ ಮಾನಸ ಗಂಗೋತ್ರಿಯ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯಾವಳಿಯಲ್ಲಿ ರಾಹುಲ್‌ ದ್ರಾವಿಡ್‌ ಪುತ್ರ ಸಮೀತ ದ್ರಾವಿಡ್‌ ಕರ್ನಾಟಕದ ಪರ ಆಡುತ್ತಿದ್ದಾರೆ. ಕರ್ನಾಟಕ ಮತ್ತು ಉತ್ತರಾಖಂಡ ನಡುವೆ ಪಂದ್ಯ ನಡೆಯುತ್ತಿದ್ದು ಅದನ್ನು ವೀಕ್ಷಿಸಲು ದ್ರಾವಿಡ್‌ ಆಗಮಿಸಿದ್ದಾರೆ. ಮಗನ ಆಟವನ್ನು ನೋಡಲು ಜನ ಸಾಮಾನ್ಯರಂತೆ ಕ್ರೀಡಾಂಗಣದ ಕಲ್ಲು ಹಾಸಿನ ಮೇಲೆ ರಾಹುಲ್‌ ದ್ರಾವಿಡ್‌ ಅವರು ಪತ್ನಿ ವಿಜೇತಾ ಜೊತೆ ಕುಳಿತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೈದಾನದ ಕಲ್ಲುಕಟ್ಟೆಯ ಮೇಲೆ ಕುಳಿತು ಅವರು ಪಂದ್ಯವನ್ನು ವೀಕ್ಷಿಸಿದರು. ಅವರ ಪುತ್ರ ಸಮೀತ್‌ ಅವರು 5 ಓವರ್ ಬೌಲಿಂಗ್ ಮಾಡಿದ ಸಮಿತ್ 11 ರನ್‌ಗಳನ್ನು (2 ಮೇಡನ್) ನೀಡಿದ್ದಾರೆ.
‘ಎಲ್ಲ ಅಪ್ಪಂದಿರಂತೆ ನಾನೂ ನನ್ನ ಮಗನ ಆಟ ನೋಡಲು ಬಂದಿದ್ದೇನೆ. ಇದರಲ್ಲಿ ವಿಶೇಷವೇನಿಲ್ಲ’ ಎಂದು ಪತ್ರಕರ್ತರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ಮೊದಲು ಬ್ಯಾಟ್‌ ಮಾಡಿದ ಉತ್ತರಾಖಂಡ್‌ 9 ವಿಕೆಟ್‌ ನಷ್ಟಕ್ಕೆ 232 ರನ್‌ ಕಲೆಹಾಕಿದೆ. 13 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಕುಸಿತ ಕಂಡ ಉತ್ತರಾಖಂಡ ತಂಡಕ್ಕೆ ನಾಯಕ ಆರವ್‌ ಮಹಾಜನ್‌ (127, 18×4) ಶತಕ ಬಾರಿಸಿ ಆಸರೆಯಾದರು. 82.7 ಓವರ್‌ಗಳವರೆಗೂ ಕ್ರೀಸಿನಲ್ಲಿ ಹೋರಾಟ ನಡೆಸಿದರು. ಅವರಿಗೆ ವಿಕೆಟ್‌ ಕೀಪರ್ ಸಂಸ್ಕಾರ್ ರಾವತ್ (43) ಕೈಜೋಡಿಸಿದರು. ಈ ಜೋಡಿಯ 94 ರನ್‌ಗಳ ಜೊತೆಯಾಟದಿಂದ ತಂಡ ಚೇತರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಉತ್ತರಾಖಂಡ 90 ವಿಕೆಟ್‌ಗೆ 9 ವಿಕೆಟ್‌ಗೆ 232 (ಆರವ್‌ ಮಹಾಜನ್‌ 127, ಸಂಸ್ಕಾರ್ ರಾವತ್ 43, ಯೋಗೇಶ್ 29, ಇಶಾನ್‌ ಎಸ್. 49ಕ್ಕೆ3, ಧೀರಜ್‌ ಗೌಡ 62ಕ್ಕೆ3, ಸಮರ್ಥ್‌ ಎನ್. 17ಕ್ಕೆ2).

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement